ETV Bharat / entertainment

ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು: ದೀಪಿಕಾ ಪರ ನಿಂತ ನಟಿ ರಮ್ಯಾ

author img

By

Published : Dec 17, 2022, 1:27 PM IST

ದೀಪಿಕಾ ಪಡುಕೋಣೆ ವಸ್ತ್ರ ವಿಚಾರವಾಗಿ ಟ್ರೋಲ್​ಗೊಳಗಾಗಿದ್ದು, ಈ ಬಗ್ಗೆ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.

ramya tweet on deepika
ದೀಪಿಕಾ ಟ್ರೋಲ್​ಗೆ ರಮ್ಯಾ ಟ್ವೀಟ್

ಶಾರುಖ್​​ ಖಾನ್​ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಪಠಾಣ್​ ಚಿತ್ರದ ಬೇಶರಂ ರಂಗ್ ಹಾಡಿನ​​ ಮೇಲೆ ಆಕ್ರೋಶ ಹೆಚ್ಚಾಗುತ್ತಿದೆ. ಬಣ್ಣದ ವಿಚಾರಕ್ಕೆ ನಡೆಯುತ್ತಿರುವ ಈ ವಾದ ವಿವಾದಕ್ಕೂ ಹಲವರಿಂದ ಅಸಮಧಾನ ವ್ಯಕ್ತವಾಗುತ್ತಿದೆ. ಇದೀಗ ಬಾಲಿವುಡ್​ನ ಪದ್ಮಾವತಿ ದೀಪಿಕಾ ಪಡುಕೋಣೆ ಪರ ಸ್ಯಾಂಡಲ್​ವುಡ್​ ಕ್ವೀನ್​ ಬ್ಯಾಟಿಂಗ್​ ಮಾಡಿದ್ದಾರೆ.

ಮೋಹಕತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್​ ಬ್ಯಾಕ್​​ ಮಾಡಿ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ, ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಅವರು ಈಗ ಬಿಕಿನಿ ವಾರ್​ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಸಾಕಷ್ಟು ಟ್ರೋಲ್‌ಗಳಿಗೆ ಒಳಗಾಗಿರುವ ಸಮಂತಾ, ರಶ್ಮಿಕಾ, ಸಾಯಿ ಪಲ್ಲವಿ, ದೀಪಿಕಾ ಪಡುಕೋಣೆ ಪರ ನಟಿ ರಮ್ಯಾ ಧ್ವನಿ ಎತ್ತಿದ್ದಾರೆ.

  • Samantha trolled for her divorce, Sai Pallavi for her opinion,Rashmika for her separation, Deepika for her clothes and many, many other women for pretty much EVERYTHING. Freedom of choice is our basic right. Women are the embodiment of Maa Durga- misogyny is an evil we must fight

    — Ramya/Divya Spandana (@divyaspandana) December 16, 2022 " class="align-text-top noRightClick twitterSection" data=" ">

ಇದನ್ನೂ ಓದಿ: ''ಬೇಕಂತಲೇ ಮಾಡುತ್ತಿರುವ ವಿವಾದವಿದು'': ಪಠಾಣ್ ಬಾಯ್ಕಾಟ್​​ ಕೂಗಿಗೆ ಚೇತನ್ ಆಕ್ರೋಶ​​

ಡಿವೋರ್ಸ್ ವಿಚಾರಕ್ಕೆ ಸಮಂತಾ ರುತ್​ ಪ್ರಭು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಸಾಯಿಪಲ್ಲವಿ, ಪ್ರೀತಿಸಿ ಬೇರೆಯಾಗಿದ್ದಕ್ಕೆ ರಶ್ಮಿಕಾ, ಬಟ್ಟೆ ವಿಚಾರಕ್ಕೆ ದೀಪಿಕಾ ಅವರನ್ನು ಟ್ರೋಲ್ ಮಾಡಲಾಗಿದೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಮಹಿಳೆಯರು ಮಾ ದುರ್ಗೆಯ ಸ್ವರೂಪ. ಸ್ತ್ರೀ ದ್ವೇಷಿಗಳ ವಿರುದ್ಧ ನಾವು ಹೋರಾಡಬೇಕಿದೆ ಎಂದು ಹೇಳುವ ಮೂಲಕ ದೀಪಿಕಾ ಪಡುಕೋಣೆ ಪರ ನಟಿ ರಮ್ಯಾ ಬ್ಯಾಟಿಂಗ್‌ ಮಾಡಿದ್ದಾರೆ.

ಇದನ್ನೂ ಓದಿ: 'ಪಠಾಣ್​' ವಿರುದ್ಧ ಮುಜಾಫರ್‌ಪುರ ನ್ಯಾಯಾಲಯದಲ್ಲಿ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.