ETV Bharat / entertainment

ಸ್ಯಾಂಡಲ್​ವುಡ್​ನಿಂದ ಮತ್ತೊಂದು ಪ್ಯಾನ್​​ ಇಂಡಿಯಾ ಸಿನಿಮಾ.. ಕಬ್ಜಗಾಗಿ ಕಾಯುತ್ತಿರುವ ಬಾಲಿವುಡ್

author img

By

Published : Nov 4, 2022, 8:10 PM IST

ಬಾಲಿವುಡ್​ನ ಸಿನಿಮಾ ವಿಮರ್ಷಕ ತರಣ್​ ಆದರ್ಶ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಂಡಿದ್ದಾರೆ. ಮತ್ತೊಂದು ದೊಡ್ಡ ಸಿನಿಮಾ ಬಿಡುಗಡೆಗೆ ಕನ್ನಡ ಚಿತ್ರರಂಗ ಸಿದ್ಧವಾಗಿದೆ ಎಂದು ಬರೆದಿದ್ದಾರೆ.

Bollywood eyes on Kabza
ಕಬ್ಜಗಾಗಿ ಕಾಯುತ್ತಿರುವ ಬಾಲಿವುಡ್

ಸ್ಯಾಂಡಲ್​ವುಡ್ ಚಿತ್ರಗಳು ಈ ವರ್ಷ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿವೆ. ಕೆಜಿಎಫ್​ 2, 777 ಚಾರ್ಲಿ ಹಾಗೂ ಕಾಂತಾರ ಚಿತ್ರಗಳು ಬಾಲಿವುಡ್​ ಚಿತ್ರಗಳ ಗಳಿಕೆಯನ್ನೂ ಮೀರಿಸಿ ಹೊಸ ದಾಖಲೆಯನ್ನು ನಿರ್ಮಿಸಿವೆ. ಈ ಚಿತ್ರಗಳ ನಂತರ ಇದೀಗ ಬಾಲಿವುಡ್​ನ ಕಣ್ಣು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸುದೀಪ್​ ಅಭಿನಯದ ಬಹಕೋಟಿ ವೆಚ್ಚದ ಕಬ್ಜ ಚಿತ್ರದ ಮೇಲಿದೆ.

ಹೌದು ಟೀಸರ್​ನಿಂದಲೇ ದಕ್ಷಿಣ ಭಾರತದಲ್ಲಿ ಹೊಸ ದಾಖಲೆ ಬರೆದಿರೋ ಕಬ್ಜ ಟೀಸರ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಈ ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಕೇವಲ ಪ್ರೇಕ್ಷಕರಷ್ಟೇ ಅಲ್ಲ, ಬೇರೆ ಚಿತ್ರರಂಗಗಳು ಸಹ ಕತೂಹಲ ಇಟ್ಟುಕೊಂಡಿದೆ.

ಇನ್ನೂ ಬಾಲಿವುಡ್​ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಂಡಿದ್ದಾರೆ. ಮತ್ತೊಂದು ದೊಡ್ಡ ಸಿನಿಮಾ ಬಿಡುಗಡೆಗೆ ಕನ್ನಡ ಚಿತ್ರರಂಗ ಸಿದ್ಧವಾಗಿದೆ ಎಂದು ಬರೆದಿದ್ದಾರೆ.

ಆರ್​. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಏಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಉಪೇಂದ್ರ ಜೊತೆಗೆಸುದೀಪ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್​, ನವಾಬ್​ ಷಾ, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ ಕಬ್ಜ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ: ಗಂಧದ ಗುಡಿ ವೀಕ್ಷಿಸಿ ಅಶ್ವಿನಿ ಅವರನ್ನು ಅಪ್ಪಿಕೊಂಡು ಭಾವುಕರಾದ ಮಕ್ಕಳು

ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಚಿತ್ರಕಿದೆ. ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಜೊತೆಗೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕಬ್ಜ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇರೋದಂತೂ ಗ್ಯಾರಂಟಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.