ETV Bharat / entertainment

ಅಪ್ಪು ಮೊದಲ ಪುಣ್ಯ ಸ್ಮರಣೆ.. ಪತಿ ನೆನೆದು ಅಶ್ವಿನಿ ಪುನೀತ್​ ರಾಜ್​ ಕುಮಾರ್ ಭಾವುಕ ಟ್ವೀಟ್​ ​

author img

By

Published : Oct 29, 2022, 4:10 PM IST

ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಅಪ್ಪು ಅವರನ್ನು ಜೀವಂತವಾಗಿರಿಸಿರುವ ಅಭಿಮಾನಿಗಳಿಗೆ ಟ್ವಿಟರ್​ನಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ನಮನಗಳನ್ನು ಸಲ್ಲಿಸಿದ್ದಾರೆ.

Ashiwini puneeth rajkumar
ಅಶ್ವಿನಿ ಪುನೀತ್​ ರಾಜ್​ ಕುಮಾರ್​

ಕನ್ನಡದ ಯುವರತ್ನ ಪುನೀತ್​ ರಾಜ್​ ಕುಮಾರ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಇಡೀ ಕರ್ನಾಟಕವೇ ಪುನೀತ್​ ರಾಜ್​ ಕುಮಾರ್​ ಅವರ ಪುಣ್ಯ ಸ್ಮರಣೆ ಮಾಡುತ್ತಿದೆ. ಅಪ್ಪು ಅವರ ಸಮಾಧಿಗೆ ಸಹಸ್ರಾರು ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ. ಪುನೀತ್​ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ ಕುಮಾರ್ ಅವರು​ ಅಪ್ಪು ಅವರನ್ನು ಜೀವಂತವಾಗಿರಿಸಿರುವ ಅಭಿಮಾನಿಗಳಿಗೆ ಟ್ವಿಟ್ಟರ್​​​ನಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ನಮನ ಸಲ್ಲಿಸಿದ್ದಾರೆ.

Ashwini Puneeth Rajkumar Twitter Post
ಅಶ್ವಿನಿ ಟ್ವಿಟರ್​ ಪೋಸ್ಟ್​

'ನೆನಪಿನ ಸಾಗರದಲ್ಲಿ ಒಂದು ವರ್ಷ' ಎಂಬ ಪೋಸ್ಟ್​ ಹಂಚಿಕೊಂಡಿದ್ದು, ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬಗಳು, ಅಭಿಮಾನಿಗಳು, ಅವರ ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತಿದ್ದೀರಿ. ಅಪ್ಪು ಅವರ ಮೇಲಿರುವ ಪ್ರೀತಿ ಹಾಗೂ ಗೌರವದಿಂದ ಅವರನ್ನು ಸದಾ ಜೀವಂತವಾಗಿರಿಸಿದ್ದಕ್ಕಾಗಿ ನಮನಗಳು ಎಂದು ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ.

ನಿನ್ನೆಯಷ್ಟೇ ಅಶ್ವಿನಿ ಪುನೀತ್​ ರಾಜ್​ ಕುಮಾರ್​ ನಿರ್ಮಾಣ ಮಾಡಿದ, ಅಪ್ಪು ಕೊನೆಯದಾಗಿ ಕಾಣಿಸಿಕೊಂಡ ಗಂಧದಗುಡಿ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿದೆ. ಸಿನಿಮಾ ನೋಡಿದ ಸೆಲೆಬ್ರಿಟಿಗಳು, ಅಭಿಮಾನಿಗಳು ಎಲ್ಲರೂ ಅಪ್ಪುವನ್ನು ಮತ್ತೆ ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ. ಸಿನಿಮಾ ವಿಮರ್ಶೆಗೆ ಮೀರಿರುವಂತದ್ದು ಎಂಬ ಮಾತುಗಳು ಹಲವಾರು ಸೆಲೆಬ್ರಿಟಿಗಳ ಮನಸ್ಸಿಂದ ಬಂದಿವೆ. ಅಭಿಮಾನಿಗಳಂತು ಅಪ್ಪುವನ್ನು ತೆರೆಯ ಮೇಲೆ ನೋಡಿ ಕೊಂಡಾಡಿದ್ದಾರೆ.

ಇದನ್ನೂ ಓದಿ: ಹಲವು ಸಮಾಜ ಸೇವೆಗಳ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದ ಹೃದಯವಂತ ಅಪ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.