ETV Bharat / entertainment

ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ 2023: ಆಲಿಯಾ, ಸೋನಾಕ್ಷಿಗೆ ಅತ್ಯುತ್ತಮ ನಟಿ ಪ್ರಶಸ್ತಿ

author img

By ETV Bharat Karnataka Team

Published : Nov 27, 2023, 11:03 PM IST

ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ 2023 ಭಾನುವಾರ ಪ್ರಕಟವಾಗಿದೆ.

ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ 2023
ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ 2023

ಹೈದರಾಬಾದ್​: ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ 2023 ಪ್ರಕಟವಾಗಿದ್ದು, ಸೋನಾಕ್ಷಿ ಸಿನ್ಹಾ, ಆಲಿಯಾ ಭಟ್ ಸೇರಿದಂತೆ ಹಲವು ನಟ, ನಟಿಯರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾನುವಾರ (ನಿನ್ನೆ) ಆಯೋಜಿಸಲಾಗಿದ್ದ ಒಟಿಸಿ ಪ್ರಶಸ್ತಿ ಸಮಾರಂಭದಲ್ಲಿ, ರಾಜ್‌ಕುಮಾರ್ ರಾವ್, ನೀಲ್ ನಿತಿನ್ ಮುಖೇಶ್, ವಿಜಯ್ ವರ್ಮಾ, ದಿವ್ಯಾ ದತ್ತಾ ಮತ್ತು ಮನಾಲಿ ಗಗ್ರೂ ಸೇರಿದಂತೆ ಅನೇಕ ತಾರೆಯರು ಭಾಗಿಯಾಗಿದ್ದರು.

ವಿಕ್ರಮಾದಿತ್ಯ ಮೋಟ್ವಾನಿ ಅವರ 'ಜೂಬಿಲಿ' ವೆಬ್​ ಸರಣಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿತು. ದಹಾದ್ ಸರಣಿಯಲ್ಲಿನ ಅಭಿನಯಕ್ಕಾಗಿ ಸೋನಾಕ್ಷಿ ಸಿನ್ಹಾ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಮತ್ತೊಂದೆಡೆ, ಡಾರ್ಲಿಂಗ್ಸ್‌ ಚಿತ್ರದಲ್ಲಿನ ಪಾತ್ರಕ್ಕಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಉಳಿದಂತೆ ಮಾನ್ವಿ ಗಗ್ರೂ ಕೂಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರು.

ನೆಟ್‌ಫ್ಲಿಕ್ಸ್‌ನ ಬಿಡುಗಡೆಗೊಂಡ ಮೋನಿಕಾ ಓ ಮೈ ಡಾರ್ಲಿಂಗ್‌ ಚಿತ್ರದಲ್ಲಿನ ಅಭಿನಯಕ್ಕೆ ರಾಜ್‌ಕುಮಾರ್ ರಾವ್ ಅವರಿಗೆ ಅತ್ಯುತ್ತಮ ಅತ್ಯುತ್ತಮ ನಟ ಪ್ರಶತಿ ಲಭಿಸಿದರೆ, ನಟ ಮನೋಜ್ ಬಾಜಪೇಯಿ ಅವರಿಗೆ ಸಿರ್ಫ್ ಏಕ್ ಬಂದಾ ಕಾಫಿ ಹೈ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಜತೆಗ ಇದೇ ಚಿತ್ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

ಫಿಲ್ಮ್‌ಫೇರ್ OTT ಪ್ರಶಸ್ತಿ ವಿಜೇತರು

ಟೆಕ್ನಿಕಲ್​ ಅವಾರ್ಡ್​

ಅತ್ಯುತ್ತಮ ಮೂಲ ಕಥೆ, ವೆಬ್ ಸರಣಿ: ಗುಂಜಿತ್ ಚೋಪ್ರಾ, ಡಿಗ್ಗಿ ಸಿಸೋಡಿಯಾ (ಕೊಹ್ರಾ)

ಅತ್ಯುತ್ತಮ ಮೂಲ ಚಿತ್ರಕಥೆ, ವೆಬ್ ಸರಣಿ: ಗುಂಜಿತ್ ಚೋಪ್ರಾ, ಸುದೀಪ್ ಶರ್ಮಾ ಮತ್ತು ಡಿಗ್ಗಿ ಸಿಸೋಡಿಯಾ

ಅತ್ಯುತ್ತಮ ಮೂಲ ಸಂಭಾಷಣೆ, ವೆಬ್ ಸರಣಿ: ಕರಣ್ ವ್ಯಾಸ್ (ಸ್ಕೂಪ್)

