ETV Bharat / entertainment

ಮಸಾಲೆ ವ್ಯಾಪಾರದ ಕಡೆ ಇದ್ದ ಗಮನ.. ಹೀರೋ ಆಗುವ ಕನಸು ಕಂಡಿರಲಿಲ್ಲವಂತೆ ಟಾಲಿವುಡ್ ಸ್ಟಾರ್ ವೆಂಕಟೇಶ್​​​​

author img

By

Published : Mar 5, 2023, 6:32 PM IST

ನಟನಾಗುವ ಕನಸು ಕಂಡಿರಲಿಲ್ಲ, ಮಸಾಲೆ ವ್ಯಾಪಾರೋದ್ಯಮ ಮಾಡಬೇಕೆನ್ನುವ ಗುರಿ ಇತ್ತು ಎಂದು ಟಾಲಿವುಡ್ ಸ್ಟಾರ್ ವೆಂಕಟೇಶ್​​​​ ತಿಳಿಸಿದ್ದಾರೆ.

actor Venkatesh
ಟಾಲಿವುಡ್ ಸ್ಟಾರ್ ವೆಂಕಟೇಶ್​​​​

ಟಾಲಿವುಡ್​​​ ನಟ ವೆಂಕಟೇಶ್​​​​ ಅವರಿಗೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನೆಯಿಂದ ಸಾಕಷ್ಟು ಜನಪ್ರಿಯತೆ ಜೊತೆಗೆ ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದಿದ್ದಾರೆ. ಅಭಿನಯ ಮಾತ್ರವಲ್ಲ, ಫಿಟ್ನೆಸ್​ ವಿಷಯವಾಗಿಯೂ ಇವರು ಸಖತ್​ ಫೇಮಸ್​. 62ರ ಹರೆಯದಲ್ಲೂ ಸದೃಢ ಮೈಕಟ್ಟು, ಯುವಕರೂ ನಾಚುವಂತಹ ನೋಟ ಹೊಂದಿದ್ದಾರೆ.

ದಕ್ಷಿಣ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದ ಗುರುತಿಸಿಕೊಂಡಿರುವ ನಟ ವೆಂಕಟೇಶ್ ಅವರ ಪರಿಚಯ ಯಾರಿಗೆ ತಾನೆ ಇಲ್ಲ ಹೇಳಿ. ತೆಲುಗು ಜೊತೆಗೆ ಹಿಂದಿ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ನಟ ವೆಂಕಟೇಶ್ ಅವರು ಪ್ರಸಿದ್ಧ ಚಲನಚಿತ್ರೊದ್ಯಮಿಗಳ ಕುಟುಂಬದಿಂದ ಬಂದವರು. ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಯೋಚನೆಯಲ್ಲಿರದ ವೆಂಕಟೇಶ್ ಅವರ ವ್ಯಾಪಾರೋದ್ಯಮದ ಹಿನ್ನೆಡೆ ಬೇರೆಯೇ ದಾರಿಗೆ ಕೊಂಡೊಯ್ತು. ವ್ಯಾಪಾರೋದ್ಯಮದ ಕನಸು ಕಾರ್ಯರೂಪಕ್ಕೆ ಬಾರದ ಹಿನ್ನೆಲೆ, ಸಿನಿಮಾ ಲೋಕದಲ್ಲಿ ದಾರಿ ಸೃಷ್ಟಿಯಾಯಿತು.

ವೆಂಕಟೇಶ್ ಅವರು ತಮ್ಮ ಸಂಬಂಧಿ ರಾಣಾ ದಗ್ಗುಬಾಟಿಯವರನ್ನೂ ಒಳಗೊಂಡಿರುವ ರಾಣಾ ನಾಯ್ಡು (Rana Naidu) ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಸರಣಿಯು ನೆಟ್‌ಫ್ಲಿಕ್ಸ್​ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿಕ್ಕಪ್ಪ-ಸೋದರಳಿಯ ತಮ್ಮ ರಾಣಾ ನಾಯ್ಡು ಸರಣಿ ಬಗ್ಗೆ ವಿವಿಧ ವೇದಿಕೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ರಾಣಾ ನಾಯ್ಡು ಸೀರಿಸ್ ಪ್ರಚಾರದ ಸಂದರ್ಶನವೊಂದರಲ್ಲಿ, ವೆಂಕಟೇಶ್ ಅವರು ಹೇಗೆ ನಟರಾದರು, ಸಿನಿಮಾ ಕ್ಷೇತ್ರಕ್ಕೆ ಹೇಗೆ ಎಂಟ್ರಿ ಕೊಟ್ಟರು ಎಂಬುದನ್ನು ಬಹಿರಂಗಪಡಿಸಿದರು. ಹೀರೋ ಆಗಬೇಕೆಂಬುದು ವೆಂಕಟೇಶ್ ಅವರ ಮೂಲ ಯೋಜನೆ ಆಗಿರಲಿಲ್ಲ.

