ETV Bharat / entertainment

ನಟ ಡಾಲಿ ಧನಂಜಯ್ ಹುಟ್ಟುಹಬ್ಬ.. ಹೆಡ್ ಬುಷ್ ಸಿನಿಮಾ ಸಾಂಗ್ ರಿಲೀಸ್

author img

By

Published : Aug 23, 2022, 5:13 PM IST

Updated : Aug 23, 2022, 6:53 PM IST

ನಟ ಡಾಲಿ ಧನಂಜಯ್ ಜನ್ಮ ದಿನ ಹಿನ್ನೆಲೆ ಇಂದು ಹೆಡ್ ಬುಷ್ ಸಾಂಗ್ ರಿಲೀಸ್ ಆಗಿದೆ. ನಾವು ರೌಡಿಗಳು ಎಂದು ಶುರುವಾಗುವ 'ರೌಡೀಸ್ ಆ್ಯಂಥಮ್‌'ನಲ್ಲಿ ಬೆಂಗಳೂರು ಭೂಗತ ಲೋಕದ ಆ ದಿನಗಳ ದರ್ಶನ ಮಾಡಿಸುವ ಪ್ರಯತ್ನ ನಡೆದಿದೆ.

Head Bush movie song released
ಹೆಡ್ ಬುಷ್ ಸಿನಿಮಾ ಸಾಂಗ್ ರಿಲೀಸ್

ಬಹು ನಿರೀಕ್ಷಿತ ಹೆಡ್ ಬುಷ್ ಸಿನಿಮಾ ಇದೇ ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಅಬ್ಬರಿಸಲಿದ್ದು, ಇಂದು ಹೆಡ್ ಬುಷ್ ಸಾಂಗ್ ರಿಲೀಸ್ ಆಗಿದೆ. ಎಲ್ಲಾ ಪೇಟೇಲು ನಿಮ್ಮದೇ ಖದರ್! ನಿಮ್ಮ ಅಭಿನಯಕ್ಕೆ ನಾವು ಸನ್ನಾರ್! headbush ಇಂದ ಆಗಲಿ ಎಲ್ಲಾ ರೆಕಾರ್ಡ್ ಪಂಕ್ಚರ್​ ಎಂದು ಆನಂದ್ ಆಡಿಯೋ ಸಂಸ್ಥೆ ವಿಶೇಷವಾಗಿ ಶುಭಾಶಯ ಕೋರಿದೆ.

  • " class="align-text-top noRightClick twitterSection" data="">

ಭರ್ಜರಿ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆನಂದ್ ಆಡಿಯೋ ಸಂಸ್ಥೆ ಹೆಡ್​ ಬುಷ್ ಸಾಂಗ್ ಹಂಚಿಕೊಂಡು ಶುಭಕೋರಿದೆ. 'ನಾವು ರೌಡಿಗಳು' ಎಂದು ಶುರುವಾಗುವ 'ರೌಡೀಸ್ ಆ್ಯಂಥಮ್‌'ನಲ್ಲಿ ಬೆಂಗಳೂರು ಭೂಗತ ಲೋಕದ ಆ ದಿನಗಳ ದರ್ಶನ ಮಾಡಿಸುವ ಪ್ರಯತ್ನ ನಡೆದಿದೆ.

ಹೆಡ್​ ಬುಷ್ ಸಿನಿಮಾ ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್‌ ಎಂ.ಪಿ ಜಯರಾಜ್‌ ಅವರ ಜೀವನಾಧಾರಿತ ಸಿನಿಮಾ.‌ ಚಿತ್ರೀಕರಣ ಮುಗಿದಿರುವ ಹೆಡ್ ಬುಷ್ ಸಿನಿಮಾವನ್ನು ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದೆಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಡಾಲಿ ಧನಂಜಯ್ ಎಂ.ಪಿ ಜಯರಾಜ್ ಸ್ಟೈಲ್​ನಲ್ಲಿ ಸಿಗರೇಟ್ ಸೇದುವ ಪೋಸ್ಟರ್, ಟೀಸರ್ ಸಖತ್​ ಸೌಂಡ್ ಮಾಡಿದೆ.

ಬರಹಗಾರ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸಿದ್ದಾರೆ. 1970ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಅವರು ಈ ಚಿತ್ರದಲ್ಲಿ ತೋರಿಸಲಿದ್ದಾರೆ. ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್. ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ.

ಅದ್ಭುತ ಹಾಡುಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೋಜ್ ವೇಲಾಯಧನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಕಲಾ ನಿರ್ದೇಶಕರು ಬಾದಲ್ ನಂಜುಂಡಸ್ವಾಮಿ. ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ್ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​​ವುಡ್ ಡಾಲಿ ಧನಂಜಯ್: ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

Last Updated : Aug 23, 2022, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.