ETV Bharat / entertainment

ಯುಎಸ್ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಡಿನ್ನರ್​ ಪಾರ್ಟಿಯಲ್ಲಿ ನಟಿ ಏಂಜಲೀನಾ

author img

By

Published : Apr 27, 2023, 2:13 PM IST

ಯುಎಸ್ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ನಟಿ ಏಂಜಲೀನಾ ಜೋಲಿ ಭಾಗಿ ಆಗಿದ್ದರು.

Angelina Jolie
ಏಂಜಲೀನಾ ಜೋಲಿ

ವಾಷಿಂಗ್ಟನ್: ನಟಿ ಏಂಜಲೀನಾ ಜೋಲಿ (Angelina Jolie) ಅವರು ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಜಿಲ್ ಬೈಡನ್ ಅವರೊಂದಿಗೆ ಬುಧವಾರ ಕಾಣಿಸಿಕೊಂಡರು. ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ವಿಶೇಷವಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ (Yoon Suk Yeol) ಮತ್ತು ಅವರ ಪತ್ನಿ ಕಿಮ್ ಕಿಯೋನ್ (Kim Keon) ಅವರಿಗಾಗಿ ಆಯೋಜಿಸಲಾಗಿದ್ದ ಭೂಜನ ಕೂಟದಲ್ಲಿ ನಟಿ ಏಂಜಲೀನಾ ಜೋಲಿ ಅವರು ಮಗ ಮ್ಯಾಡಾಕ್ಸ್ (21) ಜೊತೆ ಉಪಸ್ಥಿತರಿದ್ದರು ಎಂದು ಜನರು ವರದಿ ಮಾಡಿದ್ದಾರೆ.

''ಏಂಜಲೀನಾ ಅವರ ಕುಟುಂಬಕ್ಕೆ ಏಷ್ಯಾ ಅಮೆರಿಕ ಸಂಬಂಧಗಳು ಮುಖ್ಯವಾಗಿವೆ. ಅವರು ಮತ್ತು ಮಕ್ಕಳು ದಕ್ಷಿಣ ಕೊರಿಯಾ ಸೇರಿದಂತೆ, ಯುಎಸ್​​ ಪ್ರದೇಶದೊಂದಿಗೆ ಹಲವು ವರ್ಷಗಳಿಂದ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಮ್ಯಾಡಾಕ್ಸ್ ಸಿಯೋಲ್‌ನ ಯೋನ್ಸಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಏಂಜಲೀನಾ ಮಾನವೀಯ ದೃಷ್ಟಿಯಿಂದ ಹಲವು ಬಾರಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ನಿರಾಶ್ರಿತರಿಗೆ ಸೇವೆ ಸಲ್ಲಿಸಿರುವ ಏಂಜಲೀನಾ ಮತ್ತು ಮಗ ಮ್ಯಾಡಾಕ್ಸ್ ಈ ರಾಜ್ಯ ಭೋಜನಕ್ಕೆ ಹಾಜರಾಗಲು ಗೌರವಾನ್ವಿತರಾಗಿದ್ದಾರೆ" ಎಂದು ಮೂಲವೊಂದು ಪ್ರಕಟಣೆಗೆ ತಿಳಿಸಿದೆ.

ಇದನ್ನೂ ಓದಿ: ತಪ್ಪೇ ಮಾಡದೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಭಾರತದ ನಟಿ: ದೋಷಮುಕ್ತರಾಗಿ ದುಬೈ ಜೈಲಿನಿಂದ ಬಿಡುಗಡೆ

ನಟಿ ಏಂಜಲೀನಾ ಜೋಲಿಅವರು ಬಿಳಿ ಉಡುಗೆ, ವಿಂಟೇಜ್ ಜಾಕೆಟ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮತ್ತೊಂದೆಡೆ, ಮಗ ಕಪ್ಪು ಸೂಟ್​ನಲ್ಲಿ ಎಲ್ಲರನ್ನು ಆಕರ್ಷಿಸಿದರು. ಔತಣಕೂಟದಲ್ಲಿ ಇತರ ಪ್ರಸಿದ್ಧ ವ್ಯಕ್ತಿಗಳು ಸಹ ಹಾಜರಿದ್ದರು.

ಇದನ್ನೂ ಓದಿ: ಹೆಬ್ಬುಲಿಯ​ ಅಬ್ಬರದ ಪ್ರಚಾರ: ಅಭಿಮಾನಿಗಳ ಘೋಷಣೆಗಳ ನಡುವೆ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.