ಚಲನಚಿತ್ರಕ್ಕೆ ಬರುವ ನಿರ್ಧಾರದ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ನಟ ವೆಂಕಟೇಶ್, ಇದು ಕೇವಲ ಆಕಸ್ಮಿಕ (just an accident) ಎಂದು ಹೇಳಿದರು. ನಾನು ನಟನೆಗೆ, ಸಿನಿಮಾ ಜಗತ್ತಿಗೆ ಬರೆಬೇಕು ಎಂದುಕೊಂಡಿರಲಿಲ್ಲ. ಅಂದು ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದೆ. ನಾನು ನನ್ನ ಅಧ್ಯಯನವನ್ನು ಮುಗಿಸಿ ಯುಎಸ್​ನಿಂದ ಹಿಂತಿರುಗಿ ಬಂದು ವ್ಯಾಪಾರೋದ್ಯಮದಲ್ಲಿ ತೊಡಗಲು ಪ್ರಯತ್ನಿಸಿದ್ದೆ ಎಂದು ತಿಳಿಸಿದರು. ನಟ ವೆಂಕಟೇಶ್ ಅವರು ಮಸಾಲೆ ಮಾರುಕಟ್ಟೆಯಲ್ಲಿ ಅಮೆರಿಕದ ದೈತ್ಯ ಕಂಪನಿಯಾದ ಮೆಕ್‌ಕಾರ್ಮಿಕ್ ಸಹಯೋಗದೊಂದಿಗೆ ಮಸಾಲೆಗಳನ್ನು ಮಾರಾಟ ಮಾಡುವ ಉದ್ಯಮ ಆರಂಭಿಸಿಲು ಬಯಸಿದ್ದರು.

ಇದನ್ನೂ ಓದಿ: ಆಸ್ಕರ್​ ಪ್ರಶಸ್ತಿಯಲ್ಲಿ ಭಾರತದ ಈವರೆಗಿನ ದಾಖಲೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ..

ಆದರೆ ಈ ಆಲೋಚನೆಯು ಕಾರ್ಯರೂಪಕ್ಕೆ ಬರಲಿಲ್ಲ. ನಂತರ ಇದ್ದಕ್ಕಿದ್ದಂತೆ ಒಂದು ಒಳ್ಳೆಯ ದಿನ ಎಂಬಂತೆ, ತಂದೆ (ಖ್ಯಾತ ನಿರ್ಮಾಪಕ ಡಿ. ರಾಮನಾಯ್ಡು) ಅವರು ತಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ನಾಯಕನಾಗಿ ನಟಿಸಲು ಕೇಳಿಕೊಂಡರು. ಕೊಂಚ ತರಬೇತಿಯ ನಂತರ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟೆ ಎಂದು ತಿಳಿಸಿದರು. 1986ರಲ್ಲಿ ರಾಘವೇಂದ್ರ ರಾವ್ ನಿರ್ದೇಶನದ ಕಲಿಯುಗ ಪಾಂಡವುಲು ಸಿನಿಮಾ ಮೂಲಕ ನಟ ವೆಂಕಟೇಶ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ಮನೋರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಆನಂದ ಸಾಗರದಲ್ಲಿ ನವ ದಂಪತಿ.. ಪತ್ನಿ ಕಿಯಾರಾ ಚೆಲುವಿಗೆ ಸಿದ್ಧಾರ್ಥ್ ಮೆಚ್ಚುಗೆಯ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.