ಅತ್ಯುತ್ತಮ ಚಿತ್ರಕಥೆ, ವೆಬ್ ಸರಣಿ: ಮೀರತ್ ತ್ರಿವೇದಿ - ಅನು ಸಿಂಗ್ ಚೌಧರಿ (ಸ್ಕೂಪ್)

ಅತ್ಯುತ್ತಮ ಛಾಯಾಗ್ರಾಹಕ, ವೆಬ್ ಸರಣಿ: ಪ್ರತೀಕ್ ಶಾ (ಜೂಬಿಲಿ)

ಅತ್ಯುತ್ತಮ ನಿರ್ಮಾಣ ವಿನ್ಯಾಸ, ವೆಬ್ ಸರಣಿ: ಅಪರ್ಣಾ ಸೌತ್, ಮುಕುಂದ್ ಗುಪ್ತಾ (ಜೂಬಿಲಿ)

ಅತ್ಯುತ್ತಮ ಸಂಕಲನ, ವೆಬ್ ಸರಣಿ: ಆರತಿ ಬಜಾಜ್ (ಜೂಬಿಲಿ)

ಅತ್ಯುತ್ತಮ ವಸ್ತ್ರ ವಿನ್ಯಾಸ, ವೆಬ್ ಸರಣಿ: ಶ್ರುತಿ ಕಪೂರ್ (ಜೂಬಿಲಿ)

ಅತ್ಯುತ್ತಮ ಹಿನ್ನೆಲೆ ಸಂಗೀತ, ವೆಬ್ ಸರಣಿ: ಅಲೋಕಾನಂದ ದಾಸ್‌ಗುಪ್ತ (ಜೂಬಿಲಿ)

ಅತ್ಯುತ್ತಮ ಮೂಲ ಧ್ವನಿಪಥ, ವೆಬ್ ಸರಣಿ: ಸಂಯೋಜಕ - ಅಮಿತ್ ತ್ರಿವೇದಿ ಮತ್ತು ಗೀತರಚನೆಕಾರ - ಕೌಸರ್ ಮುನೀರ್ (ಜೂಬಿಲಿ)

ಅತ್ಯುತ್ತಮ VFX, ವೆಬ್ ಸರಣಿ: ಅರ್ಪಣ್ ಗಗ್ಲಾನಿ (ಫಿಲ್ಮ್‌ಸಿಜಿ) (ಜೂಬಿಲಿ)

ಅತ್ಯುತ್ತಮ ಧ್ವನಿ ವಿನ್ಯಾಸ ವೆಬ್ ಸರಣಿ: ಕುನಾಲ್ ಶರ್ಮಾ ಮತ್ತು ಧ್ರುವ ಪರೇಖ್ (ಜೂಬಿಲಿ)

ಅತ್ಯುತ್ತಮ ಕಥೆ (ವೆಬ್ ಮೂಲ ಚಲನಚಿತ್ರ: ದೀಪಕ್ ಕಿಂಗ್ರಾನಿ)

ಅತ್ಯುತ್ತಮ ಮೂಲ ಚಿತ್ರಕಥೆ (ವೆಬ್ ಮೂಲ ಚಲನಚಿತ್ರ): ಜಸ್ಮೀತ್ ಕೆ ರೀನ್, ಪರ್ವೀಜ್ ಶೇಖ್ (ಡಾರ್ಲಿಂಗ್ಸ್), ರಾಹುಲ್ ವಿ ಚಿಟ್ಟೆಲ್ಲಾ ಮತ್ತು ಅರ್ಪಿತಾ ಮುಖರ್ಜಿ (ಗುಲ್ಮೊಹರ್)

ಅತ್ಯುತ್ತಮ ಸಂಭಾಷಣೆ (ವೆಬ್ ಮೂಲ ಚಲನಚಿತ್ರ): ದೀಪಕ್ ಕಿಂಗ್ರಾನಿ (ಸಿರ್ಫ್ ಏಕ್ ಬಂದಾ ಕಾಫಿ ಹೈ)

ಅತ್ಯುತ್ತಮ ಛಾಯಾಗ್ರಾಹಕ (ವೆಬ್ ಮೂಲ ಚಿತ್ರ): ಸ್ವಪ್ನಿಲ್ ಸೋನಾವಾನೆ (ಮೋನಿಕಾ, ಓ ಮೈ ಡಾರ್ಲಿಂಗ್)

ಅತ್ಯುತ್ತಮ ನಿರ್ಮಾಣ ವಿನ್ಯಾಸ (ವೆಬ್ ಮೂಲ ಚಿತ್ರ): ಮೀನಲ್ ಅಗರ್ವಾಲ್ (ಮೂಲ)

ಅತ್ಯುತ್ತಮ ಸಂಕಲನ (ವೆಬ್ ಮೂಲ ಚಿತ್ರ): ನಿತಿನ್ ಬೈದ್ (ಡಾರ್ಲಿಂಗ್ಸ್)

