ETV Bharat / entertainment

'ಹೊಸ ದ್ವೇಷಿಗರು ಬೇಕಾಗಿದ್ದಾರೆ, ಹಳೇಬರು ನನ್ನನ್ನು ಇಷ್ಟಪಡುತ್ತಿದ್ದಾರೆ' - ಉದ್ಯಮಿ ರಾಜ್ ಕುಂದ್ರಾ ಟ್ವೀಟ್

author img

By

Published : Sep 10, 2022, 4:17 PM IST

"ನನಗೆ ಹೊಸ ದ್ವೇಷಿಗಳು ಬೇಕು, ಏಕೆಂದರೆ ಹಳೆಯವರು ನನ್ನನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ" ಎಂದು ಉದ್ಯಮಿ ರಾಜ್ ಕುಂದ್ರಾ ಟ್ವೀಟ್ ಮಾಡಿ ಮತ್ತಷ್ಟು ದ್ವೇಷಿಗಳನ್ನು ಆಹ್ವಾನಿಸಿದ್ದಾರೆ.

business man raj kundra tweet on haters
ಉದ್ಯಮಿ ರಾಜ್ ಕುಂದ್ರಾ - ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಸೆಪ್ಟೆಂಬರ್ 9 ರಂದು 47ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜನ್ಮದಿನದಂದು ರಾಜ್ ಸಾಮಾಜಿಕ ಮಾಧ್ಯಮದಲ್ಲಿ, ತಮ್ಮ ದ್ವೇಷಿಗಳಿಗೆ​ ಒನ್​ ಲೈನ್​ ಕ್ಯಾಪ್ಷನ್​ ಇರುವ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.

ಶುಕ್ರವಾರ ರಾಜ್ ಕುಂದ್ರಾ ಟ್ವೀಟ್ ಮಾಡಿದ್ದಾರೆ. ಡೆನಿಮ್, ಕಪ್ಪು ಜಾಕೆಟ್, ಸಂಪೂರ್ಣ ಮುಖ ಮುಚ್ಚುವ ಮಾಸ್ಕ್​ ಧರಿಸಿರುವ ಫೋಟೋದೊಂದಿಗೆ, ತಮ್ಮ ದ್ವೇಷಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. "ನನಗೆ ಹೊಸ ದ್ವೇಷಿಗಳು ಬೇಕು, ಏಕೆಂದರೆ ಹಳೆಯವರು ನನ್ನನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ" ಎಂದು ಟ್ವೀಟ್ ಮಾಡುವ ಮೂಲಕ ಮತ್ತಷ್ಟು ದ್ವೇಷಿಗಳನ್ನು ಆಹ್ವಾನಿಸಿದ್ದಾರೆ.

ಇದಕ್ಕೆ ಟ್ವಿಟರ್​ ಬಳಕೆದಾರರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರಾಜ್ ದ್ವೇಷಿಗಳನ್ನು ತೊಡೆದುಹಾಕಲು ಬಯಸಿದರೆ "ಗ್ರಹವನ್ನು ಬದಲಿಸಿ" ಎಂದು ಸಲಹೆ ನೀಡುತ್ತಿದ್ದಾರೆ. ಕೆಲವರು ಬಿಗ್ ಬಾಸ್ 16 ಮನೆಗೆ ಪ್ರವೇಶಿಸದಂತೆ ಎಚ್ಚರಿಕೆ ನೀಡುತ್ತಿದ್ದಾರೆ.

business man raj kundra tweet on haters
ಉದ್ಯಮಿ ರಾಜ್ ಕುಂದ್ರಾ - ನಟಿ ಶಿಲ್ಪಾ ಶೆಟ್ಟಿ

ವರದಿಗಳ ಪ್ರಕಾರ, ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ ಹೊಸ ಸೀಸನ್‌ಗಾಗಿ ಕುಂದ್ರಾ ಅವರನ್ನು ಸಂಪರ್ಕಿಸಲಾಗಿದೆ. ರಾಜ್ ಮತ್ತು ಕಾರ್ಯಕ್ರಮದ ತಯಾರಕರ ನಡುವೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: ಕನ್ನಡ ಸಿನಿಮಾ ಇಂಡಸ್ಟ್ರಿ ಚಿಕ್ಕದಲ್ಲ, ಕೆಜಿಎಫ್​​ ಎಲ್ಲೆಡೆ ಸದ್ದು ಮಾಡಿದೆ: ನಟ ಅರ್ಜುನ್ ಸರ್ಜಾ

ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿದ ಆರೋಪದ ಮೇಲೆ 2021ರ ಜುಲೈನಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಜಾಮೀನು ನೀಡಲಾಯಿತು. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಂದಿನಿಂದ ಅವರು ಸಂಪೂರ್ಣ ಮುಖ ಮುಚ್ಚುವ ಮಾಸ್ಕ್​​ ಧರಿಸಿ ಓಡಾಡುತ್ತಿದ್ದಾರೆ. ಮಾಧ್ಯಮಗಳ ಕಣ್ಣು ತಪ್ಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.