ETV Bharat / entertainment

ಮುಂಬೈ ಏರ್​ಪೋರ್ಟ್​ನಲ್ಲಿ ಬಾಲಿವುಡ್​ ಬೆಡಗಿಯರು: ದೀಪಿಕಾ, ಕತ್ರಿನಾ ನೋಟಕ್ಕೆ ಅಭಿಮಾನಿಗಳ ದಿಲ್‌ ಖುಷ್‌

author img

By

Published : Aug 6, 2023, 4:08 PM IST

Deepika, Katrina airport look: ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್​ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಹೀಗೆ ಕಂಡರು.

deepika padukone and katrina kaif
ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್​

ಚಿತ್ರರಂಗದ ತಾರೆಯರು ಪ್ರಯಾಣ ಬೆಳೆಸುವ ಸಂದರ್ಭ ವಿಮಾನ ನಿಲ್ದಾಣಗಳಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಿರುತ್ತಾರೆ. ಅವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಅಭಿಮಾನಿಗಳ ಕಣ್ಮನ ಸೆಳೆಯುತ್ತವೆ. ವಿಮಾನ ಪ್ರಯಾಣದ ಸಂದರ್ಭಕ್ಕೆಂದೇ ಹೇಳಿ ಮಾಡಿಸುವ ಆಕರ್ಷಕ ಉಡುಗೆಗಳನ್ನು ತೊಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾರೆ. ಈ ಪೈಕಿ ಬಾಲಿವುಡ್​ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ವೈಯ್ಯಾರ ತುಸು ಹೆಚ್ಚೇ. ಫ್ಯಾಶನ್​ ಲೋಕದ ರಾಣಿ ಇವರು. ಇದೀಗ ಇಬ್ಬರು ಬಾಲಿವುಡ್​ ನಟಿಮಣಿಯರ ನೋಟ ಅಭಿಮಾನಿಗಳ ದಿಲ್ ಗೆದ್ದಿದೆ.

ದೀಪಿಕಾ ಪಡುಕೋಣೆ ಏರ್​ಪೋರ್ಟ್ ಲುಕ್​: ಬಹುನಿರೀಕ್ಷಿತ ಪ್ರಾಜೆಕ್ಟ್​ನಲ್ಲಿ ಫ್ಯಾಶನ್​ ಐಕಾನ್​ ದೀಪಿಕಾ ಪಡುಕೋಣೆ ಕೆಲಸ ಮಾಡುತ್ತಿದ್ದು, ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಎಂದಿನಂತೆ ಕ್ಯಾಶುವಲ್​, ಕಂಫರ್ಟೆಬಲ್​ ಪ್ಲಸ್​ ಸ್ಟೈಲಿಶ್​​ ಡ್ರೆಸ್​ ಧರಿಸಿದ್ದರು. ಏರ್​ಪೋರ್ಟ್​ ಲುಕ್​ಗಾಗಿ ವೈಟ್​ ಟಾಪ್​​, ಬ್ಲ್ಯೂ ಜೀನ್ಸ್​ ಆರಿಸಿಕೊಂಡಿದ್ದರು.

ಪಠಾಣ್​ ಸಿನಿಮಾ ನಟಿ ಏರ್​ಪೋರ್ಟ್​ ಲುಕ್​​ಗೆ ಹೆಸರುವಾಸಿ. ಪ್ರತಿ ಬಾರಿ ಡಿಫ್ರೆಂಟ್​ ಸ್ಟೈಲ್​ನ ಡ್ರೆಸ್​ ಧರಿಸಿ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ನಟಿಯ ಡ್ರೆಸ್ಸಿಂಗ್​​ ಸ್ಟೈಲನ್ನು ಹಲವರು ಫಾಲೋ ಮಾಡುತ್ತಾರೆ. ರಣ್​ವೀರ್​ ಸಿಂಗ್​ ಪತ್ನಿಯಾದ ಇವರು ಟರ್ಮಿನಲ್​ ಪ್ರವೇಶಿಸುತ್ತಿದ್ದಂತೆ, ಪಾಪರಾಜಿಗಳನ್ನು ಕಂಡು ಮುಗುಳ್ನಗೆ ಬೀರಿ, ಅವರತ್ತ ಕೈಬೀಸಿ ಮುನ್ನಡೆದರು. ದೀಪಿಕಾ ಪಡುಕೋಣೆ ಏರ್​ಪೋರ್ಟ್ ವಿಡಿಯೋವನ್ನು ಪಾಪರಾಜಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್​ ಆಗಿವೆ. ಮೆಚ್ಚಿನ ನಟಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.