ಅತ್ಯುತ್ತಮ ಹಿನ್ನೆಲೆ ಸಂಗೀತ (ವೆಬ್ ಮೂಲ ಚಲನಚಿತ್ರ): ಅಚಿಂತ್ ಠಕ್ಕರ್ (ಮೋನಿಕಾ, ಓ ಮೈ ಡಾರ್ಲಿಂಗ್)

ಅತ್ಯುತ್ತಮ ಧ್ವನಿ ವಿನ್ಯಾಸ (ವೆಬ್ ಮೂಲ ಚಲನಚಿತ್ರ): ಅನಿರ್ಬನ್ ಸೆಂಗುಪ್ತ (ಡಾರ್ಲಿಂಗ್ಸ್)

ಕಿರುಚಿತ್ರಗಳು

ಅತ್ಯುತ್ತಮ ಕಿರುಚಿತ್ರ (ಕಾಲ್ಪನಿಕ): ಜಹಾನ್​

ಅತ್ಯುತ್ತಮ ನಿರ್ದೇಶಕ, ಕಿರುಚಿತ್ರ: ಸಾಕ್ಷಿ ಗುರ್ನಾನಿ (ಗ್ರೇ)

ಅತ್ಯುತ್ತಮ ನಟ ಕಿರುಚಿತ್ರ (ಪುರುಷ): ಮಾನವ್ ಕೌಲ್ (ಫಿರ್ ಕಭಿ)

ಅತ್ಯುತ್ತಮ ನಟ ಕಿರುಚಿತ್ರ (ಮಹಿಳೆ): ಮೃಣಾಲ್ ಠಾಕೂರ್ (ಜಹಾನ್)

ವೆಬ್ ಸರಣಿ ಪ್ರಶಸ್ತಿ

ಅತ್ಯುತ್ತಮ ವೆಬ್ ಸರಣಿ: ಸ್ಕೂಪ್

ಅತ್ಯುತ್ತಮ ವೆಬ್ ಸರಣಿ, ವಿಮರ್ಶಕರು: ಟ್ರಯಲ್ ಬೈ ಫೈರ್

ಅತ್ಯುತ್ತಮ ನಿರ್ದೇಶಕ ವೆಬ್ ಸರಣಿ: ಜುಬಿಲಿ ಮೋಟ್ವಾನೆ

ಅತ್ಯುತ್ತಮ ನಿರ್ದೇಶಕ, ವಿಮರ್ಶಕರು: ರಣದೀಪ್ ಝಾ (ಕೊಹ್ರಾ)

ಅತ್ಯುತ್ತಮ ನಟ, ವೆಬ್ ಸರಣಿ (ಪುರುಷ): ನಾಟಕ - ಸುವಿಂದರ್ ವಿಕ್ಕಿ (ಕೊಹ್ರಾ)

ಅತ್ಯುತ್ತಮ ನಟ, ವೆಬ್ ಸರಣಿ (ಪುರುಷ), ವಿಮರ್ಶಕರು: ನಾಟಕ - ವಿಜಯ್ ವರ್ಮಾ (ದಹದ್)

ಅತ್ಯುತ್ತಮ ನಟ, ವೆಬ್ ಸರಣಿ (ಮಹಿಳೆ): ನಾಟಕ - ರಾಜಶ್ರೀ ದೇಶಪಾಂಡೆ (ಟ್ರಯಲ್ ಬೈ ಫೈರ್)

ಅತ್ಯುತ್ತಮ ನಟ, ಸರಣಿ (ಮಹಿಳೆ), ವಿಮರ್ಶಕರು: ನಾಟಕ - ಕರಿಷ್ಮಾ ತನ್ನಾ (ಸ್ಕೂಪ್), ಸೋನಾಕ್ಷಿ ಸಿನ್ಹಾ (ದಹದ್)

ಅತ್ಯುತ್ತಮ ಪೋಷಕ ನಟ, ವೆಬ್ ಸರಣಿ (ಪುರುಷ): ನಾಟಕ - ಬರುನ್ ಸೋಬ್ತಿ (ಕೊಹ್ರಾ)

ಅತ್ಯುತ್ತಮ ಪೋಷಕ ನಟ, ವೆಬ್ ಸರಣಿ (ಮಹಿಳೆ): ನಾಟಕ - ತಿಲೋಟಮಾ ಶೋಮ್ (ದೆಹಲಿ ಕ್ರೈಮ್ ಸೀಸನ್ 2)

