'ಭಕ್ಷಕ್'​ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿರುವ ನಟಿ ಭೂಮಿ ಪಡ್ನೇಕರ್​

author img

By ETV Bharat Karnataka Desk

Published : Jan 18, 2024, 3:22 PM IST

bhakshak-teaser-out-bhumi-pednekar-plays-a-journalist-in-streaming-film-watch

Bhakshak teaser out: ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳಲ್ಲಿ ನಟಿಸುವ ಮೂಲಕ ಈಗಾಗಲೇ ಗುರುತಿಸಿಕೊಂಡಿರುವ ಭೂಮಿ ಈಗ ಅಂತಹುದ್ದೇ ಮತ್ತೊಂದು ಪಾತ್ರದಲ್ಲಿ ಮಿಂಚಲಿದ್ದಾರೆ.

ಹೈದರಾಬಾದ್​: ಭೂಮಿ ಪಡ್ನೇಕರ್​ ಅಭಿಯನದ ಕ್ರೈಂ ಥ್ರಿಲ್ಲರ್​ ಚಿತ್ರ 'ಭಕ್ಷಕ್'​ ಚಿತ್ರದ ಟೀಸರ್​ ಅನ್ನು ಚಿತ್ರ ತಂಡ ಗುರುವಾರ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಸಂಜಯ್​ ಮಿಶ್ರಾ, ಆದಿತ್ಯ ಶ್ರೀವಾತ್ಸವ್​ ಮತ್ತು ಸಾರಿ ತಮ್ಹಂಕರ್​ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರ ಫೆಬ್ರವರಿ 9ರಂದು ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ನಿರ್ಮಾಪಕಿ ಗೌರಿ ಖಾನ್​, "ಭಕ್ಷಕ್​ ಚಿತ್ರದ ಟೀಸರ್​​ ಅನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲ ವೈರುಧ್ಯಗಳ ವಿರುದ್ಧವಾಗಿ ಸತ್ಯ ಹುಡುಕಲು ನಿರ್ಭಿತಿಯ ಪತ್ರಕರ್ತೆಯ ಮಿಷನ್​ ಇದು ಎಂದು ಬರೆದಿದ್ದಾರೆ. ಚಿತ್ರ ಘಟನೆಯೊಂದರ ಪ್ರೇರಿತವಾಗಿದ್ದು, ಈ ಚಿತ್ರವೂ ನೆಟ್​ಫ್ಲಿಕ್ಸ್​ನಲ್ಲಿ ಇದೆ ಫೆಬ್ರವರಿ 9ರಂದು ಬಿಡುಗಡೆಯಾಗಲಿದೆ" ಎಂದು ತಿಳಿಸಿದ್ದಾರೆ. ಇನ್ನು ಗೌರಿ ಅವರ ಈ ಟೀಸರ್​ ಪೋಸ್ಟ್​​ಗೆ ಸ್ನೇಹಿತರು ಮತ್ತು ಆತ್ಮೀಯರು ಕಮೆಂಟ್​ ಮೂಲಕ ಶುಭಾಶಯ ಮತ್ತು ಹೃದಯ ಮತ್ತು ಫೈರ್​ ಎಮೋಜಿ ಹಾಕಿದ್ದಾರೆ.

ಟೀಸರ್​ ವೀಕ್ಷಿಸಿದ ಬಳಕೆದಾರರು, ಇದು ನಿಜಕ್ಕೂ ಉತ್ತಮ ಎಂಬಂತೆ ಕಂಡಿದೆ. ಭೂಮಿ ಪಡ್ನೇಕರ್​​ ಈ ಪಾತ್ರದಲ್ಲಿ ಅದ್ಬುತವಾಗಿ ಕಂಡಿದ್ದಾರೆ. ಕಳೆದ ವರ್ಷವೂ ಅಫ್ವಾದಲ್ಲಿ ಅವರು ಮನೋರಂಜಿಸಿದ್ದರು. ಇದೀಗ ಮತ್ತೆ ಜನರನ್ನು ಸೆಳೆಯಲಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು ಭಕ್ಷಕ್​​ ನೋಡಲು ತುಂಬಾ ಆಸಕ್ತಿದಾಯಕವಾಗಿದೆ ಎಂದು ತಿಳಿಸಿದ್ದಾರೆ.

