ETV Bharat / entertainment

ಭೂಗತ ಜಗತ್ತಿನ ಬೆದರಿಕೆ ಎದುರಿಸಿ ಮುನ್ನಡೆದ ಏಕೈಕ ನಟ ಶಾರುಖ್​ ಖಾನ್​: ನಿರ್ದೇಶಕ ಸಂಜಯ್​ ಗುಪ್ತಾ!

author img

By ETV Bharat Karnataka Team

Published : Sep 9, 2023, 3:58 PM IST

Filmmaker Sanjay Gupta tweet: ನಿರ್ದೇಶಕ ಸಂಜಯ್​ ಗುಪ್ತಾ ತಮ್ಮ ಟ್ವೀಟ್​ನಲ್ಲಿ ಬಾಲಿವುಡ್​ ಬಾದ್​ಶಾ ಎಸ್​ಆರ್​ಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Filmmaker Sanjay Gupta tweet
ಶಾರುಖ್​ ಖಾನ್ ಬಗ್ಗೆ ನಿರ್ದೇಶಕ ಸಂಜಯ್​ ಗುಪ್ತಾ ಟ್ವೀಟ್

ಕಿಂಗ್​ ಖಾನ್​ ಶಾರುಖ್​ ನಟನೆಯ ಜವಾನ್​ ಸಿನಿಮಾ ಸಾಕಷ್ಟು ಪ್ರಶಂಸೆಗಳನ್ನು ಸ್ವೀಕರಿಸುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಸಹ ಸಿನಿಮಾಗೆ ತಮ್ಮ ವಿಮರ್ಶೆ ಕೊಡುತ್ತಿದ್ದಾರೆ. ಬಹುತೇಕ ಪಾಸಿಟಿವ್​ ಪ್ರತಿಕ್ರಿಯೆ ಸ್ವೀಕರಿಸುತ್ತಿರುವ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ.

ಕಾಂತೆ, ಕಾಬಿಲ್​​​, ಶೂಟೌಟ್​ ಅಟ್​ ಲೋಖಂಡ್ವಾಲ, ಶೂಟೌಟ್​ ಅಟ್​ ವಡಲ ಮತ್ತು ಜಝ್ಬಾ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಸಂಜಯ್​ ಗುಪ್ತಾ ಅವರು ಬ್ಲಾಕ್​ಬಸ್ಟರ್ ಜವಾನ್​ ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ X (ಹಿಂದಿನ ಟ್ವಿಟರ್​) ನಲ್ಲಿ ಸಿನಿಮಾ ಮತ್ತು ಶಾರುಖ್ ನಟನೆ​ ಕುರಿತು ಗುಣಗಾನ ಮಾಡಿದ್ದಾರೆ. ಖಾನ್​​ ಕೆಲಸವನ್ನು ಶ್ಲಾಘಿಸುವುದಲ್ಲದೇ, ಭೂಗತ ಜಗತ್ತಿನ ಬೆದರಿಕೆಗಳ ನಡುವೆಯೂ ಅಚಲ ದೃಢತೆ ಪ್ರದರ್ಶಿಸಿರುವ ಖಾನ್​​ ಸಿನಿಮಾ ಜೀವನದ ಬಹುಮುಖ್ಯ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ನಿರ್ದೇಶಕ ಸಂಜಯ್​ ಗುಪ್ತಾ ಟ್ವೀಟ್: 1990ರ ದಶಕದಲ್ಲಿ ಸಿನಿಮಾ ವಲಯದ ಮೇಲೆ ಭೂಗತ ಜಗತ್ತಿನ ಪ್ರಭಾವ ಉತ್ತುಂಗದಲ್ಲಿದ್ದ ವೇಳೆ, ನಟ ಶಾರುಖ್​ ಖಾನ್​​ ಬೆದರಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಏಕಾಂಗಿ ತಾರೆಯಾಗಿ ನಿಂತಿದ್ದರು. ಶೂಟ್​ ಮಾಡಬೇಕೆಂದರೆ ಶೂಟ್​ ಮಾಡಿ, ಆದರೆ ನಾನು ನಿಮಗಾಗಿ ಕೆಲಸ ಮಾಡುವುದಿಲ್ಲ, ನಾನು ಪಠಾಣ್​​ ಎಂದು ಹೇಳುವ ಮೂಲಕ ಶಾರುಖ್​ ಖಾನ್​​ ಬೆದರಿಕೆಗಳನ್ನು ಬಹಳ ಧೈರ್ಯದಿಂದ ಎದುರಿಸಿದ ಘಟನೆಯನ್ನು ಟ್ವೀಟ್​ನಲ್ಲಿ ಗುಪ್ತಾ ನೆನಪಿಸಿಕೊಂಡರು. ಗುಪ್ತಾ ಅವರು ತಮ್ಮ ಟ್ವೀಟ್​ನಲ್ಲಿ ಶಾರುಖ್​ ಖಾನ್​ ಅವರ ತತ್ವ ಸಿದ್ಧಾಂತ, ಅವುಗಳ ಮೇಲಿನ ಅಚಲ ಬದ್ಧತೆಯನ್ನು ಎತ್ತಿ ತೋರಿಸಿದರು.

