ETV Bharat / entertainment

'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಮೆಚ್ಚಿದ ಡಾಲಿ, ಶ್ರುತಿ ಹರಿಹರನ್

author img

By

Published : Dec 5, 2022, 11:45 AM IST

ಯುವ ಪ್ರತಿಭೆಗಳೇ ಸೇರಿ ನಿರ್ಮಾಣ ಮಾಡಿರುವ ಸಿನಿಮಾ 'ಧರಣಿ ಮಂಡಲ ಮಧ್ಯದೊಳಗೆ'. ಕಳೆದ ವಾರದ ಬಿಡುಗಡೆಯಾದ ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್‌ವುಡ್‌ನ ಸೆಲೆಬ್ರೆಟಿಗಳು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Dharani Mandala Madhyadolage Movie
'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಮೆಚ್ಚಿದ ಡಾಲಿ, ಶ್ರುತಿ ಹರಿಹರನ್

ಗುಲ್ಟು ನವೀನ್‌, ಐಶಾನಿ ಶೆಟ್ಟಿ ಹಾಗೂ ಯಶ್ ಶೆಟ್ಟಿ ಅಭಿನಯದ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಡಾಲಿ ಧನಂಜಯ್ ಹಾಗೂ ನಟಿ ಶ್ರುತಿ ಹರಿಹರನ್ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: 'ಧರಣಿ ಮಂಡಲ ಮಧ್ಯದೊಳಗೆ' ಟ್ರೈಲರ್​​ ಬಿಡುಗಡೆ.. ಡಿ.2ಕ್ಕೆ ಸಿನಿಮಾ ರಿಲೀಸ್

ನಟ ಡಾಲಿ ಧನಂಜಯ್ ಮಾತನಾಡಿ, 'ಈ ಸಿನಿಮಾದ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆ. ಕೊನೆವರೆಗೂ ಸಿನಿಮಾ ಪ್ರೇಕ್ಷಕನನ್ನು ಹಿಡಿದಿಡುತ್ತದೆ. ಪ್ರತಿ ಕ್ಷಣ ತುಂಬಾ ಚೆನ್ನಾಗಿತ್ತು. ನಿರ್ದೇಶಕ ಶ್ರೀಧರ್ ಶಿಕಾರಿಪುರ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಗಿಫ್ಟ್ ಎನ್ನಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಗೆಲ್ಲಬೇಕಾಗಿರೋ ಸಿನಿಮಾ.

ಈ ಸಿನಿಮಾ ನೋಡಿ ಮೆಚ್ಚಿ ಒಂದು ಚಾನೆಲ್ ದೊಡ್ಡ ಆಫರ್ ಕೊಟ್ಟಿದೆ. ನಾಳೆ ಟಿವಿಯಲ್ಲೋ, ಒಟಿಟಿಯಲ್ಲೋ ಬಿಡುಗಡೆಯಾದ ಮೇಲೆ ನೋಡಿ ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡ್ವಿ ಅನ್ನೋದಕ್ಕಿಂತ ಈಗಲೇ ಸಿನಿಮಾ ನೋಡಿ' ಎಂದರು.

Dharani Mandala Madhyadolage Movie
'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಮೆಚ್ಚಿದ ಡಾಲಿ, ಶ್ರುತಿ ಹರಿಹರನ್

ಇದನ್ನೂ ಓದಿ: ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಟೀಸರ್ ರಿಲೀಸ್.. ಬೋಲ್ಡ್ ಲುಕ್​ನಲ್ಲಿ ಐಶಾನಿ ಶೆಟ್ಟಿ

ಶ್ರುತಿ ಹರಿಹರನ್ ಮಾತನಾಡಿ, ಟೈಟಲ್ ಕೇಳಿದಾಗಲೇ ಸಿನಿಮಾದಲ್ಲಿ ಏನಿರಬಹುದು ಎಂಬ ಕುತೂಹಲವಿತ್ತು. ಆದರೆ ಸಿನಿಮಾ ನೋಡಿದ ಮೇಲೆ ಇಷ್ಟೊಂದು ಇಷ್ಟವಾಗುತ್ತೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ. ಬರವಣಿಗೆ, ಕಲಾವಿದರ ಅಭಿನಯ ತುಂಬಾ ಅದ್ಭುತವಾಗಿದೆ. ಪ್ರತಿ ಪಾತ್ರಗಳು ನಮಗೆ ಹತ್ತಿರ ಅನ್ನಿಸುತ್ತದೆ.

ನಿರ್ದೇಶಕರು ಸಿನಿಮಾ ಹೆಣೆದ ರೀತಿ, ಬರವಣಿಗೆ ತುಂಬಾ ಚೆನ್ನಾಗಿದೆ. ಪ್ರತಿ ಪಾತ್ರಕ್ಕೂ ಕಥೆಯಲ್ಲಿ ನ್ಯಾಯ ಒದಗಿಸಿದ್ದಾರೆ. ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ನಿರ್ಮಾಪಕ ಓಂಕಾರ್ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಗುಳ್ಟು ಚಿತ್ರದಿಂದಲೇ ನಾನು ನವೀನ್ ಶಂಕರ್ ಫ್ಯಾನ್. ನವೀನ್ ಕನ್ನಡ ಇಂಡಸ್ಟ್ರಿಯ ಅದ್ಭುತ ನಟ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

Daali Dhananjay
ಡಾಲಿ ಧನಂಜಯ್

ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಡಿ.2ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಒಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ಶ್ರೀಧರ್ ಶಿಕಾರಿಪುರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ವಿಮರ್ಶಕರು ಹಾಗೂ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸಿನಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾದ 'ಧರಣಿ ಮಂಡಲ ಮಧ್ಯದೊಳಗೆ': ಬಿಡುಗಡೆಗೆ ಡೇಟ್​​ ಫಿಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.