ಪುಲ್ಕಿಟ್​​​ ಈ ಚಿತ್ರವನ್ನು ನಿರ್ದೇಶಿಸಿದ್ದು, ಸತ್ಯವನ್ನು ತಿಳಿಸಲು ಮಹಿಳೆಯೊಬ್ಬರ ಹೋರಾಟದ ಕಥೆಯನ್ನು ಹೆಣೆಯಲಾಗಿದೆ. ಭೂಮಿ ಪಡ್ನೇಕರ್​ ಚಿತ್ರದಲ್ಲಿ ವೈಶಾಲಿ ಸಿಂಗ್​ ಆಗಿ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ನೈಜತೆ ಮತ್ತು ವಾಸ್ತವದ ಮೇಲೆ ಬೆಳಕು ಚೆಲ್ಲಲು ಹೊರಡುವ ಭಯಾನಕ ಕ್ರೈಂ ಥ್ರಿಲ್ಲರ್​ ಕಥೆಯನ್ನು ಇದು ಹೊಂದಿದೆ. ಟೀಸರ್​ನಲ್ಲಿ ಭೂಮಿ, 'ನಿಮಗೆ ಅರ್ಥವಾಗುತ್ತಿದ್ದೆಯಾ? ನಾವು ಬಾಲಕಿಯರ ಹಕ್ಕುಗಳಿಗೆ ಹೋರಾಡುತ್ತಿದ್ದೇವೆ' ಎಂದಿದ್ದಾರೆ.

ನಮ್ಮ ಗುರಿಯು ಸಮಾಜದ ಕಟು ಸತ್ಯಗಳ ಮೇಲೆ ಬೆಳಕು ಚೆಲ್ಲುವುದು. ಗಣನೀಯ ಬದಲಾವಣೆ ನಿಟ್ಟಿನಲ್ಲಿ ಸಂವಾದ ನಡೆಸುವುದಾಗಿದೆ. ಇಂತಹ ಸಂವಾದದಲ್ಲಿ ಮತ್ತಷ್ಟು ಜನರು ಸೇರುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೇನೆ ಎಂದು ನಿರ್ದೇಶಕಿ ಪುಲ್ಕಿಟ್​​ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಚಿತ್ರವನ್ನು ಶಾರುಖ್​ ಖಾನ್​ ಬ್ಯಾನರ್​ ರೆಡ್​ ಚಿಲ್ಲಿಸ್​ ಎಂಟರ್​ಟೈನಮೆಂಟ್​ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಗೌರಿ ಖಾನ್​ ಮತ್ತು ಗೌರವ್​​ ವರ್ಮಾ ನಿರ್ಮಾಣ ಮಾಡಿದ್ದಾರೆ. ಬಾಲಕಿರಿಯರ ವಿರುದ್ಧ ನಡೆಯುವ ದೌರ್ಜನ್ಯದ ಕಥೆಯನ್ನು ಬಿಚ್ಚಿಡುವ ಪ್ರಯತ್ನ ಚಿತ್ರದಲ್ಲಿ ನಡೆಸಲಾಗಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದೆ.

ಇದನ್ನೂ ಓದಿ: ಪೃಥ್ವಿರಾಜ್ ಸುಕುಮಾರನ್​​ ಅಭಿನಯದ 'ದಿ ಗೋಟ್ ಲೈಫ್​​'ಗೆ ರಣ್​ವೀರ್​​ ಸಿಂಗ್​ ಸಾಥ್; ಪೋಸ್ಟರ್ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.