ETV Bharat / entertainment

ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ಅವರ ತಂದೆ ರಾಮೇಗೌಡ ವಿಧಿವಶ

author img

By ETV Bharat Karnataka Team

Published : Aug 31, 2023, 6:25 PM IST

ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ಅವರ ತಂದೆ ರಾಮೇಗೌಡ ವಯೋಸಹಜ ಖಾಯಿಲೆಯಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ.

Comedian Shivaraj KR Pete father passed away
ತಂದೆ ರಾಮೇಗೌಡ ಹಾಗು ಪುತ್ರ ಶಿವರಾಜ್ ಕೆ.ಆರ್.ಪೇಟೆ

ಕನ್ನಡ ಚಿತ್ರರಂಗದ ಶಿವರಾಜ್ ಕೆ.ಆರ್.ಪೇಟೆ ಅವರ ತಂದೆ ರಾಮೇಗೌಡ (80) ಇಂದು ಕೆ.ಆರ್.ಪೇಟೆಯ ತಮ್ಮ ನಿವಾಸದಲ್ಲಿ ನಿಧನರಾದರು. ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ನಿವಾಸಿಯಾಗಿರುವ ಡ್ರಾಮಾ ಮಾಸ್ಟರ್ ಜನಪ್ರಿಯತೆಯ ರಾಮೇಗೌಡರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

Comedian Shivaraj KR Pete father passed away
ತಂದೆ ರಾಮೇಗೌಡ ಹಾಗು ಪುತ್ರ ಶಿವರಾಜ್ ಕೆ.ಆರ್.ಪೇಟೆ

ರಾಮೇಗೌಡರು ಪತ್ನಿ ಸಾವಿತ್ರಮ್ಮ, ಪುತ್ರ ಕೆ.ಆರ್.ಪೇಟೆ ಶಿವರಾಜ್ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಅಪಾರ ಬಂಧು-ಬಳಗ, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

ನಾಳೆ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಸ್ವಗ್ರಾಮ ರಾಜಘಟ್ಟದಲ್ಲಿ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಸ್ವಚ್ಛತಾ ರಾಯಭಾರಿಯಾಗಿ ನಟ ಮಂಡ್ಯ ರಮೇಶ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.