ETV Bharat / entertainment

ಬಾಲಕನ ಫೋಟೋ ಶೇರ್ ಮಾಡಿದ ಆಲಿಯಾ ಭಟ್.. ರಣ್​ಬೀರ್ ಕಪೂರ್ ಕಾಪಿ ಎಂದ ಅಭಿಮಾನಿಗಳು

author img

By

Published : Aug 17, 2022, 2:18 PM IST

ಇತ್ತೀಚೆಗೆ ನಟಿ ಆಲಿಯಾ ಭಟ್ ಕಿಡ್ಸ್ ವೇರ್ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಕೆಲಸ ಮಾಡಿದ್ದಾರೆ. ಆಲಿಯಾ ಈ ಜಾಹೀರಾತಿನ ಕೆಲ ನೋಟಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರಣ್​ಬೀರ್ ಕಪೂರ್ ಕಾಪಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Alia bhatt shares a picture of boy and fans comment he looks like Ranbir kapoor
ಬಾಲಕನ ಫೋಟೋ ಶೇರ್ ಮಾಡಿದ ಆಲಿಯಾ ಭಟ್....ರಣ್​ಬೀರ್ ಕಪೂರ್ ಕಾಪಿ ಎಂದ ಅಭಿಮಾನಿಗಳು

ಬಾಲಿವುಡ್‌ನ ನಟ ರಣ್​ಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಸಖತ್​ ಫೇಮಸ್ ದಂಪತಿ. ವೃತ್ತಿಜೀವನದಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ದಂಪತಿಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಇರುತ್ತಾರೆ. ಜೂನ್ 27 ರಂದು ಈ ದಂಪತಿ ತಾವು ಶೀಘ್ರದಲ್ಲೇ ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ಇತ್ತೀಚೆಗೆ ನಟಿ ಆಲಿಯಾ ಭಟ್ ಕಿಡ್ಸ್ ವೇರ್ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಕೆಲಸ ಮಾಡಿದ್ದಾರೆ. ಆಲಿಯಾ ಈ ಜಾಹೀರಾತಿನ ಕೆಲ ನೋಟಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಲಿಯಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ಫೋಟೋ ಒಂದರಲ್ಲಿ ಹಸಿರು ಮತ್ತು ಬೂದು ಬಣ್ಣದ ಟೀ ಶರ್ಟ್ ಧರಿಸಿರುವ ಮಗು ಸ್ವಲ್ಪ ರಣಬೀರ್ ಕಪೂರ್‌ನಂತೆ ಕಾಣುತ್ತದೆ.

ಅಭಿಮಾನಿಗಳು ಆಲಿಯಾ ಭಟ್ ಅವರ ಪೋಸ್ಟ್ ಅನ್ನು ನೋಡಿ ಕಾಂಪ್ಲಿಮೆಂಟ್ಸ್​ಗಳ ಮಳೆ ಸುರಿಸಿದ್ದಾರೆ. ಈ ಮಗು ರಣಬೀರ್‌ನಂತೆಯೇ ಕಾಣುತ್ತದೆ ಎಂದು ಓರ್ವರು ಬರೆದಿದ್ದಾರೆ, ಒಂದು ಕ್ಷಣಕ್ಕೆ ರಣಬೀರ್ ಕಪೂರ್ ಎಂದೇ ಭಾಸವಾಗುತ್ತದೆ ಎಂದು ಒಬ್ಬರು ಬರೆದಿದ್ದಾರೆ. ಆಲಿಯಾ ಈ ಮಗು ರಣಬೀರ್ ಕಪೂರ್ ತರಹ ಇದೆ ಎಂದು ನಿಮಗೆ ಅನಿಸುತ್ತಿಲ್ಲವೇ ಎಂದು ಮತ್ತೋರ್ವ ಅಭಿಮಾನಿ ಬರೆದಿದ್ದಾರೆ.

ಇದನ್ನೂ ಓದಿ: ಸಡಿಲವಾದ ಉಡುಪಿನಲ್ಲಿ ಕಾಣಿಸಿಕೊಂಡ ಕತ್ರಿನಾ ಕೈಫ್.. ಮತ್ತೆ ಹರಡಿದ ಪ್ರೆಗ್ನೆನ್ಸಿ ವದಂತಿ

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಯ 'ಬ್ರಹ್ಮಾಸ್ತ್ರ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಇದೇ ವರ್ಷ ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಮತ್ತು ಆಲಿಯಾ ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಇನ್ನೂ ಇತ್ತೀಚೆಗೆ ಬಿಡುಗಡೆಯಾದ ರಣಬೀರ್ ಕಪೂರ್ ಅವರ ಚಿತ್ರ 'ಶಂಶೇರಾ' ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.