ETV Bharat / entertainment

ಪಠಾಣ್​ ನಟಿ ದೀಪಿಕಾ ಪಡುಕೋಣೆ ಟ್ರೋಲ್​​: ಆಗಿದ್ದೇನು, ಅಭಿಮಾನಿಗಳು ಏನಂದ್ರು?

author img

By

Published : Jul 1, 2023, 2:34 PM IST

ನಟಿ ಸೋನಾಕ್ಷಿ ಸಿನ್ಹಾ ಅವರು ಕಳೆದೆರಡು ದಿನಗಳ ಹಿಂದೆ ಧರಿಸಿದ್ದ ಮಾದರಿಯ ಉಡುಪನ್ನು ದೀಪಿಕಾ ಪಡುಕೋಣೆ ಧರಿಸಿದ ಹಿನ್ನೆಲೆ ಕೆಲವರು ನಟಿಯನ್ನು ಟ್ರೋಲ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಟ್ರೋಲ್
Deepika Padukone troll

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅದ್ಭುತ ಫ್ಯಾಷನ್ ಸೆನ್ಸ್​ಗೆ ಹೆಸರುವಾಸಿಯಾಗಿದ್ದಾರೆ. ಒಳ್ಳೆ ಹೈಟ್​ ಇರುವ ನಟಿ ತೊಡುವ ಬಟ್ಟೆಗಳು ಸಿಂಪ್ಲೀ ಅಟ್ರ್ಯಾಕ್ಟೀವ್. ಫ್ಯಾಶನ್ ವಿಷಯಕ್ಕೆ ಬಂದಾಗ ಅನೇಕರು ನಟಿಯನ್ನು ಫಾಲೋ ಮಾಡುತ್ತಾರೆ. ಆದ್ರೆ ಇತ್ತೀಚಿನ ವಿಡಿಯೋದಲ್ಲಿ ಪಠಾಣ್ ನಟಿ ಧರಿಸಿದ್ದ ಬಟ್ಟೆ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಎರಡು ದಿನಗಳ ಹಿಂದೆ ನಟಿ ಸೋನಾಕ್ಷಿ ಸಿನ್ಹಾ ಧರಿಸಿದ್ದ ಮಾದರಿಯ ಉಡುಪನ್ನು ದೀಪಿಕಾ ಪಡುಕೋಣೆ ಧರಿಸಿದ್ದಾರೆಂದು ಕೆಲ ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಇತ್ತೀಚೆಗೆ ಪಾಪರಾಜಿಯೋರ್ವರು ತಮ್ಮ ಖಾತೆಯಿಂದ ಪಠಾಣ್​ ನಟಿ ದೀಪಿಕಾ ಪಡುಕೋಣೆ ಅವರ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಪಾಪರಾಜಿ ಹಂಚಿಕೊಂಡ ವಿಡಿಯೋದಲ್ಲಿ, ನಟಿ ದೀಪಿಕಾ ಪಡುಕೋಣೆ ಪ್ರಿಂಟೆಡ್ ಆರೆಂಜ್​ ಬ್ಲ್ಯೂ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಲಾಝೋ ಪ್ಯಾಂಟ್‌ಗೆ ಉದ್ದವಾದ, ಓವರ್​ ಸೈಜ್​ ಶರ್ಟ್ ಅನ್ನು ಧರಿಸಿದ್ದರು. ಅದಕ್ಕೆ ಮ್ಯಾಚ್​ ಆಗುವ ಸ್ಟೈಲಿಶ್​​ ಬ್ಯಾಗ್​ ಅನ್ನು ಹಿಡಿದಿದ್ದರು. ಕೂದಲನ್ನು ಅಚ್ಚುಕಟ್ಟಾಗಿ ಬನ್‌ ಶೈಲಿಯಲ್ಲಿ ಕಟ್ಟಿದ್ದರು. ತಮ್ಮ ನೋಟವನ್ನು ಪೂರ್ಣಗೊಳಿಸಲು ಲೈಟ್​ ಮೇಕ್ಅಪ್ ಹಾಕಿದ್ದರು. ವರದಿಗಳ ಪ್ರಕಾರ, ದೀಪಿಕಾ ಅವರ ಈ ವಿಶಿಷ್ಟ ವೇಷಭೂಷಣವನ್ನು ಸಿಲ್ ಸಿಲಾ ವಿನ್ಯಾಸಗೊಳಿಸಿದೆ.

ನಟಿ ದೀಪಿಕಾ ಪಡುಕೋಣೆ ನೋಟಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು "ಅವರ ಉಡುಗೆ ಇಷ್ಟವಾಯಿತು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಸೋಷಿಯಲ್​ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿ, "ಅತ್ಯಂತ ಸುಂದರ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಈ ಪ್ರಿಂಟೆಡ್​ ಡ್ರೆಸ್ ಈ ದಿನಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ" ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು "ಬಹಳ ಸುಂದರ" ಎಂದು ಬರೆದಿದ್ದರೆ, ಇನ್ನೋರ್ವರು "ಬೆಸ್ಟ್ ಔಟ್​ಫಿಟ್​" ಎಂದು ಬರೆದಿದ್ದಾರೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ರೆಡ್ ಹಾರ್ಟ್​ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾದರು.

ಎರಡು ದಿನಗಳ ಹಿಂದೆ ನಟಿ ಸೋನಾಕ್ಷಿ ಸಿನ್ಹಾ ಕೂಡ ಇದೇ ರೀತಿಯ ಸಿಲ್-ಸಿಲಾ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಇದನ್ನು ಗಮನಿಸಿದ್ದು, ಪ್ರಸ್ತುತ ಯಾರು ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ. ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿ "ಯಾರು ಮೊದಲು ಧರಿಸಿದರು ಎಂಬುದನ್ನು ನೋಡೋದಲ್ಲ, ದೀಪಿಕಾ ಉತ್ತಮವಾಗಿ ಕಾಣುತ್ತಿದ್ದಾರೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, ಕೆಲ ದಿನಗಳ ಹಿಂದೆ ಸೋನಾಕ್ಷಿ ಸಿನ್ಹಾ ಕೂಡ ಅದೇ ಮಾಡರಿಯ ಡ್ರೆಸ್ ಧರಿಸಿದ್ದರು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್​ ಮಾಡಿ, "ಸೋನಾಕ್ಷಿ ಎರಡು ದಿನಗಳ ಹಿಂದೆ ಇದೇ ಡ್ರೆಸ್ ಧರಿಸಿದ್ದರು ಅಂದರೆ ದೀಪಿಕಾ ಸೋನಾಕ್ಷಿಯ ಡ್ರೆಸ್ ಅನ್ನು ಕಾಪಿ ಮಾಡಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Kangana Ranaut: ಕಂಗನಾ ಕಲರ್​ಫುಲ್​ ಫೋಟೋಶೂಟ್​ - ಪಾರ್ಟಿ ಮೂಡ್​ನಲ್ಲಿ ರಣಾವತ್​

ನಟಿ ದೀಪಿಕಾ ಪಡುಕೋಣೆ ಕೆಲಸದ ವಿಚಾರ ಗಮನಿಸುವುದಾದರೆ, ಬ್ಲಾಕ್​​​ಬಸ್ಟರ್ ಪಠಾಣ್​ ನಂತರ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಜವಾನ್​ನಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ನಟಿಸುತ್ತಿರುವ ಆ್ಯಕ್ಷನ್ ಥ್ರಿಲ್ಲರ್ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್: ಕೃಷ್ಣಂ ಪ್ರಣಯ ಸಖಿ ಫಸ್ಟ್ ಲುಕ್ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.