ETV Bharat / entertainment

ಡಾಲಿ ಧನಂಜಯ್ 25ನೇ ಸಿನಿಮಾ 'ಹೊಯ್ಸಳ' ಬಿಡುಗಡೆಗೆ ಮುಹೂರ್ತ ಫಿಕ್ಸ್

author img

By

Published : Jan 25, 2023, 2:22 PM IST

ಡಾಲಿ ಧನಂಜಯ್ 'ಸಲಗ' ಚಿತ್ರದ ನಂತರ ಖಡಕ್ ಪೊಲೀಸ್ ಅಧಿಕಾರಿಯಾಗಿ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಡಾಲಿ ಧನಂಜಯ್ 25ನೇ ಸಿನಿಮಾ ಹೊಯ್ಸಳ ಬಿಡುಗಡೆಗೆ ಮುಹೂರ್ತ ಫಿಕ್ಸ್
dolly-dhananjay-25th-movie-hoysala-release-date-fixed

ಕನ್ನಡ ಸಿನಿಮಾ ರಂಗ ಅಲ್ಲದೇ ತೆಲುಗು ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಸಿನಿಪ್ರಿಯರ ಹೃದಯ ಗೆದ್ದಿರುವ ನಟ ಡಾಲಿ ಧನಂಜಯ್. ನಟನೆಯ ಜೊತೆಗೆ ಹೊಸ ಪ್ರತಿಭೆಗಳ ಚಿತ್ರಗಳ ನಿರ್ಮಾಣ ಮಾಡುತ್ತಿರುವ ಧನಂಜಯ್ ಈಗ 'ಹೊಯ್ಸಳ'ನಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಎಂದರೆ, ಇದು ಧನಂಜಯ್​ ಅಭಿಯನದ 25ನೇ ಚಿತ್ರ. ಈಗಾಗಲೇ ಸಿನಿಮಾದ ಪೋಸ್ಟರ್​ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸೈಲೆಂಟ್​ ಆಗಿಯೇ ಚಿತ್ರೀಕರಣ ಮುಗಿಸಿದ ತಂಡ ಇದೀಗ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ಮಾರ್ಚ್​ 30ರಂದು ಚಿತ್ರ ಥಿಯೇಟರ್​ನಲ್ಲಿ ಬಿಡುಗಡೆಯಾಗುತ್ತಿದೆ.

ಡಾಲಿ ಧನಂಜಯ್ 'ಸಲಗ' ಚಿತ್ರದ ನಂತರ ಇದೀಗ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದಾರೆ. ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದಿರುವ ಘಟನೆಯನ್ನು ಆಧಾರಿಸಿರುವ ಕಥೆಯಾಗಿದೆ. ಈ ಹಿಂದೆ ಗಣೇಶ್ ನಟನೆಯ ಗೀತಾ ಸಿನಿಮಾವನ್ನ‌ು ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾದ ಬಳಿಕ‌ ಧನಂಜಯ್ ಜೊತೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ.‌ ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಲಾವಿದರು ಈ‌ ಚಿತ್ರದಲ್ಲಿ ನಟಿಸಿದ್ದಾರೆ‌.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಕಪ್‌ ಹೊಂದಿರುವ ನಟರಲ್ಲಿ ಧನಂಜಯ್ ಮುಂಚೂಣಿಯಲ್ಲಿದ್ದಾರೆ. ಕೆಆರ್​​ಜಿ ಸ್ಟುಡಿಯೋಸ್‌ ಮೂಲಕ ಕಾರ್ತಿಕ್‌ ಹಾಗೂ ಯೋಗಿ ಜಿ ರಾಜ್‌ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್​ನ ವಿಜಯ್‌ ಕಿರಗಂದೂರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವಿದೆ. ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶಕರಾಗಿದ್ದು ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಕೂಡ ಕುತೂಹಲ ಮೂಡಿಸಿತ್ತು. ಹಾಗಾಗಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಆ‌ ನಿರೀಕ್ಷೆಯಂತೆ ಮಾರ್ಚ್ 30ರಂದು ರಾಜ್ಯ ಅಲ್ಲದೇ, ವಿಶ್ವಾದ್ಯಂತ ಹೊಯ್ಸಳ ಬಿಡುಗಡೆ ಆಗೋದು ಪಕ್ಕಾ ಎಂದು ‌ಚಿತ್ರತಂಡ ತಿಳಿಸಿದೆ. ಧನಂಜಯ್‌ 25ನೇ ಸಿನಿಮಾ ಎಂಬ ಕಾರಣಕ್ಕೆ‌ ಅಭಿಮಾನಿಗಳಲ್ಲಿಯೂ ಕೂಡ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಇದೆ.

ಚಿತ್ರದ ಹೊಸ ಪೋಸ್ಟರ್​ ಕಳೆದೆರಡು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈ ಹಿಂದಿನ ಪೋಸ್ಟರ್​ನಲ್ಲಿ ಖಾಲಿ ಬಟ್ಟೆ ತೊಟ್ಟಿದ್ದ ಡಾಲಿ ಧನಂಜಯ್​ ಇದರಲ್ಲಿ ಕೂಡ ತಮ್ಮ ಖಡಕ್​ ಲುಕ್​ನಲ್ಲಿ ಕಂಡು ಬಂದಿದ್ದಾರೆ. ಈ ನಡುವೆ ಮತ್ತೊಂದು ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಧನಂಜಯ್​, ಈ ಕುರಿತು ಗಣರಾಜ್ಯೋತ್ಸವ ದಿನದಂದು ಅಪ್​​ಡೇಟ್​ ಮಾಡಲಿದ್ದಾರೆ.

ಇದನ್ನೂ ಓದಿ: 'ಒಂದು ಸರಳ ಪ್ರೇಮಕಥೆ': ವಿನಯ್ ರಾಜ್​ಕುಮಾರ್​ಗೆ ಸ್ವತಿಷ್ಠ ಕೃಷ್ಣನ್ ಹೀರೋಯಿನ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.