ETV Bharat / entertainment

ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಕಾಂತಾರ ಸ್ಟಾರ್​ ರಿಷಬ್​ ಕುಟುಂಬ ಭೇಟಿ, ಪೂಜೆ ಸಲ್ಲಿಕೆ

author img

By

Published : May 11, 2023, 2:53 PM IST

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ​ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

rishab
ಕಾಂತಾರ ಸ್ಟಾರ್​ ರಿಷಬ್​ ಕುಟುಂಬ

ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಕಾಂತಾರ ಸ್ಟಾರ್​ ರಿಷಬ್​ ಕುಟುಂಬ ಭೇಟಿ, ಪೂಜೆ ಸಲ್ಲಿಕೆ

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕಾಂತಾರ ಸಿನಿಮಾದ ಮೂಲಕ ದೇಶಾದ್ಯಂತ ಖ್ಯಾತಿ ಪಡೆದಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ​ ಕುಟುಂಬ ಸಮೇತರಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.

ರಿಷಬ್​ ಶೆಟ್ಟಿ ಪ್ರಸ್ತುತ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿದ್ದಾರೆ. ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ನಿರ್ಮಾಣ ಶೈಲಿಯಿಂದ ವಿಶೇಷ ಮನ್ನಣೆ ಗಳಿಸಿದ್ದಾರೆ. ಕುಂದಾಪುರದಲ್ಲಿ ಜನಿಸಿದ ಇವರು ಬೆಂಗಳೂರಿನ ಸರ್ಕಾರಿ ಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಚಿತ್ರ ನಿರ್ದೇಶನದಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿದ್ದಾರೆ.

ನಂತರ ಕೆಲಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ರಿಷಬ್​ ಶೆಟ್ಟಿ ಬಳಿಕ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಕಾರಣ ಯಕ್ಷಗಾನ ಕಲೆಯಲ್ಲೂ ಇವರು ಪರಿಣಿತಿ ಪಡೆದಿದ್ದಾರೆ. ರಿಕ್ಕಿ ಚಿತ್ರದಿಂದ ಚಿತ್ರ ನಿರ್ದೇಶನಕ್ಕೆ ಇಳಿದು ಮುಂದೆ ಕಿರಿಕ್ ಪಾರ್ಟಿಯಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟರು.

ಕೇರಳದ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ಇವರು ನಿರ್ದೇಶಿಸಿದ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಇದು ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು. ನಂತರದಲ್ಲಿ ಅವರು ನಿರ್ದೇಶಿಸಿ, ನಟಿಸಿ ಕಾಂತಾರ ಚಿತ್ರದ ಮೂಲಕ ಸೂಪರ್​ ಹಿಟ್​ ಆದರು. ಕಾಂತಾರ ಚಿತ್ರವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಅದರಲ್ಲಿ ಶಿವನಾಗಿ ಅಭಿನಯಿಸಿದ ರಿಷಬ್ ಶೆಟ್ಟಿ ಎಂಬ ಕಲಾವಿದನಿಗೆ ತಲೆ ಬಾಗುತ್ತಿದ್ದಾರೆ.

ಇದನ್ನೂ ಓದಿ: ಸೀರೆ ಸವಿನೆನಪಲ್ಲಿ ಪ್ರಗತಿ ಶೆಟ್ಟಿ.. ಫ್ಯಾಮಿಲಿ ಫೋಟೋ ಹಂಚಿಕೊಂಡ 'ಕಾಂತಾರ' ಸ್ಟಾರ್ ದಂಪತಿ

ಕಾಂತಾರ 2ಗೆ ತಯಾರಿ: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್​ 30 ರಂದು ಕನ್ನಡದಲ್ಲಿ ತೆರೆ ಕಂಡು ಬಾಕ್ಸ್ ಆಫೀಸ್​ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ನಂತರದಲ್ಲಿ ಕನ್ನಡ ಅಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೇ ಉತ್ಸಾಹದಿಂದ ಚಿತ್ರದ 100 ದಿನಗಳ ಕಾರ್ಯಕ್ರಮವನ್ನೂ ಕೂಡ ಅದ್ಧೂರಿಯಾಗಿ ಮಾಡಲಾಗಿತ್ತು. ಸಮಾರಂಭದಲ್ಲಿ ಸೀಕ್ವೆಲ್ ಬದಲಿಗೆ ಪ್ರೀಕ್ವೆಲ್ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಸದ್ಯ ಕಾಂತಾರ 2 ಕೆಲಸ ಚುರುಕುಗೊಂಡಿದೆ.

ಪ್ರೀಕ್ವೆಲ್ ತಯಾರಿ ಆರಂಭಿಸಿರುವ ಚಿತ್ರತಂಡ ಸಿನಿಮಾದ ಸ್ಕ್ರಿಪ್ಟ್​​​​​ನ ಫೈನಲ್​ ಡ್ರಾಫ್ಟ್​​ ರೆಡಿ ಮಾಡಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೆಟಿಜನ್‌ಗಳು ಪ್ರೀಕ್ವೆಲ್ ಕಥೆಯನ್ನು ಊಹಿಸಿ ಪೋಸ್ಟ್ ಮಾಡುತ್ತಿದ್ದಾರೆ. ರಿಷಬ್ ಮತ್ತು ಚಿತ್ರತಂಡ ಅಂತಿಮ ಡ್ರಾಫ್ಟ್‌ನಿಂದ ತೃಪ್ತರಾಗಿದ್ದಾರೆ ಎಂದು ವರದಿಯಾಗಿದೆ. ಚಿತ್ರತಂಡ ಈಗಾಗಲೇ ಶೂಟಿಂಗ್​​ಗೆ ಸೂಕ್ತ ಲೊಕೇಶನ್ ಹುಡುಕಾಟದಲ್ಲಿ ತೊಡಗಿದೆ. ಕರಾವಳಿಯ ಕೆಲವು ಪ್ರದೇಶಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಳೆಗಾಲದ ಆರಂಭದಲ್ಲಿ ಕಾಂತಾರ ಭಾಗ-2 (ಪ್ರೀಕ್ವೆಲ್​) ಚಿತ್ರೀಕರಣ ಆರಂಭವಾಗಲಿದೆ.

ಇದನ್ನೂ ಓದಿ: ಪ್ರೀತಿಯಲ್ಲಿ ಬಿದ್ದ ನರೇಶ್- ಪವಿತ್ರಾ 'ಮತ್ತೆ ಮದುವೆ'ಯಾಗೋದು ಪಕ್ಕಾನಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.