ETV Bharat / entertainment

ಅಕ್ಕಿನೇನಿ ನಾಗೇಶ್ವರ್​ ರಾವ್ ಪಂಚಲೋಹ ಪ್ರತಿಮೆ ಉದ್ಘಾಟನೆ.. ಅಕ್ಕಿನೇನಿ ಕಟುಂಬ ಸೇರಿ ಟಾಲಿವುಡ್​ ಸೆಲೆಬ್ರಿಟಿಗಳು ಭಾಗಿ

author img

By ETV Bharat Karnataka Team

Published : Sep 20, 2023, 2:57 PM IST

Akkineni Nageswar Rao's statue: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ದಿ. ನಟ ಅಕ್ಕಿನೇನಿ ನಾಗೇಶ್ವರ್​ ರಾವ್ ಅವರ ಪಂಚಲೋಹದ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ.

Akkineni Nageswar Rao's statue
ಅಕ್ಕಿನೇನಿ ನಾಗೇಶ್ವರ್​ ರಾವ್ ಪಂಚಲೋಹದ ಪ್ರತಿಮೆ ಉದ್ಘಾಟನೆ

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ದಿ. ನಟ ಅಕ್ಕಿನೇನಿ ನಾಗೇಶ್ವರ್​ ರಾವ್ ಅವರ 100ನೇ ಜನ್ಮ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿ ಆಚರಿಸಲಾಗಿದೆ. ಟಾಲಿವುಡ್​​ ನಟರಾದ ನಾಗಾರ್ಜುನ, ನಾಗಚೈತನ್ಯ, ಅಖಿಲ್​ ಅಮಲ ಸೇರಿದಂತೆ ಇಡೀ ಅಕ್ಕಿನೇನಿ ಕುಟುಂಬ ಅನ್ನಪೂರ್ಣ ಸ್ಟುಡಿಯೋದಲ್ಲಿ ಸಮಾಗಮಗೊಂಡಿತ್ತು. ನಾಗೇಶ್ವರ್​ ರಾವ್ ಅವರ ಪಂಚಲೋಹದ ಪ್ರತಿಮೆಯನ್ನು ಉದ್ಘಾಟಿಸಿ, ಗೌರವ ಸಲ್ಲಿಸಲಾಯಿತು..

ಕಾರ್ಯಕ್ರಮದ ಫೋಟೋ, ವಿಡಿಯೋಗಳು ವೈರಲ್​: ಟಾಲಿವುಡ್​ ಸ್ಟಾರ್ಸ್ ಸಾಕ್ಷಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಅಕ್ಕಿನೇನಿ ನಾಗೇಶ್ವರ್​ ರಾವ್ ಅವರ ಪಂಚಲೋಹದ ಪ್ರತಿಮೆಯನ್ನು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉದ್ಘಾಟಿಸಿದರು. ದಕ್ಷಿಣ ಚಿತ್ರರಂಗದ ಕಲಾವಿದರಾದ ರಾಮ್​ ಚರಣ್​, ಜಯಸುಧಾ, ಮೋಹನ್​ ಬಾಬು, ಮಹೇಶ್​ ಬಾಬು, ನಮ್ರತಾ ಶಿರೋಡ್ಕರ್​​ ಸೇರಿದಂತೆ ಹಲವರು ಇಂದು ನಡೆದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗುತ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾರಂಭಕ್ಕೆ ಸಾಕ್ಷಿಯಾದ ಸೌತ್​ ಸ್ಟಾರ್ಸ್: ಸೋಷಿಯಲ್​ ಮೀಡಿಯಾ ಸುತ್ತುವರಿಯುತ್ತಿರುವ ಫೋಟೋ, ವಿಡಿಯೋಗಳಲ್ಲಿ ಆರ್​ಆರ್​ಆರ್​ ಸ್ಟಾರ್​ ರಾಮ್​ಚರಣ್​​, ಗುಂಟೂರು ಕಾರಂ ಸಿನಿಮಾದಲ್ಲಿ ಬ್ಯುಸಿಯಾಗಿರುವ ಮಹೇಶ್​ ಬಾಬು ಮತ್ತು ಮಹೇಶ್​ ಪತ್ನಿ ನಮ್ರತಾ ಶಿರೋಡ್ಕರ್​​ ಅವರನ್ನು ಕಾಣಬಹುದು. ನಾನಿ ಮತ್ತು ಆರ್​ಆರ್​ಆರ್​ ಖ್ಯಾತಿಯ ಎಸ್​ಎಸ್​ ರಾಜಮೌಳಿ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೊಮ್ಮಗ ನಾಗ ಚೈತನ್ಯರಿಂದ ಗೌರವ: ಅಕ್ಕಿನೇನಿ ನಾಗೇಶ್ವರ್​ ರಾವ್ ಅವರಿಗೆ ಗೌರವ ಸಲ್ಲಿಸಿದ ಮೊಮ್ಮಗ ನಾಗ ಚೈತನ್ಯ, ''ಅವರ ಚಿತ್ರಕಥೆ, ಸೃಜನಾತ್ಮಕತೆ, ಹೊಸ ಪ್ರಯೋಗಗಳೇ ಒಂದು ಚಲನಚಿತ್ರ ಶಾಲೆ. ಈ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಪೈಕಿ ನಾನೂ ಕೂಡ ಓರ್ವ'' ಎಂದು ತಿಳಿಸಿದರು.