2014 ರಲ್ಲಿ ನಟ ಶಾರುಖ್​ ಖಾನ್​ ಅವರಿಗೆ ಭೂಗತ ಜಗತ್ತಿನಿಂದ ಜೀವ ಬೆದರಿಕೆಗಳು ಹೆಚ್ಚಾದ ಹಿನ್ನೆಲೆ, ಹೆಚ್ಚುವರಿ ಪೊಲೀಸ್​ ಭದ್ರತೆಯನ್ನು ಒದಗಿಸಲಾಗಿತ್ತು. ನಿರ್ಮಾಪಕ ಅಲಿ ಮೊರಾನಿ ಅವರು ಎಸ್​ಆರ್​ಕೆಗೆ ಸಂಬಂಧಿಸಿದ ಬೆದರಿಕೆಗಳನ್ನು ಸ್ವೀಕರಿಸಿದ್ದರು. ಹಾಗಾಗಿ ಖಾನ್​ಗೆ ಬಿಗಿ ಭದ್ರತೆ ವಹಿಸಲಾಗಿತ್ತು. ಈ ಸವಾಲುಗಳ ಹೊರತಾಗಿಯೂ ಯಾವುದೇ ರಾಜಿ ಮಾಡಿಕೊಳ್ಳದೇ ಹಿಂದಿ ಚಿತ್ರರಂಗದಲ್ಲಿ ಶಾರುಖ್​ ಖಾನ್​ ವೃತ್ತಿಜೀವನ ಮುಂದುವರಿಸಿದರು.

ಇದನ್ನೂ ಓದಿ: Jawan: ಬಾಕ್ಸ್​ ಆಫೀಸ್​ನಲ್ಲಿ 'ಜವಾನ್​' ಅಬ್ಬರ: ಅಬ್ಬಬ್ಬಾ.. ಎರಡು ದಿನದಲ್ಲಿ ಇಷ್ಟೊಂದು ಕಲೆಕ್ಷನ್​

ದಕ್ಷಿಣ ಚಿತ್ರರಂಗದ ನಿರ್ದೇಶಕ ಅಟ್ಲೀ ಕುಮಾರ್​ ನಿರ್ದೇಶನದಲ್ಲಿ ಮೂಡಿ ಬಂದ ಜವಾನ್​ ನಲ್ಲಿ ಎಸ್​ಆರ್​ಕೆ ಜೊತೆ ನಯನತಾರಾ, ವಿಜಯ್​ ಸೇತುಪತಿ ಸೇರಿದಂತೆ ಪ್ರಮುಖ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಅದ್ಭುತ ದಾಖಲೆ ಮಾಡಿದೆ. ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಭಾರತೀಯ ಬಾಕ್ಸ್​ ಆಫೀಸ್​ನಲ್ಲೇ 2 ದಿನಕ್ಕೆ 125 ಕೋಟಿ ರೂ. ಸಂಪಾದನೆ ಮಾಡಿದೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ಬಾಲಿವುಡ್​ ಕಿಲಾಡಿ: ಅಭಿಮಾನಿಗಳ ಹೃದಯ ಗೆದ್ದ ಅಕ್ಷಯ್​ ಕುಮಾರ್​ ಸಿನಿಮಾಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.