ETV Bharat / entertainment

ಸಪ್ತಪದಿ ತುಳಿಯಲು ಸಿದ್ದವಾದ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್...

author img

By

Published : Jan 13, 2023, 8:18 PM IST

ಈ ತಿಂಗಳ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ - ಅಥಿಯಾ ತಂದೆ ಹಿರಿಯ ನಟ ಸುನೀಲ್ ಶೆಟ್ಟಿಯವರ ಮಹಾರಾಷ್ಟ್ರದ ಖಂಡಾಲಾ ಬಂಗಲೆಯಲ್ಲಿ ನಡೆಲಿದೆ ಅದ್ದೂರಿ ವಿವಾಹ ಮಹೋತ್ಸವ.

Athiya Shetty and KL Rahul khandala wedding
ಸಪ್ತಪದಿ ತುಳಿಯಲು ಸಿದ್ದವಾದ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್

ಹೈದರಾಬಾದ್(ತೆಲಂಗಾಣ):ಲವ್ ಬರ್ಡ್ಸ್ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆ ಇದೇ ತಿಂಗಳ ಕೊನೆಯಲ್ಲಿ ನಡೆಯಲಿದೆ. ಈ ಜೋಡಿಯು ವಿವಾಹವು ಜನವರಿ 21 ರಿಂದ 23 ರ ವರೆಗೆ 3 ದಿನಗಳ ಕಾಲ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಥಿಯಾ ಮತ್ತು ರಾಹುಲ್ ಮಹಾರಾಷ್ಟ್ರದ ಖಂಡಾಲಾದಲ್ಲಿ ಅದ್ಧೂರಿಯಾಗಿ ವಿವಾಹವನ್ನು ಮಾಡಿಕೊಳ್ಳಲಿದ್ದಾರೆ. ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರ ವಿವಾಹವು 2023ರಲ್ಲಿ ನಡೆಯುತ್ತಿರುವ ಬಾಲಿವುಡ್ ಮೊದಲ ದೊಡ್ಡ ವಿವಾಹವಾಗಲಿದೆ. ಈ ಹಿಂದೆ ಅಥಿಯಾ-ಕೆಎಲ್ ರಾಹುಲ್ ವಿವಾಹದ ವದಂತಿಗಳ ಬಗ್ಗೆ ಎರಡೂ ಕಡೆಯ ಕುಟುಂಬಗಳು ಮೌನ ತಾಳಿದ್ದರು, ಸದ್ಯ ಈಗ ಈ ಜೋಡಿಯು ತಿಂಗಳ ಕೊನೆಯಲ್ಲಿ ಹಸೆಮಣೆ ಏರಲು ಸಿದ್ಧತೆ ನಡೆಸುತ್ತಿದೆ.

ಸುನೀಲ್ ಶೆಟ್ಟಿ ಅವರ ವಿಶಾಲವಾದ ಖಂಡಾಲಾ ಬಂಗಲೆ ನಡೆಯಲಿದೆ ಅದ್ದೂರಿ ವಿವಾಹ:ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹವು, ಅಥಿಯಾ ತಂದೆ ಹಿರಿಯ ನಟ ಸುನೀಲ್ ಶೆಟ್ಟಿ ಅವರ ವಿಶಾಲವಾದ ಖಂಡಾಲಾ ಬಂಗಲೆಯಲ್ಲಿ ನಡೆಯಲಿದೆ. ವಿವಾಹ ಮಹೋತ್ಸವಗಳು ಜ.21 ರಂದು ಪ್ರಾರಂಭವಾಗಲಿದ್ದು, ಜೋಡಿ ಜ.23 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ವಿವಾಹದ ಕುರಿತು ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ ಅವರ ಕುಟುಂಬದಿಂದ ಯಾವುದೇ ದೃಢೀಕರಣವಿಲ್ಲದಿದ್ದರೂ, ಮದುವೆಯ ಆಮಂತ್ರಣಗಳನ್ನು ಈಗಾಗಲೇ ಅತಿಥಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಅತಿಥಿಗಳ ಪಟ್ಟಿಯಲ್ಲಿ ಪ್ರಮುಖರು:ವರದಿಗಳ ಪ್ರಕರ ಅತಿಥಿಗಳ ಪಟ್ಟಿಯಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಯ್ಲಿ ಯಂತಹ ಕ್ರಿಕೆಟ್ ದಿಗ್ಗಜರು ಸೇರಿದಂತೆ, ಬಾಲಿವುಡ್‌ನ ಜಾಕಿ ಶ್ರಾಫ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಖಂಡಾಲಾದಲ್ಲಿ ನಡೆಯಲಿರುವ ರಾಹುಲ್-ಅಥಿಯಾ ವಿವಾಹದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಳೆದ ಜುಲೈನಲ್ಲಿ ರಾಹುಲ್ ಮತ್ತು ಅಥಿಯಾ ಅವರ ವಿವಾಹದ ಕುರಿತು ಅನೇಕ ವದಂತಿಗಳು ಹರಿದಾಡಿದ್ದವು. ಆ ಸಮಯದಲ್ಲಿ, ಅಥಿಯಾ ಅವರು ಮದುವೆಯ ವದಂತಿಗಳನ್ನು ತಳಿಹಾಕಲು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ "3 ತಿಂಗಳಲ್ಲಿ ನಡೆಯಲಿರುವ ಈ ಮದುವೆಗೆ ನನ್ನನ್ನು ಆಹ್ವಾನಿಸಲಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದರು.

