ETV Bharat / entertainment

ಹೃದಯಾಘಾತಕ್ಕೊಳಗಾದ ಹಾಸ್ಯನಟ ರಾಜು ಶ್ರೀವಾಸ್ತವ್​ ಆರೋಗ್ಯದಲ್ಲಿ ಚೇತರಿಕೆ

author img

By

Published : Aug 25, 2022, 2:55 PM IST

ಹಾಸ್ಯನಟ ರಾಜು ಶ್ರೀವಾಸ್ತವ್​ ಅವರಿಗೆ ಇಂದು ಪ್ರಜ್ಞೆ ಬಂದಿದ್ದು, ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಅವರ ಆಪ್ತ ಕಾರ್ಯದರ್ಶಿ ಗರ್ವಿತ್ ನರಂಗ್ ಮಾಹಿತಿ ನೀಡಿದ್ದಾರೆ.

Comedian Raju Srivastav
ಹಾಸ್ಯನಟ ರಾಜು ಶ್ರೀವಾಸ್ತವ್

ಹೃದಯಾಘಾತಕ್ಕೊಳಗಾಗಿ ದೆಹಲಿ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಉತ್ತರ ಪ್ರದೇಶದ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಅವರ ಆಪ್ತ ಕಾರ್ಯದರ್ಶಿ ಗರ್ವಿತ್ ನರಂಗ್ ತಿಳಿಸಿದ್ದಾರೆ.

ಆಗಸ್ಟ್ 10ರಂದು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಘಾತಕ್ಕೊಳಗಾಗಿ ಅವರು ಕುಸಿದು ಬಿದ್ದಿದ್ದರು. ಅಂದಿನಿಂದ ಏಮ್ಸ್​ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಅವರ ಬ್ರೇನ್​ ಸಂಪೂರ್ಣವಾಗಿ ಡೆಡ್​​ ಆಗಿದೆ ಎಂದು ಹೇಳಲಾಗಿತ್ತು. ಬಳಿಕ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆಂದು ತಿಳಿಸಲಾಯಿತು.

Comedian Raju Srivastav
ಹಾಸ್ಯನಟ ರಾಜು ಶ್ರೀವಾಸ್ತವ್

ಇದನ್ನೂ ಓದಿ: ನಟ ರಾಜು ಶ್ರೀವಾಸ್ತವ್​ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗಳು

ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅವರಿಗೆ ಪ್ರಜ್ಞೆ ಬಂದಿದೆ ಎಂದು ಗರ್ವಿತ್ ನರಂಗ್ ಮಾಹಿತಿ ನೀಡಿದ್ದಾರೆ. ಇನ್ನು, ಡಾ.ನಿತೀಶ್ ನ್ಯಾಯ್ ನೇತೃತ್ವದ ಹೃದ್ರೋಗ ಮತ್ತು ತುರ್ತು ವಿಭಾಗದ ಎಐಐಎಂಎಸ್ ತಂಡ ರಾಜು ಶ್ರೀವಾಸ್ತವ್​ ಅವರಿಗೆ ಚಿಕಿತ್ಸೆ ನೀಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.