ETV Bharat / entertainment

ನಾಳೆ ಮೆಗಾಸ್ಟಾರ್​ ಚಿರಂಜೀವಿ ಹುಟ್ಟುಹಬ್ಬ..ಬೋಲಾ ಶಂಕರ್ ಬಿಡುಗಡೆ ದಿನಾಂಕ ಅನೌನ್ಸ್

author img

By

Published : Aug 21, 2022, 7:53 PM IST

ನಾಳೆ ಚಿರಂಜೀವಿ ಹುಟ್ಟುಹಬ್ಬ ಆಚರಣೆಯ ಭಾಗವಾಗಿ, ಭೋಲಾ ಶಂಕರ್ ಸಿನಿಮಾ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಲಾಗಿದೆ.

Chiranjeevi birthday
ಮೆಗಾಸ್ಟಾರ್​ ಚಿರಂಜೀವಿ

ಟಾಲಿವುಡ್​ ಖ್ಯಾತ ನಟ, ಮೆಗಾಸ್ಟಾರ್ ಚಿರಂಜೀವಿ 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಜನ್ಮದಿನದ ಹಿನ್ನೆಲೆ ಅವರ ಹೊಸ ಚಿತ್ರ ಬೋಲಾ ಶಂಕರ್ ಬಿಡುಗಡೆ ದಿನಾಂಕದ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಆ್ಯಕ್ಷನ್ ಎಂಟರ್​ಟೈನ್​ಮೆಂಟ್ ಬೋಲಾ ಶಂಕರ್ ಸಿನಿಮಾ 2023ರ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ.

Chiranjeevi birthday
ಬೋಲಾ ಶಂಕರ್ ಪೋಸ್ಟರ್ ಬಿಡುಗಡೆ

ಮೆಹರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ಮತ್ತು ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಚಿತ್ರದ ಹೊಸ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಟ್ವಿಟರ್, ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ನಾಳೆ ಚಿರಂಜೀವಿ ಹುಟ್ಟುಹಬ್ಬ ಆಚರಣೆಯ ನಿಮಿತ್ತ ಭೋಲಾ ಶಂಕರ್ ಸಿನಿಮಾ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಶೇರ್ ಮಾಡಲಾಗಿದೆ. 2023ರ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಎಂದು ತರಣ್ ಆದರ್ಶ್ ಬರೆದಿದ್ದಾರೆ.

ಭೋಲಾ ಶಂಕರ್ ತಮಿಳು ಚಲನಚಿತ್ರ ವೇದಲಂನ ಅಧಿಕೃತ ತೆಲುಗು ರಿಮೇಕ್ ಆಗಿದ್ದು, ಅಜಿತ್ ಕುಮಾರ್, ಲಕ್ಷ್ಮಿ ಮೆನನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭೋಲಾ ಶಂಕರ್ ಜೊತೆಗೆ ಚಿರಂಜೀವಿ ರಾಜಕೀಯ ಥ್ರಿಲ್ಲರ್ ಚಿತ್ರ ಗಾಡ್ ಫಾದರ್‌ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದು ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ ಮಲಯಾಳಂ ಚಿತ್ರ ಲೂಸಿಫರ್‌ನ ತೆಲುಗು ರಿಮೇಕ್ ಆಗಿದೆ. ಈ ಚಿತ್ರದಲ್ಲಿ ನಯನತಾರಾ ಮತ್ತು ಸತ್ಯ ದೇವ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದಸರಾ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮೆಗಾಸ್ಟಾರ್​ ಚಿರಂಜೀವಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅಭಿಮಾನಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ರಾಜಕೀಯಕ್ಕೂ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಚುನಾವಣಾ ರಾಜಕೀಯದಲ್ಲಿ ಸೋಲು-ಗೆಲುವು ಕಂಡ ನಾಯಕನಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಚಿರಂಜೀವಿ ಜನ್ಮದಿನದಂದು ನಟ ಮಹೇಶ್ ಬಾಬು ಈ ಚಿತ್ರದ ಟೈಟಲ್ ಅನಾವರಣಗೊಳಿಸಿ, ಮೆಗಾಸ್ಟಾರ್​ಗೆ ಶುಭಾಶಯ ಕೋರಿದ್ದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾಗಳು ಫೇಲ್ಯೂರ್.. ಇದಕ್ಕೆ ನಾನೇ ಕಾರಣ, ಬದಲಾವಣೆ ಅಗತ್ಯ ಎಂದ ಸೂಪರ್ ಸ್ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.