ETV Bharat / entertainment

ಡಾ ರಾಜ್ ಕುಮಾರ್ 17ನೇ ಪುಣ್ಮ ಸ್ಮರಣೆ.. ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

author img

By

Published : Apr 12, 2023, 11:29 AM IST

ಕನ್ನಡ ಮೇರು ನಟ ಡಾ ರಾಜ್​ ಕುಮಾರ್​ ಅಗಲಿ ಇಂದಿಗೆ 17 ವರ್ಷ ಕಳೆದಿದ್ದು, ಅವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಅವರ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ.

dr-rajkumar-17th-death-anniversary-family-performed-pooja
dr-rajkumar-17th-death-anniversary-family-performed-pooja

ಕನ್ನಡ ಚಿತ್ರರಂಗದ ಅಲ್ಲದೇ ಇವತ್ತಿಗೂ ಭಾರತೀಯ ಸಿನಿಮಾ ರಂಗದಲ್ಲಿ ಹೆಜ್ಜೆ ಗುರುತುಗಳ ಹೊಂದಿರುವ ಮೇರುನಟ ಡಾ. ರಾಜ್​ಕುಮಾರ್. ಕನ್ನಡ ಕುಲಕೋಟಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿರುವ ಡಾ ರಾಜ್ ಕುಮಾರ್ ಅವರ 17ನೇ ಪುಣ್ಯತಿಥಿ.

ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಕುಟುಂಬದಿಂದ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್, ಹೆಣ್ಣು ಮಕ್ಕಳಾದ ಲಕ್ಷ್ಮೀ ಹಾಗೂ ಪೂರ್ಣಿಮಾ ಸೇರಿದಂತೆ ಇಡೀ ರಾಜ್ ಕುಮಾರ್ ಕುಟುಂಬ ಅಣ್ಣಾವ್ರ 17ನೇ ಪುಣ್ಯತಿಥಿ ಕಾರ್ಯ ನಡೆಸಿದರು. ಇನ್ನು ಅಣ್ಣಾವ್ರಿಗೆ ತುಂಬಾ ಇಷ್ಟವಾದ ಮುದ್ದೆ, ನಾಟಿ ಕೋಟಿ ಸಾಂಬರ್ ಹಾಗೂ ಚಿಕನ್ ಬಿರಿಯಾನಿ, ಹಲವು ಸಿಹಿ ತಿಂಡಿಸುಗಳನ್ನ ಇಡುವ ಮೂಲಕ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್, ರಾಘವೇಂದ್ರ ರಾಜ್ ಕುಮಾರ್ ಪತ್ನಿ, ಮಂಗಳ, ಅಶ್ವಿನಿ ಪುನೀತ್ ರಾಜ್‍ಕುಮಾರ್, ಹೆಣ್ಣು ಮಕ್ಕಳಾದ ಲಕ್ಷ್ಮೀ ಹಾಗೂ ಪೂರ್ಣಿಮಾ ಸೇರಿದಂತೆ ಇಡೀ ಕುಟುಂಬದ ವರನಟ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸಮಾಧಿ ಕುಟುಂಬ ವರ್ಗ ಪೂಜೆ ಸಲ್ಲಿಸಿದರು.

ಡಾ ರಾಜ್​ ಕುಮಾರ್​​ ಕುಟುಂಬ
ಡಾ ರಾಜ್​ ಕುಮಾರ್​​ ಕುಟುಂಬ

ಕನ್ನಡದ ಮೇರು ನಟ: ಇನ್ನು ಭಾರತೀಯ ಚಿತ್ರರಂಗದಲ್ಲಿ ಡಾ. ರಾಜ್​ಕುಮಾರ್​ ಅತಂಹ ಮತ್ತೋರ್ವ ನಟ ಇರಲು ಸಾಧ್ಯವಿಲ್ಲ. ಯಾಕೆಂದರೆ ಅಷ್ಟರಮಟ್ಟಿಗೆ ತಮ್ಮದೇ ಆದಂತಹ ಛಾಪು ಮೂಡಿಸಿದವರು ಅಣ್ಣಾವ್ರು. ಸಿನಿಮಾಗಳ ಆಯ್ಕೆ ಮತ್ತು ಪಾತ್ರ ಪೋಷಣೆ ಇರಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ. ಸಿನಿಮಾ ಜರ್ನಿಯ ಆರಂಭದಿಂದ ಕೊನೆಯವರೆಗೂ ಬಹುಬೇಡಿಕೆ ನಟನಾಗಿಯೇ ಡಾ ರಾಜ್ ಕುಮಾರ್ ಅವರು ತಮ್ಮ ಚಾರ್ಮ್​ ಉಳಿಸಿಕೊಂಡಿದ್ದರು. 1954ರಲ್ಲಿ ಬಂದ ಬೇಡರ ಕಣ್ಣಪ್ಪ‌ ಸಿನಿಮಾದಿಂದ 2000ನೇ ಇಸವಿಯಲ್ಲಿ ತೆರೆಕಂಡ ಶಬ್ದವೇಧಿ ಚಿತ್ರದವರೆಗೆ ನೂರಾರು ಬಗೆಯ ಪಾತ್ರಗಳಲ್ಲಿ ಅವರ ಅಭಿನಯವನ್ನು ನೋಡುವುದೇ ಚೆಂದ. ಕನ್ನಡ ಎಂದರೆ ಡಾ. ರಾಜ್​ಕುಮಾರ್​, ಡಾ. ರಾಜ್​ಕುಮಾರ್​ ಎಂದರೆ ಕನ್ನಡ ಎಂಬಷ್ಟರ ಮಟ್ಟಿಗೆ ಸ್ಪಷ್ಟವಾಗಿ ಮಾತೃಭಾಷೆ ಮಾತನಾಡುತ್ತಿದ್ದ ಅವರು ಎಲ್ಲರಿಗೂ ಮಾದರಿ.

