ETV Bharat / entertainment

ಮದುವೆಗೂ ಮುನ್ನ 'ಅರ್ಧಂಬರ್ಧ ಪ್ರೇಮಕಥೆ'ಯೊಂದಿಗೆ ಬರಲಿದ್ದಾರೆ ಲವ್​ಬರ್ಡ್ಸ್​ 'ಅರ್ವಿಯಾ'

author img

By ETV Bharat Karnataka Team

Published : Oct 6, 2023, 4:19 PM IST

ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ.'ಅರ್ಧಂಬರ್ಧ ಪ್ರೇಮಕಥೆ' ಮೂಲಕ ಬೆಳ್ಳಿ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Aravind KP and divya uruduga starrer Ardhambardha premakathe
'ಅರ್ಧಂಬರ್ಧ ಪ್ರೇಮಕಥೆ'ಯೊಂದಿಗೆ ತೆರೆ ಮೇಲೆ ಬರಲಿದ್ದಾರೆ ಲವ್​ಬರ್ಡ್ಸ್​ 'ಅರ್ವಿಯಾ'

ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಮಧ್ಯೆ 'ಅರ್ವಿಯಾ' ಜೋಡಿ ಬೆಳ್ಳಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅರವಿಂದ್​ ಕೌಶಿಕ್​ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು 'ಅರ್ಧಂಬರ್ಧ ಪ್ರೇಮಕಥೆ'.

'ಹುಲಿರಾಯ', 'ತುಘ್ಲಕ್', 'ನಮ್ ಏರಿಯಾಲ್ ಒಂದಿನ' ಸಿನಿಮಾಗಳಿಂದ ಗುರುತಿಸಿಕೊಂಡಿರುವ ಅರವಿಂದ್ ಕೌಶಿಕ್ ಅವರು ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ, ರಚಿತಾ ರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಅನೇಕ ಕಲಾವಿದರನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಿದವರು. ಇದೀಗ ಬೈಕ್ ರೇಸರ್ ಅರವಿಂದ್‌ ಅವರನ್ನು ನಾಯಕ ನಟನಾಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ.

'ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೆ ಬೆಳೆಯುತ್ತೆ. ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗಿರುತ್ತೆ. ಇಂತಹ ಒಂದು ಲವ್‌ ಸ್ಟೋರಿಯೇ 'ಅರ್ಧಂಬರ್ಧ ಪ್ರೇಮಕಥೆ' ಎಂದು ನಿರ್ದೇಶಕ ಅರವಿಂದ್​ ಕೌಶಿಕ್​ ತಿಳಿಸಿದ್ದಾರೆ.

ಚಿತ್ರತಂಡ: ಚಿತ್ರದಲ್ಲಿ ಅರವಿಂದ್, ದಿವ್ಯಾ ಅಲ್ಲದೇ ರ್ಯಾಪರ್ ಆಲ್‌ ಓಕೆ ಅಲೋಕ್, ಶ್ರೇಯಾ, ವೆಂಕಟ್‌ಶಾಸ್ತ್ರಿ, ಪ್ರದೀಪ್‌ ರೋಷನ್, ಸೂರಜ್ ಹೂಗಾರ್, ಸುಜಿತ್‌ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಅವರು ಅರ್ದಂಬರ್ಧ ಪ್ರೇಮಕಥೆಗೆ ಚೆಂದದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಎ2 ಚಾನೆಲ್ ಉತ್ತಮ ಬೆಲೆಗೆ ಖರೀದಿಸಿದೆ.

ಇದನ್ನೂ ಓದಿ: ನಿರ್ದೇಶಕ ಅರವಿಂದ್ ಕೌಶಿಕ್ ಸಿನಿಮಾಗೆ ಮತ್ತೆ ನಾಯಕಿಯಾದ ಬಿಗ್​ಬಾಸ್​ನ ದಿವ್ಯಾ ಉರುಡುಗ

ಬಕ್ಸಸ್ ಮೀಡಿಯಾ, ಲೈಟ್‌ಹೌಸ್ ಮೀಡಿಯಾ ಮತ್ತು ಆರ್‌ಎಸಿ ವಿಷುವಲ್ಸ್ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ಕೆಲಸವನ್ನೂ ನಿಭಾಯಿಸಿದ್ದಾರೆ. ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಒಂದು ವಿಶೇಷ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ.

ಮದುವೆ ಡೇಟ್​ ಅನೌನ್ಸ್​?!: ನಿನ್ನೆಯಷ್ಟೇ ದಿವ್ಯಾ ಉರುಡುಗ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಕುತೂಹಲ ಹುಟ್ಟಿಸಿದೆ. ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳಂತೆ ರೆಡಿಯಾಗಿ ಕ್ಯಾಮರಾ ಮುಂದೆ ಬಂದಿದ್ದು, ಎಲ್ಲರೂ ಕಾತುರದಿಂದ ಕಾಯುತ್ತಿರುವ ಒಂದು ವಿಚಾರವನ್ನು ಸದ್ಯದಲ್ಲೇ ಅನೌನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿದ್ರೆ ಬಹುಶಃ ಅವರು ಮದುವೆ ಡೇಟ್​ ಅನೌನ್ಸ್​ ಮಾಡ್ತಾರೆ ಎಂಬ ಅನುಮಾನ ಮೂಡಿದೆ. ​

ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ ಜೋಡಿ ಈಗಾಗಲೇ 'ಅರ್ವಿಯಾ' ಎಂದೇ ಜನಪ್ರಿಯತೆ ಗಳಿಸಿದೆ. ಸೋಷಿಯಲ್​ ಮೀಡಿಯಾದಲ್ಲೂ ಇವರಿಗಾಗಿ ಪ್ರತ್ಯೇಕ​ ಫ್ಯಾನ್ಸ್​​ ಗ್ರೂಪ್​ ಕೂಡ ಇದೆ. ಬಿಗ್​ ಬಾಸ್​ ಮನೆಯಲ್ಲಿ ಸಿಕ್ಕಾಪಟ್ಟೆ ಕ್ಲೋಸ್​ ಆಗಿದ್ದ ಜೋಡಿ, ಶೋ ಮುಗಿದ ಬಳಿಕವೂ ಅದೇ ಸಂಬಂಧವನ್ನು ಉಳಿಸಿಕೊಂಡಿದೆ. ಬಹಿರಂಗವಾಗಿ ತಾವಿಬ್ಬರು ಪ್ರೀತಿಸುತ್ತಿರುವುದಾಗಿ ಈಗಾಗಲೇ ಒಪ್ಪಿಕೊಂಡಿದ್ದಾರೆ. ಸದಾ ಜೊತೆಯಾಗಿಯೇ ಕಾಣಿಸಿಕೊಳ್ಳುವ ಕಪಲ್​ ಇದೀಗ ಸಂಥಿಂಗ್​ ಸ್ಪೆಷಲ್​ ಸರ್​ಪ್ರೈಸ್​ ನೀಡಲು ಮುಂದಾಗಿದೆ.

ಇದನ್ನೂ ಓದಿ: ದಿವ್ಯಾ ಉರುಡುಗ ಅರ್ದಂಬರ್ಧ ಪ್ರೇಮಕಥೆ ನಾಯಕ ಅರವಿಂದ್ ಇಂಟ್ರೊಡಕ್ಷನ್​ ಟೀಸರ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.