ETV Bharat / entertainment

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಆದಿತ್ಯ, ಅನನ್ಯಾ: ಪ್ರೇಮಪಕ್ಷಿಗಳ ವಿಡಿಯೋ ವೈರಲ್​​

author img

By ETV Bharat Karnataka Team

Published : Nov 11, 2023, 2:06 PM IST

Aditya Roy Kapur Ananya Panday: ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಒಟ್ಟಿಗೆ ಕಾರಿನಲ್ಲಿ ಹೊರಟ ವಿಡಿಯೋ ವೈರಲ್​​ ಆಗಿದ್ದು, ನೆಟ್ಟಿಗರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

Aditya Roy Kapur Ananya Panday
ಆದಿತ್ಯ ರಾಯ್ ಕಪೂರ್ ಅನನ್ಯಾ ಪಾಂಡೆ

ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಜೋಡಿ ಡೇಟಿಂಗ್​​​ನಲ್ಲಿದ್ದಾರೆಂಬ ಸುದ್ದಿ ಕಳೆದ ಕೆಲ ಸಮಯದಿಂದ ಸಖತ್​ ಸದ್ದು ಮಾಡುತ್ತಿದೆ. ವಿದೇಶದಿಂದ ಜೋಡಿಯ ಆಕರ್ಷಕ ಚಿತ್ರಗಳು ವೈರಲ್​ ಆದ ಬಳಿಕವಂತೂ ಊಹಾಪೂಹಗಳು ಜೋರಾಗೇ ಹರಡುತ್ತಿವೆ. ಅಲ್ಲದೇ ಈವೆಂಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋ ಮುಖೇನ ವದಂತಿಗಳಿಗೆ ತುಪ್ಪ ಸುರಿಯುತ್ತಿದ್ದಾರೆ. ಇದೀಗ ರೂಮರ್​ ಲವ್​ಬರ್ಡ್ಸ್​​ ಒಟ್ಟಿಗೆ ಕಾರಿನಲ್ಲಿ ಹೊರಟ ವಿಡಿಯೋ ವೈರಲ್​​ ಆಗಿದ್ದು, ಈ ಜೋಡಿ ಪ್ರೀತಿಯಲ್ಲಿರೋದು ಖಚಿತ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬಿ-ಟೌನ್​​ನಲ್ಲಿ ಆದಿತ್ಯ ಅನನ್ಯಾ ಬಗ್ಗೆ ಚರ್ಚೆ ಜೋರಾಗೇ ನಡೆಯುತ್ತಿದೆ. ಹೆಚ್ಚಿನ ಈವೆಂಟ್​ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಒಟ್ಟಿಗೆ ಅಥವಾ ಪತ್ಯೇಕವಾಗಿಯಾದರೂ ಒಂದೇ ಸಮಾರಂಭದಲ್ಲಿ ಹೆಚ್ಚಾಗಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್​ನ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಮತ್ತು ನಿರ್ಮಾಪಕ ರಮೇಶ್ ತೌರಾನಿ ಅವರ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಕಳೆದ ರಾತ್ರಿ ಏಕ್ತಾ ಕಪೂರ್ ಮತ್ತು ಅಮೃತಪಾಲ್ ಸಿಂಗ್ ಬಿಂದ್ರಾ ಅವರು ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಸಹ ಒಟ್ಟಿಗೆ ಕಾಣಿಸಿಕೊಂಡರು. ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್​ ಕರಣ್​​ ಸೀಸನ್​ 8ರಲ್ಲಿ ತಮ್ಮ ಪ್ರೀತಿ ಬಗ್ಗೆ ನಟಿ ಅನನ್ಯಾ ಪಾಂಡೆ ಪರೋಕ್ಷವಾಗಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದೀಗ ಕಾರಿನಲ್ಲಿ ಒಟ್ಟಿಗೆ ತೆರಳಿರುವ ವಿಡಿಯೋ ವೈರಲ್​ ಆಗಿದೆ.

ಕಳೆದ ವರ್ಷ ಬಾಲಿವುಡ್​ ನಟಿ ಕೃತಿ ಸನೋನ್ ಅವರು ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಆದಿತ್ಯ ಅನನ್ಯಾ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಡೇಟಿಂಗ್​ ವದಂತಿ ಪ್ರಾರಂಭವಾಯಿತು. ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಚಾಟ್ ಶೋ 'ಕಾಫಿ ವಿತ್ ಕರಣ್ 7'ರಲ್ಲಿ ನಟಿ ಅನನ್ಯಾ ಬಳಿ ಈ ಬಗ್ಗೆ ಗೇಲಿ ಮಾಡಿದ ನಂತರ ಡೇಟಿಂಗ್ ವದಂತಿ ಜೋರಾಗಿ ಹರಡಲು ಪ್ರಾರಂಭವಾಯ್ತು. ಅದಾದ ಬಳಿಕ ಇಬ್ಬರೂ ಹಲವು ಬಾರಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೊತೆಯಾಗಿ ಓಡಾಟ ಕೊಂಚ ಹೆಚ್ಚೇ ಆಗಿದೆ. 'ಕಾಫಿ ವಿತ್ ಕರಣ್ 8'ರಲ್ಲಿ ಪರೋಕ್ಷವಾಗಿ ನಟಿ ಸುಳಿವು ನೀಡಿದ್ದರೂ, ಇಬ್ಬರಿಂದಲೂ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಿಲ್ಲ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ: ಆರೋಪಿಗಳ ವಿರುದ್ಧ ಎಫ್ಐಆರ್​

ಇನ್ನೂ ನಿರ್ಮಾಪಕ ಅಮೃತಪಾಲ್ ಸಿಂಗ್ ಬಿಂದ್ರಾ ಮತ್ತು ನಿರ್ಮಾಪಕಿ ಏಕ್ತಾ ಕಪೂರ್ ಅವರ ದೀಪಾವಳಿ ಪಾರ್ಟಿಯಲ್ಲಿ ಕಿಂಗ್​ ಖಾನ್​ ಶಾರುಖ್​​, ಪುತ್ರಿ ಸುಹಾನಾ ಖಾನ್​, ಶಾಹಿದ್ ಕಪೂರ್, ಮೀರಾ ರಜ್​​ಪೂತ್, ವಿಕ್ಕಿ ಕೌಶಲ್, ಮಾಧುರಿ ದೀಕ್ಷಿತ್, ರಾಕುಲ್ ಪ್ರೀತ್ ಸಿಂಗ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವರು ಕಾಣಿಸಿಕೊಂಡರು.

ಇದನ್ನೂ ಓದಿ: ಧನತ್ರಯೋದಶಿ ಆಚರಿಸಿದ ಪಟೌಡಿ ಕುಟುಂಬ: ಸಾರಾ ಅಲಿ ಖಾನ್​​ ಆಕರ್ಷಕ ಫೋಟೋಗಳಿಲ್ಲಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.