ಡಾ ರಾಜ್​ ಕುಮಾರ್​​ ಕುಟುಂಬ
ಡಾ ರಾಜ್​ ಕುಮಾರ್​​ ಕುಟುಂಬ

ಅಭಿಮಾನಕ್ಕೆ ಕೊನೆ ಇಲ್ಲ: ನಾಟಕದ ಹಿನ್ನೆಲೆಯಿಂದ ಬಂದ ಅಣ್ಣಾವ್ರು 5 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ಮಹಾನ್ ನಟ. ಈ ವರನಟನ ಸುದೀರ್ಘ ವೃತ್ತಿಜೀವನದಲ್ಲಿ ಅಣ್ಣಾವ್ರು ಮಾಡಿದ ಸಾಧನೆಗಳಿಗೆ ಲೆಕ್ಕವೇ ಇಲ್ಲ. ಕೇವಲ 3ನೇ ತರಗತಿವರೆಗೆ ಓದಿದ್ದ ಅವರು ನಂತರ ಇಂಗ್ಲಿಷ್​ ಕಲಿತು ಡೈಲಾಗ್​ ಹೊಡೆದು ಸೈ ಎನಿಸಿಕೊಂಡರು. ಸಿನಿಮಾ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ ನೀಡಿತು. ಸಂಗೀತ ಕಲಿಯದೆಯೂ ಹಾಡುಗಳ ಮೂಲಕ ಕೇಳುಗರ ಹೃದಯ ಗೆದ್ದ ಮಹಾನ್​ ಗಾಯಕ ಅವರು. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಾಯಕ ನಟ ನಮ್ಮ ಹೆಮ್ಮೆಯ ಡಾ. ರಾಜ್​. ಪದ್ಮ ಭೂಷಣ, ಕೆಂಟುಕಿ ಕರ್ನಲ್​, ದಾದಾ ಸಾಹೇಬ್​ ಫಾಲ್ಕೆ, ಕರ್ನಾಟಕ ರತ್ನ, ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲ್ಮ್​ಫೇರ್​ ಸೇರಿದಂತೆ ಅವರಿಗೆ ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಇಂಥ ಮಹಾನ್​ ಸಾಧಕನ ಮೇಲೆ ಜನರು ಇಟ್ಟ ಅಭಿಮಾನಕ್ಕೆ ಕೊನೆಯೇ ಇಲ್ಲ.

ಡಾ. ವಿಷ್ಣುವರ್ದನ್, ದ್ವಾರಕೀಶ್​ ಅವರೊಂದಿಗೆ ಡಾ ರಾಜ್​ ಕುಮಾರ್​​
ಡಾ. ವಿಷ್ಣುವರ್ದನ್, ದ್ವಾರಕೀಶ್​ ಅವರೊಂದಿಗೆ ಡಾ ರಾಜ್​ ಕುಮಾರ್​​

ಇನ್ನು, ಡಾ ರಾಜ್ ಕುಮಾರ್ ಅಂದಾಕ್ಷಣ ಅವರ ಸರಳತೆ, ಪ್ರತಿಯೊಬ್ಬರಿಗೆ ಅವರ ಕೊಡುತ್ತಿದ್ದ ಗೌರವ, ಜೊತೆಗೆ ಕನ್ನಡ ಭಾಷೆ, ನೆಲ, ಜಲ ಅಂತಾ ಬಂದಾಗ ಡಾ ರಾಜ್ ಕುಮಾರ್ ಮುಂಚೂಣಿಯಲ್ಲಿದ್ದು, ಎಲ್ಲಾರನ್ನ ಒಗ್ಗೂಡಿಸುತ್ತಿದ್ದರು‌. ರಾಜ್‌ಕುಮಾರ್ ಅವರು ಏಪ್ರಿಲ್ 12, 2006 ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಇಂದಿಗೂ ಕನ್ನಡದ ಜನರು ನಮ್ಮ‌ ನಾಡಿನ‌ ಹೆಮ್ಮೆ ಅಂತಾ ಇವತ್ತಿಗೂ ತಮ್ಮ ಹೃದಯದಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ.

ಇದನ್ನೂ ಓದಿ: 'ರಾಮನ ಅವತಾರ'ದಲ್ಲಿ ರಿಷಿ: ಸಿನಿಮಾ ಟೀಸರ್​ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.