ಕತ್ರಿನಾ ಕೈಫ್ ಏರ್​ಪೋರ್ಟ್ ಲುಕ್​: ಮತ್ತೊಂದು ವಿಡಿಯೋದಲ್ಲಿ, ಕತ್ರಿನಾ ಕೈಫ್​​ ಪ್ರವಾಸದಿಂದ ಹಿಂದಿರುಗಿರುವುದನ್ನು ಕಾಣಬಹುದು. ನಟಿಯನ್ನು ಮುಂಬೈ ವಿಮಾನ ನಿಲ್ದಾಣದ ಹೊರಗೆ ಪಾಪರಾಜಿಗಳು ಗುರುತಿಸಿದ್ದಾರೆ. ಕಂಪ್ಲೀಟ್​ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಂಗೊಳಿಸಿದ್ದು, ಕ್ಯಾಶುವಲ್​ ನೋಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಟೈಗರ್​ ಸಿನಿಮಾ ನಟಿ ಹೆಚ್ಚಾಗಿ ಸ್ಟೈಲಿಶ್​​ ನೋಟಕ್ಕಿಂತ ಆರಾಮದಾಯಕ ಉಡುಪಿಗೆ ಆದ್ಯತೆ ನೀಡುತ್ತಾರೆ. ಇದು ಅವರ ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತವೆ.

ಇದನ್ನೂ ಓದಿ: ಬಿಪಾಶಾರ ಕಂದಮ್ಮನಿಗೆ ಹೃದ್ರೋಗ.. ಈ ಪರಿಸ್ಥಿತಿ ಯಾವುದೇ ತಾಯಿಗೂ ಬರಬಾರದೆಂದ ನಟಿ

ಈ ನಟಿಮಣಿಯರ ಸಿನಿಮಾ ವಿಚಾರ ಗಮನಿಸುವುದಾದರೆ, ಶಾರುಖ್​ ಖಾನ್​ ಜೊತೆ ದೀಪಿಕಾ ಪಠಾಣ್​ ಚಿತ್ರದಲ್ಲಿ ಕಾಣಿಸಿಕೊಂಡರು. ವರ್ಷಾರಂಭದಲ್ಲಿ ತೆರೆಕಂಡ ಸಿನಿಮಾ ಭರ್ಜರಿ ಯಶಸ್ಸು ಗಳಿಸಿ, 1,000 ಕೋಟಿ ರೂ. ಕ್ಲಬ್​ ಸೇರಿದೆ. ನಟಿಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಕಲ್ಕಿ 2898 ಎಡಿ. ಸೌತ್​ ಸಿನಿಮಾ ಇಂಡಸ್ಟ್ರಿ ಜೊತೆ ಕೈ ಜೋಡಿಸಿದ್ದು, 2024ರ ಜನವರಿ 12ರಂದು ತೆರೆಕಾಣಲಿದೆ. ಇದಲ್ಲದೇ ಹೃತಿಕ್​ ರೋಷನ್​ ಜೊತೆ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ ಫೈಟರ್​​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Friendship Day: ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸಿದ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​

ಕತ್ರಿನಾ ಕೈಫ್​​ ಟೈಗರ್​ 3 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲೆರಡು ಭಾಗದಂತೆ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದು, ನವೆಂಬರ್​ 10ಕ್ಕೆ ಸಿನಿಮಾ ತೆರೆಕಾಣಲಿದೆ. ಇದಲ್ಲದೇ ಸೌತ್​ ಸ್ಟಾರ್​ ಹೀರೋ ವಿಜಯ್​ ಸೇತುಪತಿ ಜೊತೆ ಮೇರಿ ಕ್ರಿಸ್​ಮಸ್​ನಲ್ಲಿ ನಟಿಸುತ್ತಿದ್ದು, ಡಿಸೆಂಬರ್​ 15ರಂದು ಸಿನಿಮಾ ರಿಲೀಸ್ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.