ETV Bharat / entertainment

BAD‌ ಸಿನಿಮಾದಲ್ಲಿ ಬೋಲ್ಡ್ ಹುಡುಗಿಯಾಗಿ ಟಗರು ಬೆಡಗಿ ಮಾನ್ವಿತಾ ಕಾಮತ್

author img

By

Published : Jul 14, 2023, 4:22 PM IST

ನಟಿ ಮಾನ್ವಿತಾ ಕಾಮತ್ 'BAD‌' ಸಿನಿಮಾದಲ್ಲಿ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Manvita Kamath entry to BAD movie
ಮಾನ್ವಿತಾ ಕಾಮತ್

ಕೆಂಡ ಸಂಪಿಗೆ, ಟಗರು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿರುವ ನಟಿ ಮಾನ್ವಿತಾ ಕಾಮತ್. ಶಿವ 123 ಸಿನಿಮಾದ ಬಳಿಕ ಮಾನ್ವಿತಾ ಕಾಮತ್​ ಅವರು ಪಿ.ಸಿ ಶೇಖರ್ ನಿರ್ದೇಶನದ "BAD" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ "BAD" ಸಿನಿಮಾ ತನ್ನ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಪ್ರಮುಖ ಪಾತ್ರಧಾರಿ ನಕುಲ್ ಗೌಡ ಅವರ ಲುಕ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೋಲ್ಡ್ ಕ್ಯಾರೆಕ್ಟರ್​ನಲ್ಲಿ ಮಾನ್ವಿತ ಕಾಮತ್: ನಟಿ ಮಾನ್ವಿತಾ ಕಾಮತ್ ಅವರ ಪಾತ್ರದ ಕುರಿತು ಮಾತನಾಡಿದ ನಿರ್ದೇಶಕ ಪಿ.ಸಿ. ಶೇಖರ್, ''ಈ ಚಿತ್ರದಲ್ಲಿ ಮಾನ್ವಿತಾ ಅವರ ಪಾತ್ರದ ಹೆಸರು ಪವಿತ್ರ (ಪವಿ). ಅವರದ್ದು ಬೋಲ್ಡ್ ಕ್ಯಾರೆಕ್ಟರ್. ವಿಲೇಜ್ ಬ್ಯಾಕ್ ಡ್ರಾಪ್​ನಲ್ಲಿ ಅವರ ಸ್ಟೋರಿ ಸಾಗುತ್ತಾ ಹೋಗುತ್ತದೆ. ನಾನು ಈ ಮೊದಲೇ ತಿಳಿಸಿದ ಹಾಗೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಈ ಆರು ಪಾತ್ರಗಳಲ್ಲದೇ ಇನ್ನೊಂದು ಪಾತ್ರ ಕೂಡ ಇದೆ. ಆ ಪಾತ್ರದಲ್ಲಿ ನಟಿ ಮಾನ್ವಿತಾ ಕಾಮತ್​ ಅಭಿನಯಿಸುತ್ತಿದ್ದಾರೆ ಎಂದು ತಿಳಿಸಿದರು.

Manvita Kamath entry to BAD movie
ಮಾನ್ವಿತಾ ಕಾಮತ್

ಈವರೆಗೂ ನಿರ್ವಹಿಸಿರದ ಪಾತ್ರ: ನನಗೆ "BAD" ಚಿತ್ರದ ಪಾತ್ರ ಬಹಳ ಇಷ್ಟವಾಯಿತು. ಪವಿತ್ರ ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಕಾಸ್ಟ್ಯೂಮ್​ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ನಿರ್ದೇಶಕ ಪಿ.ಸಿ. ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್​​ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ನಿರ್ವಹಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನಟಿ ಮಾನ್ವಿತಾ ಕಾಮತ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಲ್ಲು ಫ್ಯಾನ್ಸ್​ಗೆ ಗುಡ್​ ನ್ಯೂಸ್​: ನಿರ್ಮಾಣಗೊಳ್ಳಲಿದೆ ಕಿಕ್​ 2 - ಸಕ್ಸಸ್​ ನಿರೀಕ್ಷೆಯಲ್ಲಿ ಸೂಪರ್​​ಸ್ಟಾರ್​

ಬ್ಯಾಡ್ ಚಿತ್ರತಂಡ: ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತಾ ಅಲ್ಲದೇ ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ. ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣ ಇದೆ. ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ. ರಾಜಶೇಖರ್ ಅವರ ಕಲಾ ನಿರ್ದೇಶನ "BAD" ನಿಮ್ಮ ಗಮನ ಸೆಳೆಯಲಿದೆ.

ಇದನ್ನೂ ಓದಿ: ಕಪ್ಪು ಸೀರೆಯಲ್ಲಿ ಕಂಗೊಳಿಸಿದ ಕಾಂತಾರ ನಟಿ.. ಅಭಿಮಾನಿಗಳ ಮನಸೂರೆಗೊಂಡ ಶಿವನ ಜೋಡಿ ಲೀಲಾ ಲುಕ್​​

ಬ್ಯಾಡ್ ಚಿತ್ರ ನಾಯಕ ಪ್ರಧಾನ ಚಿತ್ರವಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಇಲ್ಲಿನ ಆರು ಪಾತ್ರಗಳು ಪ್ರತಿನಿಧಿಸುತ್ತವೆ. ಈ ವರ್ಷದಲ್ಲೇ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.