ETV Bharat / entertainment

ನಟ ಆದಿತ್ಯ ರಾಯ್​ ಕಪೂರ್‌ಗೆ ಮುತ್ತಿಕ್ಕಲು ಮುಂದಾದ ಯುವತಿ!

author img

By

Published : Feb 22, 2023, 3:55 PM IST

ನಟ ಆದಿತ್ಯ ರಾಯ್​ ಕಪೂರ್​ ಅವರ ಮಹಿಳಾ ಅಭಿಮಾನಿಯೊಬ್ಬರು ಅವರನ್ನು ಎಳೆದು ಮುತ್ತಿಕ್ಕುವ ಸಾಹಸ ಮಾಡಿದರು.

ನಟ ಆದಿತ್ಯ ರಾಯ್​ ಕಪೂರ್​ನನ್ನು ಸಾರ್ವಜನಿಕವಾಗಿ ಭರಸೆಳೆದು ಮುತ್ತಿಕ್ಕಲು ಮುಂದಾದ ಅಭಿಮಾನಿ
ನಟ ಆದಿತ್ಯ ರಾಯ್​ ಕಪೂರ್​ನನ್ನು ಸಾರ್ವಜನಿಕವಾಗಿ ಭರಸೆಳೆದು ಮುತ್ತಿಕ್ಕಲು ಮುಂದಾದ ಅಭಿಮಾನಿ

ಬಾಲಿವುಡ್​ ನಟರನ್ನು ಕಂಡಾಕ್ಷಣ ಅವರ ಅಭಿಮಾನಿಗಳು ಅತಿರೇಕದ ವರ್ತನೆ ತೋರುವುದುಂಟು. ಇತ್ತೀಚೆಗಷ್ಟೇ ಗಾಯಕ ಸೋನು ನಿಗಂ ಸೆಲ್ಫಿಗೆ ಪೋಸ್​ ನೀಡಲಿಲ್ಲ ಎಂದು ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿತ್ತು. ಇಂತಹ ಹುಚ್ಚು ಅಭಿಮಾನಿಗಳಿಂದ ಬಾಲಿವುಡ್​ ಮಂದಿ ಮುಜುಗರ ಮತ್ತು ಸಂಕಷ್ಟಕ್ಕೂ ಒಳಗಾಗುತ್ತಾರೆ. ಇಂಥದ್ದೇ ಘಟನೆಯನ್ನು ನಟ ಆದಿತ್ಯ ರಾಯ್​ ಕಪೂರ್ ಕೂಡಾ ಎದುರಿಸಿದ್ದಾರೆ.

ಬಾಲಿವುಡ್​ನ ಹ್ಯಾಂಡ್‌ಸಮ್​ ನಟರಲ್ಲೊಬ್ಬರು ಆದಿತ್ಯ ರಾಯ್​ ಕಪೂರ್​. ತನ್ನ ಹೊಳೆಯುವ ಕಣ್ಣು, ನಗುವಿನ ಮೂಲಕವೇ ಮನಸೆಳೆಯುವ ನಟನಿಗೆ ಮಹಿಳಾಭಿಮಾನಿಗಳ ಸಂಖ್ಯೆ ಕಡಿಮೆ ಇಲ್ಲ. ಇದೀಗ ಇಂತಹ ಮಹಿಳಾ ಅಭಿಮಾನಿಯೊಬ್ಬರಿಂದ ಸಾರ್ವಜನಿಕವಾಗಿ ಮುಜುಗರಗೊಂಡಿದ್ದಾರೆ. ಅಭಿಮಾನಿಯೊಬ್ಬರು ಅವರನ್ನು ತನ್ನತ್ತ ಎಳೆದು ಮುತ್ತಿಕ್ಕಲು ಮುಂದಾಗಿದ್ದಾರೆ. ಈ ವೇಳೆ ಕಪೂರ್ ಅರೆಕ್ಷಣ ತಬ್ಬಿಬ್ಬುಕೊಂಡಿದ್ದಾರೆ.

ಆದಿತ್ಯ ರಾಯ್ ಕಪೂರ್ ನಟನೆಯ ದಿ ನೈಟ್​ ಮ್ಯಾನೇಜರ್​ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇದಕ್ಕಿಂತ ಮುಂಚೆ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಚಿತ್ರ ವೀಕ್ಷಣೆಯ ಬಳಿಕ ಮಹಿಳಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಅವರನ್ನು ಬಲವಂತವಾಗಿ ಚುಂಬಿಸಲು ಮುಂದಾದರು.

ಈ ಘಟನೆ ಕುರಿತು ಮಾತನಾಡಿರುವ ನಟ ಕಪೂರ್, "ಒಂದು ಕ್ಷಣ ತಬ್ಬಿಬ್ಬುಕೊಂಡೆ. ಈ ರೀತಿಯ ಘಟನೆಗಳನ್ನು ಎದುರಿಸಬೇಕಾಗುತ್ತದೆ. ಅಭಿಮಾನಿಗಳ ಅಭಿಮಾನವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆಕೆ ನನ್ನ ಬಗ್ಗೆ ಪ್ರೀತಿ ಮತ್ತು ಅಭಿಮಾನ ತೋರಿಸಿದ್ದಾರೆ" ಎಂದರು.

ಇದನ್ನೂ ಓದಿ: ಸಿದ್ಧಾರ್ಥ್ ಪ್ರೀತಿಯ ಬಾಹುವಿನಲ್ಲಿ ಬಂಧಿಯಾದ ಕಿಯಾರಾ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.