ಅತ್ಯುತ್ತಮ ನಟ, ಸರಣಿ (ಪುರುಷ): ಹಾಸ್ಯ - ಅಭಿಷೇಕ್ ಬ್ಯಾನರ್ಜಿ

ಅತ್ಯುತ್ತಮ ನಟ, ವೆಬ್ ಸರಣಿ (ಮಹಿಳೆ): ಹಾಸ್ಯ - ಮಾನ್ವಿ ಗಾಗ್ರೂ (ಟಿವಿಎಫ್ ಟ್ರಿಪ್ಲಿಂಗ್)

ಅತ್ಯುತ್ತಮ ಪೋಷಕ ನಟ, ವೆಬ್ ಸರಣಿ (ಪುರುಷ): ಹಾಸ್ಯ - ಅರುಣಾಭ್ ಕುಮಾರ್ (ಟಿವಿಎಫ್ ಪಿಚರ್ಸ್ ಎಸ್ 2)

ಅತ್ಯುತ್ತಮ ಪೋಷಕ ನಟ, ವೆಬ್ ಸರಣಿ (ಮಹಿಳೆ): ಹಾಸ್ಯ - ಶೆರ್ನಾಜ್ ಪಟೇಲ್ (ಟಿವಿಎಫ್ ಟ್ರಿಪ್ಲಿಂಗ್ ಎಸ್3)

ಅತ್ಯುತ್ತಮ ಹಾಸ್ಯ (ಸರಣಿ/ವಿಶೇಷ): TVF ಪಿಚರ್ಸ್ S2

ಅತ್ಯುತ್ತಮ ಕಾಲ್ಪನಿಕವಲ್ಲದ ಮೂಲ, ವೆಬ್ ಸರಣಿ/ವಿಶೇಷ: ಬ್ಲ್ಯಾಕ್ ಮಾರ್ಸ್ ಸಿನಿಮಾ

ಅತ್ಯುತ್ತಮ ಚಲನಚಿತ್ರ, ಮೂಲ ವೆಬ್ ಸರಣಿ: ಸಿರ್ಫ್ ಏಕ್ ಬಂದಾ ಕಾಫಿ ಹೈ

ಅತ್ಯುತ್ತಮ ನಿರ್ದೇಶಕ, ವೆಬ್ ಮೂಲ ಚಲನಚಿತ್ರ: ಅಪೂರ್ವ್ ಸಿಂಗ್ ಕರ್ಕಿ

ಅತ್ಯುತ್ತಮ ನಟ, ವೆಬ್ ಮೂಲ ಚಲನಚಿತ್ರ (ಪುರುಷ): ಮನೋಜ್ ಬಾಜಪೇಯಿ (ಸಿರ್ಫ್ ಏಕ್ ಬಂದಾ ಕಾಫಿ ಹೈ)

ಅತ್ಯುತ್ತಮ ನಟ, ವಿಮರ್ಶಕರು (ಪುರುಷ): ಚಲನಚಿತ್ರ - ರಾಜ್‌ಕುಮಾರ್ ರಾವ್ (ಮೋನಿಕಾ ಓ ಮೈ ಡಾರ್ಲಿಂಗ್)

ಅತ್ಯುತ್ತಮ ನಟ, ವೆಬ್ ಮೂಲ ಚಲನಚಿತ್ರ (ಮಹಿಳೆ): ಆಲಿಯಾ ಭಟ್ (ಡಾರ್ಲಿಂಗ್ಸ್)

ಅತ್ಯುತ್ತಮ ನಟ, ವಿಮರ್ಶಕರು (ಮಹಿಳೆ): ಚಲನಚಿತ್ರ - ಶರ್ಮಿಳಾ ಟ್ಯಾಗೋರ್ (ಗುಲ್ಮೊಹರ್), ಸನ್ಯಾ ಮಲ್ಹೋತ್ರಾ (ಕಥಲ್)

ಅತ್ಯುತ್ತಮ ಪೋಷಕ ನಟ, ವೆಬ್ ಮೂಲ ಚಲನಚಿತ್ರ (ಪುರುಷ): ಸೂರಜ್ ಶರ್ಮಾ (ಗುಲ್ಮೊಹರ್)

ಅತ್ಯುತ್ತಮ ಪೋಷಕ ನಟ, ವೆಬ್ ಮೂಲ ಚಲನಚಿತ್ರ (ಮಹಿಳೆ) - ಅಮೃತಾ ಸುಭಾಷ್ (ಲಸ್ಟ್ ಸ್ಟೋರೀಸ್ 2), ಶೆಫಾಲಿ ಶಾ (ಡಾರ್ಲಿಂಗ್ಸ್)

ಇದನ್ನೂ ಓದಿ: ಅಭಿನಯದ ಜೊತೆಗೆ ನಿರ್ದೇಶಕಿಯಾಗಲು ಹೊರಟ ಅಪೂರ್ವ ಸಿನಿಮಾದ ಚೆಲುವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.