ಇದನ್ನೂ ಓದಿ: ಅಂಬಾನಿ ನಿವಾಸದಲ್ಲಿ ಗಣೇಶ ಚತುರ್ಥಿ ವೈಭವ: ಬಾಲಿವುಡ್​ ತಾರೆಯರ ಸಮಾಗಮ - Photos ನೋಡಿ

ಅಕ್ಕಿನೇನಿ ನಾಗೇಶ್ವರ್​ ರಾವ್ ಕೊಡುಗೆ: ಎಎನ್​ಆರ್​ ಎಂದು ಕರೆಯಲ್ಪಡುವ ಟಾಲಿವುಡ್​ನ ದಿ. ಅಕ್ಕಿನೇನಿ ನಾಗೇಶ್ವರ್​ ರಾವ್ ಅವರು ದಕ್ಷಿಣ ಚಿತ್ರರಂಗ ಕಂಡ ಅದ್ಭುತ ನಟ. ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿ, ನಿರ್ಮಾಪಕರಾಗಿ ಅವರು ಗುರುತಿಸಿಕೊಂಡಿದ್ದರು. ಸುಮಾರು 75 ವರ್ಷಗಳ ವೃತ್ತಿಜೀವನದ ಅವಧಿಯಲ್ಲಿ ಪ್ರಮುಖ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸುಮಾರು 225 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ರೊಮ್ಯಾಂಟಿಕ್​ ಪಾತ್ರಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಇವರ ಕೆಲಸ ಬದ್ಧತೆಯಿಂದ ಕೂಡಿತ್ತು. ಇಂದೂ ಕೂಡ ಹಲವರಿಗೆ ಅವರು ಸ್ಫೂರ್ತಿಯಾಗಿದ್ದಾರೆ. 1970ರ ದಶಕದಲ್ಲಿ ತೆಲುಗು ಸಿನಿಮಾ ಇಂಡಸ್ಟ್ರಿಯನ್ನು ಮದ್ರಾಸ್​​ನಿಂದ ಹೈದರಾಬಾದ್​ಗೆ ಸ್ಥಳಾಂತರ ಮಾಡುವಲ್ಲಿ ಪ್ರಮುಖ ಅವರು ಪಾತ್ರ ವಹಿಸಿದ್ದನ್ನು ಸ್ಮರಿಸಬಹದು.

ಇದನ್ನೂ ಓದಿ: ಮೆಗಾಸ್ಟಾರ್​ ಚಿರಂಜೀವಿ ಹೊಸ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್? ಸಚಿತ್ರ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.