ETV Bharat / entertainment

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜನ್ಮದಿನ.. ನಟಿಗೆ ಶುಭಾಶಯಗಳ ಮಹಾಪೂರ

author img

By

Published : Nov 19, 2022, 12:45 PM IST

47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

Former Miss Universe Sushmita Sen birthday
ಸುಶ್ಮಿತಾ ಸೇನ್ ಜನ್ಮದಿನ

18ನೇ ವಯಸ್ಸಿಗೆ ವಿಶ್ವ ಸುಂದರಿ ಪಟ್ಟ ಗೆದ್ದ ಸುಶ್ಮಿತಾ ಸೇನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅವರಿಗೆ ಆತ್ಮೀಯರು, ಸ್ನೇಹಿತರು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

90ರ ದಶಕದಲ್ಲಿ ಬಾಲಿವುಡ್​ನಲ್ಲಿ ಮಿಂಚು ಹರಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದ್ಭುತ ಅಭಿನಯದ ಜೊತೆಗೆ ಎಂಥವರನ್ನೂ ಮೋಡಿ ಮಾಡುವ ನೃತ್ಯ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. 1994ರಲ್ಲಿ ಅಂದ್ರೆ ತಮ್ಮ 18ನೇ ವಯಸ್ಸಿನಲ್ಲಿ 'ಮಿಸ್ ಯೂನಿವರ್ಸ್' ಕಿರೀಟವನ್ನು ಪಡೆದರು. ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿ ಗುರುತಿಸಿಕೊಂಡು ದೇಶದ ಹಿರಿಮೆ ಹೆಚ್ಚಿಸಿದರು. ನಂತರ ಸಿನಿಮಾಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದರು.

Former Miss Universe Sushmita Sen birthday
ಸುಶ್ಮಿತಾ ಸೇನ್ ಜನ್ಮದಿನಕ್ಕೆ ಶುಭಕೋರಿದ ಪುತ್ರಿ ರೆನೀ

ಪುತ್ರಿ(ದತ್ತು ಮಗಳು) ರೆನೀ Renee ತಾಯಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಚಿತ್ರವನ್ನು ಹಂಚಿಕೊಂಡ ಅವರು, "ನನ್ನ ಲೈಫ್‌ಲೈನ್‌ಗೆ ಜನ್ಮದಿನದ ಶುಭಾಶಯಗಳು. ನೀವು ನಿಮ್ಮ ಜೀವನದ ಅತ್ಯುತ್ತಮ ಹಂತವನ್ನು ಪ್ರವೇಶಿಸುತ್ತಿರುವ ಈ ಹೊತ್ತಿನಲ್ಲಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮಗೆ ವಿಶಾಲ ಮತ್ತು ಕ್ಷಮಿಸುವ ಹೃದಯವಿದೆ. ನಿಮ್ಮ ಮಗಳಾಗಿರುವುದು ನನ್ನ ಮೇಲಿನ ದೇವರ ಬಹುದೊಡ್ಡ ಆಶೀರ್ವಾದ. ನೀವು ಸಾಟಿಯಿಲ್ಲದ ಪರಂಪರೆಯನ್ನು ಸೃಷ್ಟಿಸಿದ್ದೀರಿ ಮತ್ತು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಅದಕ್ಕೆ ನಾನು ಪ್ರತಿನಿತ್ಯ ಸಾಕ್ಷಿಯಾಗಿದ್ದೇನೆ. ನೀವು ಏನು ಮುಟ್ಟಿದರೂ ಚಿನ್ನವಾಗುತ್ತದೆ, ಏಕೆಂದರೆ ನೀವು ಎಲ್ಲವನ್ನೂ ತುಂಬಿ ಪ್ರೀತಿ, ಸಮರ್ಪಣಾ ಭಾವದಿಂದ ಕಠಿಣ ಪರಿಶ್ರಮ ಮಾಡುತ್ತೀರಿ. ನೀವು ನಟನೆಯಲ್ಲಿ ಒಂದು ಸಂಸ್ಥೆ ಅಂತಲೇ ಹೇಳಬಹುದು'' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ ಖಾನ್​

'ನನ್ನನ್ನು ಬೆಳೆಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಮೌಲ್ಯವನ್ನು ತಿಳಿದುಕೊಂಡಿದ್ದಕ್ಕಾಗಿ ಮತ್ತು ನಾನು ಯಾವುದೇ ಸಂದೇಹವನ್ನು ಎದುರಿಸಿದಾಗಲೆಲ್ಲಾ ನಾನು ಏನು ಮಾಡಬಲ್ಲೆ ಎಂದು ನನಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಎಲ್ಲಾ ಕೆಲಸಗಳನ್ನು ನಿಮ್ಮೊಂದಿಗೆ ಮಾಡಲು ಇಚ್ಛಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ಮಾಡಿದ ತಕ್ಷಣ, ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​ ತುಂಬಲು ಪ್ರಾರಂಭಿಸಿದರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸುಶ್ಮಿತಾ ಸೇನ್​ ಸಹ "ನಾನು ನಿನ್ನನ್ನು ಪ್ರೀತಿಸುತ್ತೇನೆ ಶೋನಾ ಮಾ.. ಇದು ಯಾವಾಗಲೂ ನನ್ನ ಸವಲತ್ತು. ನಿಮ್ಮಿಬ್ಬರಿಗಾಗಿ (ಮಕ್ಕಳು) ನಾನು ದೇವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆಂದು ಎಂದಿದ್ದಾರೆ.

ದಸ್ತಕ್​, ಝೋರ್​, ಸಿರ್ಫ್ ತುಮ್, ಹಿಂದುಸ್ತಾನ್​ ಕಿ ಕಸಮ್, ಬಿವಿ ನಂಬರ್​ 1, ಫಿಝಾ, ಕ್ಯೊನ್ ಕಿ, ನಾಯಕ್​, ಬಸ್​ ಇತ್​ನಾ ಸಅ ಕ್ವಾಬ್​ ಹೇ, ಫಿಲ್​​ಹಾಲ್​​, ಸಮಯ್​​, ಪ್ರಾಣ್​ ಜಾಯೆ ಪರ್ ಶಾನ್​ ನಾ ಜಾಯೆ, ವಾಸ್ತು ಶಾಸ್ತ್ರ, ಮೆ ಹೂ ನಾ, ಬೇವಫಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಫಿಲ್ಮ್​ ಪೇರ್​ ಅವಾರ್ಡ್ಸ್​, ಸ್ಟಾರ್​ ಸ್ಕ್ರೀನ್​ ಅವಾರ್ಡ್ಸ್​, ಝೀ ಸಿನಿ ಅವಾರ್ಡ್ಸ್, ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ನಾನು ಮುಲ್ಕಿ ಬಪ್ಪನಾಡು ದುರ್ಗಾ ದೇವಿಯ ಕೃಪೆಯಿಂದ ಬೆಳೆದವನು: ನಟ ಸುನಿಲ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.