ETV Bharat / entertainment

Buddhivantha 2: ಉಪೇಂದ್ರ ಫ್ಯಾನ್ಸ್​ಗೆ ಗುಡ್​ ನ್ಯೂಸ್ - ಬುದ್ಧಿವಂತ 2 ರಿಲೀಸ್​ ಡೇಟ್​ ಫಿಕ್ಸ್!

author img

By

Published : Jul 25, 2023, 12:42 PM IST

Buddhivantha 2 release date: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬುದ್ಧಿವಂತ 2 ಸಿನಿಮಾ ಬಿಡುಗಡೆಗೆ ದಿನ ನಿಗದಿಯಾಗಿದೆ.

Buddhivantha 2 release date
ಬುದ್ಧಿವಂತ 2 ರಿಲೀಸ್​ ಡೇಟ್​ ಅನೌನ್ಸ್

ವಿಭಿನ್ನ ಪಾತ್ರ, ಕಥೆ ಹಾಗು ನಟನೆಯ ಮೂಲಕ ಸ್ಯಾಂಡಲ್​​ವುಡ್​ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ತಮ್ಮದೇ ಆದ ಸ್ಟಾರ್‌ಡಮ್​​ ಕ್ರಿಯೇಟ್ ‌ಮಾಡಿರುವ ನಟರೆಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ. ನಟ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಇವರು ಬಹುಬೇಡಿಕೆ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಇವರ 'ಕಬ್ಜ' ಚಿತ್ರ ತೆರೆಕಂಡಿತ್ತು. ಆದ್ರೆ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿನ್ನಡೆ ಕಂಡಿತ್ತು.

ಅಭಿಮಾನಿಗಳಿಗೆ ಗುಡ್​ ನ್ಯೂಸ್: ಕಬ್ಜ ಸಿನಿಮಾದ ನಂತರ ಉಪೇಂದ್ರ ಅಭಿನಯದ ಯಾವ ಚಿತ್ರ ಮೊದಲು ಬಿಡುಗಡೆ ಆಗಲಿದೆ ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು‌. ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಉಪ್ಪಿ ಹುಟ್ಟುಹಬ್ಬದ ಸಂದರ್ಭದಲ್ಲಿ ಬುದ್ಧಿವಂತ 2 ಸಿನಿಮಾ ಅದ್ಧೂರಿಯಾಗಿ ತೆರೆಕಾಣಲಿದೆ.

ಬುದ್ಧಿವಂತ 2 ರಿಲೀಸ್​ ಡೇಟ್​ ಫಿಕ್ಸ್‌ : ಉಪ್ಪಿ ಮತ್ತೆ ಹುಟ್ಟಿ ಬಾ ಚಿತ್ರದ ಬಳಿಕ ಉಪೇಂದ್ರ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವೇ ಬುದ್ಧಿವಂತ 2. ಪೋಸ್ಟರ್​ಗಳಿಂದಲೂ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಬುದ್ಧಿವಂತ 2 ಯಾವಾಗ ಬಿಡುಗಡೆ ಆಗಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.‌ ಈ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ. ಸಿನಿಮಾ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.‌

Buddhivantha 2 release date
ಬುದ್ಧಿವಂತ 2 ರಿಲೀಸ್​ ಡೇಟ್​ ಅನೌನ್ಸ್

ಸೆಪ್ಟೆಂಬರ್ 18ರಂದು 'ಬುದ್ಧಿವಂತ' ಎಂದೇ ಜನಪ್ರಿಯರಾಗಿರುವ ಉಪೇಂದ್ರ ಅವರ ಹುಟ್ಟುಹಬ್ಬವಿದೆ. ಹುಟ್ಟುಹಬ್ಬಕ್ಕೂ ಮುನ್ನ ಬುದ್ಧಿವಂತ 2 ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಹಂಚಲಿದೆ. ರಿಲೀಸ್ ಡೇಟ್​ ಅನೌನ್ಸ್ ಆದ ಹಿನ್ನೆಲೆಯಲ್ಲಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಸೋನಾಲ್ ಮೊಂಟೆರೊ ಹಾಗೂ ಮೇಘನರಾಜ್ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ವಿಭಿನ್ನ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: Ragini Dwivedi: ವೃಷಭ ಸಿನಿಮಾದಲ್ಲಿ ಮೋಹನ್ ಲಾಲ್‌ ಜೊತೆ ರಾಗಿಣಿ ದ್ವಿವೇದಿ ನಟನೆ

ಸಾಕಷ್ಟು ನಿರ್ದೇಶಕರೊಂದಿಗೆ ‌ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಜಯರಾಮ್ ಮಾಧವನ್ ಬುದ್ಧಿವಂತ 2‌ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಗುರುಕಿರಣ್ ಸಂಗೀತ, ಎಸ್.ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಹಾಗು ವಿಕ್ರಮ್ ಅವರ ಸಾಹಸ ನಿರ್ದೇಶನ ಬಹುನಿರೀಕ್ಷಿತ ಚಿತ್ರಕ್ಕಿದೆ.

ಇದನ್ನೂ ಓದಿ: Dhoni wife Sakshi: 'ನಾನು ಅಲ್ಲು ಅರ್ಜುನ್ ಫ್ಯಾನ್​, ಪ್ರಭಾಸ್ ಜೊತೆ ಸಿನಿಮಾ ಮಾಡುವ ಯೋಚನೆಯಿದೆ': ಧೋನಿ ಪತ್ನಿ ಸಾಕ್ಷಿ

ಚಮಕ್, ಅಯೋಗ್ಯ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಡಾ.ಟಿ.ಆರ್ ಚಂದ್ರಶೇಖರ್ ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಟೈಟಲ್​ನಿಂದಲೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿರುವ ಬುದ್ದಿವಂತ 2 ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಕಿಕ್ ಕೊಡಲಿದೆ ಅನ್ನೋದು ಸೆಪ್ಟೆಂಬರ್ 15ರಂದು ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.