ETV Bharat / entertainment

'ದಿ ಎಲಿಫೆಂಟ್​ ವಿಸ್ಪರರ್ಸ್​' ಖ್ಯಾತಿಯ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮೇಲೆ ಬೆಳ್ಳಿ ಬೊಮ್ಮನ್​ ಗಂಭೀರ ಆರೋಪ

author img

By

Published : Aug 7, 2023, 2:04 PM IST

ತಾವು ಕೊಟ್ಟ ಹಣವನ್ನು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಹಿಂತಿರುಗಿಸಿಲ್ಲ ಎಂದು ಬೆಳ್ಳಿ ಹಾಗೂ ಬೊಮ್ಮನ್​ ಅವರು ಆರೋಪ ಮಾಡಿದ್ದಾರೆ.

bellie bomman allegation on director kartiki gonsalves
ಕಾರ್ತಿಕಿ ಗೊನ್ಸಾಲ್ವಿಸ್ ಮೇಲೆ ಬೆಳ್ಳಿ ಬೊಮ್ಮನ್​ ಆರೋಪ

ಪ್ರತಿಷ್ಠಿತ ಆಸ್ಕರ್​ ಅವಾರ್ಡ್​ ವಿಜೇತ 'ದಿ ಎಲಿಫೆಂಟ್​ ವಿಸ್ಪರರ್ಸ್​' ಡಾಕ್ಯುಮೆಂಟರಿ ಸಿನಿಮಾದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್​ ವಿರುದ್ಧ ಬೆಲ್ಲಿ ಹಾಗೂ ಬೊಮ್ಮನ್​ ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷ್ಯಚಿತ್ರವನ್ನು ಚಿತ್ರೀಕರಣ ಮಾಡುವ ವೇಲೆ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್​ ತಮ್ಮೊಂದಿಗೆ ಬಹಳ ಆತ್ಮೀಯವಾಗಿದ್ದರು. ಆದರೆ, ಸಾಕ್ಷ್ಯಚಿತ್ರ ಆಸ್ಕರ್​ ಪ್ರಶಸ್ತಿ ಗೆದ್ದ ನಂತರ ಅವರು ಬದಲಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಫೋನ್​ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಹಾಗೂ ತಮಗೆ ಇದುವರೆಗೆ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಬೆಳ್ಳಿ ಹಾಗೂ ಬೊಮ್ಮನ್​ ಅವರು ಆಸ್ಕರ್​ ವಿಜೇತ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್​ ಮೇಲೆ ಹಣ ಹಿಂತಿರುಗಿಸದೇ ಇರುವ ಗಂಭೀರ ಆರೋಪ ಮಾಡಿದ್ದಾರೆ.

"ಸಾಕ್ಷ್ಯಚಿತ್ರ ಶೂಟಿಂಗ್​ ಸಮಯದಲ್ಲಿ ನಿರ್ದೇಶಕಿ ಕಾರ್ತಿನಿ ಗೊನ್ಸಾಲ್ವಿಸ್​ ಅವರು ನಮ್ಮೊಂದಿಗೆ ತುಂಬಾ ಚೆನ್ನಾಗಿದ್ದರು. ಶೂಟಿಂಗ್​ ಸಮಯದಲ್ಲಿ ಒಂದು ದಿನ ನಮ್ಮ ಬಳಿ ಬಂದು, ಒಂದು ಮದುವೆಯ ದೃಶ್ಯ ಶೂಟ್​ ಮಾಡಲು ಬಯಸುವುದಾಗಿ ಹೇಳಿದ್ದರು. ಅವರ ಬಳಿ ಹಣವಿಲ್ಲದ ಕಾರಣ ನಮ್ಮ ಬಳಿ ಅದರ ವ್ಯವಸ್ಥೆ ಮಾಡಲು ಕೇಳಿದರು. ಮೊಮ್ಮಗಳ ವಿದ್ಯಾಭ್ಯಾಸ್ಕಾಗಿ ಬೆಲ್ಲಿ ಕೂಡಿಟ್ಟಿದ್ದ ಹಣವನ್ನು ನಾವೇ ತೆಗೆದು ಅವರಿಗೆ ಕೊಟ್ಟೆವು. ಮದುವೆ ಸಮಾರಂಭದ ದೃಶ್ಯದ ಚಿತ್ರೀಕರಣಕ್ಕಾಗಿ ನಾವು ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿದೆವು. ನಾವು ಕರೆ ಮಾಡಿ ಕೇಳಿದಾಗ ಅದನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಮಾಡಿಲ್ಲ. ಆದರೆ ನಾವು ಕರೆ ಮಾಡಿದಾಗ ಬ್ಯುಸಿ ಇದ್ದೇನೆ ಎಂದು ಹೇಳಿ ಕಾಲ್​ ಕಟ್​ ಮಾಡುತ್ತಿದ್ದಾರೆ" ಎಂದು ದುಃಖ ತೋಡಿಕೊಂಡಿದ್ದಾರೆ.