2021ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದ ಜೋಡಿ:ಇವರಿಬ್ಬರು 2021ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಅದಕ್ಕೂ ಮೊದಲು, ಅಥಿಯಾ ಮತ್ತು ರಾಹುಲ್ ಒಟ್ಟಿಗೆ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು, ಪರಸ್ಪರರ ಸಾಮಾಜಿಕ ಮಾಧ್ಯಮ ಪೋಸ್ಟ್​ಗಳಲ್ಲಿ ಕಾಣಿಸಿಕೊಂಡಿದ್ದರು ಮತ್ತು ಒಟ್ಟಿಗೆ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದರು. ಮೋತಿಚೂರ್ ಚಕ್ನಾಚೂರ್ ನಟಿ ಟೀಮ್ ಇಂಡಿಯಾದ ಕೆಲವು ಪ್ರವಾಸಗಳಲ್ಲಿ ಕ್ರಿಕೆಟಿಗನೊಂದಿಗೆ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ಜರ್ಮನಿಯ ಮ್ಯೂನಿಚ್‌ಗೆ ಒಟ್ಟಿಗೆ ಪ್ರಯಾಣ ಬೆಳೆಸಿದ ಜೋಡಿ:ಪ್ರೇಮ ಪಕ್ಷಿಗಳಾದ ರಾಹುಲ್ ಮತ್ತು ಅಥಿಯಾ ಇತ್ತೀಚೆಗೆ ಜರ್ಮನಿಯ ಮ್ಯೂನಿಚ್‌ಗೆ ಒಟ್ಟಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಥಿಯಾ 2015ರಲ್ಲಿ ಸೂರಜ್ ಪಾಂಚೋಲಿ ಜೊತೆಗಿನ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಇದಲ್ಲದೇ 'ಮುಬಾರಕನ್' ಮತ್ತು 'ಮೋತಿಚೂರ್ ಚಕ್ನಾಚೂರ್' ಎಂಬ ಎರಡು ಚಿತ್ರಗಳಲ್ಲಿ ಅಥಿಯಾ ನಟಿಸುತ್ತಿದ್ದಾರೆ. ಮೋತಿಚೂರ್ ಚಕ್ನಾಚೂರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಅಥಿಯಾ ಅವರ ಸಹೋದರ ಅಹಾನ್ ಶೆಟ್ಟಿ ನಟನೆಯ ಚೊಚ್ಚಲ ಸಿನಿಮಾ ತಡಪ್‌ನ ಮೊದಲ ಪ್ರದರ್ಶನವನ್ನು ರಾಹುಲ್ ವೀಕ್ಷಿಸಿದ್ದರು.

ಇದನ್ನೂ ಓದಿ:ಮಗಳ ಜೊತೆ ರಣಬೀರ್​ - ಆಲಿಯಾ ಔಟಿಂಗ್​; ಮೊಮ್ಮಗಳಿಗೆ ಲಹೋರಿ ಶುಭ ಕೋರಿದ ನೀತು ಕಪೂರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.