ETV Bharat / entertainment

ನಟಿ ಜಾನ್ವಿ ಕಪೂರ್​​ ಅಭಿನಯದ 'Good Luck Jerry' ಟ್ರೈಲರ್ ಬಿಡುಗಡೆ

author img

By

Published : Jul 14, 2022, 4:11 PM IST

Updated : Jul 14, 2022, 4:19 PM IST

ಜಾನ್ವಿ ಕಪೂರ್ ಅಭಿನಯದ ಮುಂಬರುವ ಚಿತ್ರ 'ಗುಡ್‌ಲಕ್ ಜೆರ್ರಿ' ಟ್ರೇಲರ್ ಗುರುವಾರ ಅನಾವರಣಗೊಂಡಿದೆ.

'GoodLuck Jerry' trailer out
GoodLuck Jerry ಟ್ರೈಲರ್ ಬಿಡುಗಡೆ

ಮುಂಬೈ: ಕಾಮಿಡಿ ಕ್ರೈಮ್ ಥ್ರಿಲ್ಲರ್ 'ಗುಡ್‌ಲಕ್ ಜೆರ್ರಿ' ಸಿನಿಮಾ ನಿರ್ಮಾಪಕರು ಅಂತಿಮವಾಗಿ ಚಿತ್ರದ ಟ್ರೈಲರ್​​ ಅನ್ನು ಹಂಚಿಕೊಂಡಿದ್ದಾರೆ. ಇನ್​​ಸ್ಟಾಗ್ರಾಮ್​ನಲ್ಲಿ ನಟಿ ಜಾನ್ವಿ ಕಪೂರ್ ನಟನೆಯ ಬಹುನಿರೀಕ್ಷಿತ ಟ್ರೇಲರ್​​ನನ್ನು ಅವರು ಪೋಸ್ಟ್​ ಮಾಡಿದ್ದಾರೆ. "ಫೈನಲಿ! ಮಿಲಿಯೇ ಜೆರ್ರಿ ಸೆ. ಔರ್ ಯಾದ್ ರಖಿಯೇ- ಹಮ್ ಜಿತ್ನೆ ದಿಖ್ತೇ ಹೈ, ಉತ್ನೆ ಹೈ ನಹೀ #ಗುಡ್‌ಲಕ್‌ಜೆರ್ರಿ ಜುಲೈ 29 ರಿಂದ @disneyplushotstar #TrailerOutNow ನಲ್ಲಿ ಸ್ಟ್ರೀಮಿಂಗ್" ಎಂದು ಬರೆದಿದ್ದಾರೆ.

ಟ್ರೈಲರ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಜಾನ್ವಿ ಮುಗ್ಧವಾಗಿ ಮತ್ತು ಉತ್ತಮವಾಗಿ ನಟಿಸಿದ್ದಾರೆ. ದೀಪಕ್ ಡೊಬ್ರಿಯಾಲ್ ಅವರ ಫನ್ನಿ ಒನ್ - ಲೈನರ್‌ಗಳು ಸಿನಿಮಾದಲ್ಲಿದ್ದು, ಪ್ರೇಕ್ಷಕರನ್ನು ರಂಜಿಸುವ ಎಲ್ಲ ಗುಣವನ್ನು ಹೊಂದಿದೆ. ಎರಡು ನಿಮಿಷಗಳ ನಲವತ್ತು ಸೆಕೆಂಡ್​​ನ ಟ್ರೈಲರ್ "ನಶಾ ಚಾಹೆ ಜೈಸಾ ಹೋ, ಹೋತಾ ಯೇ ಬೇಕಾರ್, ಶೇರ್ ತೋಡ್ತಾ, ಬಿಮಾರಿ ಲಾತಾ, ಕರ್ ದೇತಾ ಲಾಚಾರ್' ಎಂಬ ಟಿಪ್ಪಣಿಯೊಂದಿಗೆ ಪ್ರಾರಂಭವಾಗುತ್ತದೆ.

ಪಂಜಾಬ್ ಮೂಲದ, ಬಿಹಾರದ ಜಯ ಕುಮಾರಿ ಅಕಾ ಜೆರ್ರಿ ತನ್ನ ಕುಟುಂಬಕ್ಕೆ ಸಹಾಯ ಮಾಡಲು ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಾಳೆ. ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಗೆ ಸಹಾಯ ಮಾಡುವ ಸಲುವಾಗಿ, ಅವಳು ತಿಳಿಯದೇ ಡ್ರಗ್ ಮಾಫಿಯಾದ ಬಲೆಗೆ ಬೀಳುತ್ತಾಳೆ. ಈ ಚಿತ್ರವು ದಕ್ಷಿಣದ ನಟಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ತಮಿಳು ಸಿನಿಮಾ 'ಕೋಲಮಾವು ಕೋಕಿಲ'ದ ಅಧಿಕೃತ ಹಿಂದಿ ರಿಮೇಕ್ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: VIDEO.. ಪ್ರಭುದೇವ್​ - ಪವರ್ ಸ್ಟಾರ್ ಮಸ್ತ್ ಸ್ಟೆಪ್ ಹಾಕಿರುವ ಹಾಡಿನ ಮೇಕಿಂಗ್ ರಿವೀಲ್

ಜಾನ್ವಿಯ ಹೊರತಾಗಿ, ಚಿತ್ರದಲ್ಲಿ ನಟ ದೀಪಕ್ ಡೊಬ್ರಿಯಾಲ್ ಮತ್ತು ನಟ ಸುಶಾಂತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಸೇನ್ ನಿರ್ದೇಶಿಸಿದ, 'ಗುಡ್‌ಲಕ್ ಜೆರ್ರಿ' ಜುಲೈ 29, 2022 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಆನಂದ್ ಎಲ್ ರೈ ನಿರ್ಮಿಸಿರುವ ಈ ಚಿತ್ರವು 'ಗುಂಜನ್ ಸಕ್ಸೇನಾ' ನಟನ ಹಾಸ್ಯ ಪ್ರಾಕಾರಕ್ಕೆ ಮೊದಲ ಹೆಜ್ಜೆಯಾಗಿದೆ.

Last Updated :Jul 14, 2022, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.