"ಅವರು ನಮ್ಮಿಂದಾಗಿ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಗೆದ್ರು. ಆದರೆ, ಅಭಿನಂದನಾ ಸಮಾರಂಭದಲ್ಲಿ ಆಸ್ಕರ್​ ಪ್ರಶಸ್ತಿಯನ್ನು ಹಿಡಿಯಲು ಕೂಡ ಅವರು ಬಿಡಲಿಲ್ಲ. ಈ ಸಾಕ್ಷ್ಯಚಿತ್ರದ ನಂತರ ನಾವು ನಮ್ಮ ಸ್ಥೈರ್ಯವನ್ನು ಕಳೆದುಕೊಂಡಿದ್ದೇವೆ." ಎಂದು ಸಂದರ್ಶನದಲ್ಲಿ ಆರೋಪಿಸಿದರು. ಸಾಕ್ಷ್ಯಚಿತ್ರ ನಿರ್ಮಾಣ ಸಂಸ್ಥೆ ಈ ದಂಪತಿಯ ಆರೋಪವನ್ನು ತಳ್ಳಿ ಹಾಕಿದ್ದು, ಅವರ ಮಾತುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾವು ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರ್ಯವನ್ನು ಹೊಗಳುವ ಉದ್ದೇಶದಿಂದ ಈ ಸಾಕ್ಷ್ಯಚಿತ್ರವನ್ನು ಪರಾರಂಭಿಸಿದೆವು ಎಂದು ಹೇಳಿದೆ.

ತಮಿಳುನಾಡಿದ ಮುದುಮಲೈ ಮೀಸಲು ಅರಣ್ಯದಲ್ಲಿ ಆನೆ ಪಾಲಕರಾಗಿ ಕೆಲಸ ಮಾಡುವ ಬೆಲ್ಲಿ ಹಾಗೂ ಬೊಮ್ಮನ್​ ದಂಪತಿಯ ನಿಜ ಜೀವನವನ್ನುಆಧರಿಸಿ, 'ದಿ ಎಲಿಫೆಂಟ್​ ವಿಸ್ಪರರ್ಸ್​' ಎಂಬ ಸಾಕ್ಷ್ಯವಿತ್ರವನ್ನು ನಿರ್ಮಿಸಲಾಗಿದೆ. ರಘು ಮತ್ತು ಅಮ್ಮು ಎಂಬ ಎರಡು ಆನೆ ಮರಿಗಳು ಹಾಗೂ ಅವುಗಳನ್ನು ಪಾಲನೆ ಮಾಡುವಂಥ ದಂಪತಿಯ ಸುತ್ತ ಕಥೆ ಸುತ್ತುತ್ತದೆ. ನಿರ್ಮಾಪಕಿ ಗುನೀತ್​ ಮೊಂಗಾ ಅವರು ಮಾರ್ಗದರ್ಶನದಲ್ಲಿ ನಿರ್ದೇಶಕಿ ಕಾರ್ತಿನಿ ಗೊನ್ಸಾಲ್ವಿಸ್​ ಈ ಸಾಕ್ಷ್ಯಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 42 ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರವು 2023ರ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್​ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಇದನ್ನೂ ಓದಿ: Keerthy Suresh: 'ಭೋಲಾ ಶಂಕರ್' ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಕೀರ್ತಿ ಸುರೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.