ETV Bharat / entertainment

ರಿಷಬ್​ ಶೆಟ್ಟಿಗೆ ದಾದಾ ಸಾಹೇಬ್​ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ

author img

By

Published : Feb 15, 2023, 7:50 PM IST

Updated : Feb 15, 2023, 8:02 PM IST

ಇದೇ 20ರಂದು ನಟ ರಿಷಬ್ ಶೆಟ್ಟಿ ಅವರು ದಾದಾ ಸಾಹೇಬ್​ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ.

Rishab Shetty
ರಿಷಬ್​ ಶೆಟ್ಟಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ರಿಷಬ್ ಶೆಟ್ಟಿ ಅವರು ದಾದಾ ಸಾಹೇಬ್​ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಗೌರವಕ್ಕೆ ಭಾಜನರಾಗಲಿದ್ದಾರೆ. ಇದೇ 20ರಂದು ಮುಂಬೈನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪಡೆಯಲಿದ್ದಾರೆ.

ದೇಶಾದ್ಯಂತ ಸಿನಿಪ್ರಿಯರನ್ನು ಸೆಳೆದ ನಟ ರಿಷಬ್ ಶೆಟ್ಟಿ ಹೊಸ ಪ್ರಶಸ್ತಿಯೊಂದಿಗೆ ಮತ್ತೆ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ತೆರೆಕಂಡ ಕಾಂತಾರ ಚಿತ್ರ ರಿಷಬ್​ ಶೆಟ್ಟಿ ಅವರಿಗೆ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು. ಕಾಂತಾರ ಚಿತ್ರದಿಂದಾಗಿ ಕರ್ನಾಟಕಕ್ಕೆ ಸೀಮಿತವಾಗಿದ್ದ ನಟ ಈಗ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮಿದ್ದಾರೆ. ಭಾರತ ಸೇರಿದಂತೆ ಹೊರ ದೇಶಗಳಿಂದಲೂ ಸಾಕಷ್ಟು ಮನ್ನಣೆ ಪಡೆದಿರುವ ರಿಷಬ್ ಈಗ ಮತ್ತೊಂದು ಗೌರವಕ್ಕೆ ಪಾತ್ರರಾಗಲಿದ್ದಾರೆ.

'ಕಾಂತಾರ' ಯಶಸ್ಸಿನ ಹಿನ್ನೆಲೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ರಿಷಬ್ ಅವರನ್ನು ಭರವಸೆಯ ನಟ (ಮೋಸ್ಟ್ ಪ್ರಾಮಿಸಿಂಗ್ ನಟ) ವಿಭಾಗದಲ್ಲಿ ಪ್ರಶಸ್ತಿ ಕೊಡಲಾಗುವುದು. ಕೇಂದ್ರ ಸೆನ್ಸಾರ್ ಮಂಡಳಿಯ ಸದಸ್ಯ ಮತ್ತು ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2023ರ ಸಿಇಒ ಅಭಿಷೇಕ್ ಮಿಶ್ರಾ ಅವರು ಪ್ರಕಟಣೆ ಮೂಲಕ ಈ ವಿಷಯ ಪ್ರಕಟಿಸಿದ್ದಾರೆ.

ಕಾರ್ಯಕ್ರಮವು ಫೆಬ್ರವರಿ 20ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್​​ ಹೋಟೆಲ್‌ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಅಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಸಮಾರಂಭದಲ್ಲಿ ಚಿತ್ರರಂಗದ ವೃತ್ತಿಪರರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಈ ಪ್ರಶಸ್ತಿಯನ್ನು ಒಟ್ಟು 28 ವಿಭಾಗಗಳಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ: ಆ್ಯಕ್ಷನ್​​ ಪ್ರಿನ್ಸ್​​ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮಾರ್ಟಿನ್ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್

ಸಿನಿಮಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಹಿರಿಯ ವ್ಯಕ್ತಿಗೆ ಕೇಂದ್ರ ಸರ್ಕಾರದ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತ ಸರ್ಕಾರ ನೀಡುವ ಪ್ರಶಸ್ತಿ ಅತ್ಯುನ್ನತವಾದದ್ದು. ಆದ್ರೆ ರಿಷಬ್​ ಶೆಟ್ಟಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರತಿಷ್ಠಾನ ಪ್ರಶಸ್ತಿಯನ್ನು ವಿತರಿಸಲಿದೆ. ಇದು ಕೇಂದ್ರ ಸರ್ಕಾರದ ಪ್ರಶಸ್ತಿಯಲ್ಲ.

ಇದನ್ನೂ ಓದಿ: 'ಸವಾಲುಗಳನ್ನು ಸ್ವೀಕರಿಸಿ ಸೆಟ್​ಗೆ ಹೆಜ್ಜೆಯಿಡುತ್ತೇನೆ': ನಟಿ ರಶ್ಮಿಕಾ ಮಂದಣ್ಣ

ರಿಕ್ಕಿ ಸಿನಿಮಾ ಬಳಿಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ರಿಷಬ್ ಶೆಟ್ಟಿ ಕಾಂತಾರ ಎಂಬ ಸಿನಿಮಾದಿಂದ ಇಂದು ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಾನು ಯಾವುದೇ ಗೆಲುವನ್ನು ಅಥವಾ ಸೋಲನ್ನು ತಲೆಗೆ ಅಂಟಿಸಿಕೊಳ್ಳುವುದಿಲ್ಲ. ಕೆಲಸ ಮಾಡೋಣ ಎಂದೇ ಯೋಚನೆ ಮಾಡುತ್ತೇನೆ. ಯಾವುದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲೋ ಅಥವಾ ಅವಾರ್ಡ್ ಪಡೆಯಲೋ ನಾನು ಸಿನಿಮಾ ಮಾಡಲ್ಲ ಎಂದು ಈ ಹಿಂದೆ ತಿಳಿಸಿದ್ದರು.

ಕಾಂತಾರ ಸಿನಿಮಾ ಜನರ ಬಾಯಲ್ಲಿ ಓಡಾಡಲು ಪ್ರಮುಖ ಕಾರಣ ನಮ್ಮದು ವೈವಿಧ್ಯಮಯ ದೇಶ. ನಮ್ಮಲ್ಲಿ ಹಲವಾರು ಸಂಸ್ಕೃತಿಗಳು ಇವೆ. ಪ್ರತಿಯೊಬ್ಬರು ಅವರವರ ದೈವಗಳನ್ನು, ದೇವರನ್ನು ಈ‌ ಸಿನಿಮಾದಲ್ಲಿ ನೋಡಿ ಚಿತ್ರಕ್ಕೆ ಕನೆಕ್ಟ್ ಆಗುತ್ತಾ ಹೋದ್ರು. ಈ‌ ಸಿನಿಮಾ ಕೇವಲ ದೈವದ ಬಗ್ಗೆ ಅಲ್ಲ, ಒಂದು ಸಮಾಜದ ಬಗ್ಗೆ, ಹಾಡಿ ಜನರ ಬಗ್ಗೆ ಸೇರಿ ಎಲ್ಲವೂ ಇದೆ. ಹೀಗಾಗಿ ಎಲ್ಲರಿಗೂ ಈ‌ ಸಿನಿಮಾ ಸಂಪರ್ಕಿಸಿತು. ದೈವ ದೇವರು ಯಾರಿಗೂ ಸ್ವಂತ ಅಲ್ಲ. ದೇವರು ದೈವ ಅಂದ್ರೆ ಭಯ ಭಕ್ತಿ ಇರಬೇಕು ಎಂದು ಕೂಡ ತಿಳಿಸಿದ್ದರು.

Last Updated :Feb 15, 2023, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.