ETV Bharat / entertainment

ಬಹುಕೋಟಿ ವಂಚನೆ ಕೇಸ್: ಜಾಕ್ವೆಲಿನ್​ ಬಳಿಕ ವಿಚಾರಣೆಗೆ ಹಾಜರಾದ ನೋರಾ ಫತೇಹಿ

author img

By

Published : Sep 15, 2022, 4:16 PM IST

Updated : Sep 15, 2022, 8:34 PM IST

ಸುಕೇಶ್​ ಚಂದ್ರಶೇಖರ್​ ಬಹುಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ವಿಚಾರಣೆ ಎದುರಿಸಿದ ಬಳಿಕ, ಇನ್ನೊಬ್ಬ ನಟಿ ನೋರಾ ಫತೇಹಿ ಪೊಲೀಸರೆದುರು ಇಂದು ವಿಚಾರಣೆಗೆ ಹಾಜರಾದರು.

actor-nora-fatehi-appears
ಜಾಕ್ವೆಲಿನ್​ ಬಳಿಕ ವಿಚಾರಣೆಗೆ ಹಾಜರಾದ ನೋರಾ ಫತೇಹಿ

ನವದೆಹಲಿ: ಸುಕೇಶ್ ಚಂದ್ರಶೇಖರ್​​ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಾಲಿವುಡ್​ ನಟಿ, ಡ್ಯಾನ್ಸರ್​ ನೋರಾ ಫತೇಹಿ ಗುರುವಾರ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ವಿಚಾರಣೆಗೆ ಹಾಜರಾದರು.

ಬಾಲಿವುಡ್​ನ ಬಳುಕುವ ಬಳ್ಳಿ ನೋರಾ ಫತೇಹಿ, ಪ್ರಕರಣದಲ್ಲಿ ಎರಡನೇ ಬಾರಿಗೆ ವಿಚಾರಣೆ ಎದುರಿಸಿದರು. ನೋರಾರನ್ನು ಸುಕೇಶ್​ ಚಂದ್ರಶೇಖರ್‌ಗೆ ಪರಿಚಯಿಸಿದ ಇನ್ನೊಬ್ಬ ಆರೋಪಿ ಪಿಂಕಿ ಇರಾನಿಯೊಂದಿಗೆ ವಿಚಾರಣೆ ನಡೆಸಲಾಗುತ್ತಿದೆ.

"ದೆಹಲಿ ಆರ್ಥಿಕ ಅಪರಾಧ ವಿಭಾಗದ ಕಚೇರಿಯಲ್ಲಿ ಪಿಂಕಿ ಇರಾನಿ ಮತ್ತು ಫತೇಹಿ ಇಬ್ಬರೂ ಪೊಲೀಸರ ತನಿಖೆಗೆ ಹಾಜರಾಗಿದ್ದಾರೆ. ಮೊದಲು ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಬಳಿಕ, ಇಬ್ಬರನ್ನೂ ಒಟ್ಟಾಗಿ ಮತ್ತೆ ಪ್ರಶ್ನಿಸಲಾಗುವುದು" ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದರು.

ಪಿಂಕಿ ಇರಾನಿ ನೋರಾ ಫತೇಹಿ ವಿಚಾರಣೆ: ಈ ಹಿಂದೆ ಸೆಪ್ಟೆಂಬರ್ 2 ರಂದು ನೋರಾ ಫತೇಹಿ ಅವರನ್ನು 7 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಈಗ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕರೆಸಲಾಗಿದೆ. ಪಿಂಕಿ ಇರಾನಿ ಮತ್ತು ನಟಿ ನೋರಾ ಅವರ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ. ಆದ್ದರಿಂದ ಇರಾನಿ ಮತ್ತು ನೋರಾ ಇಬ್ಬರನ್ನೂ ಒಟ್ಟಿಗೆ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ನೋರಾ ಫತೇಹಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೊಳಪಡಿಸಿತ್ತು.

  • #WATCH | Actor-dancer Nora Fatehi leaves the EOW office five hours after she arrived here to join the investigation in connection with the jailed conman Sukesh Chandrashekhar money laundering case#Delhi pic.twitter.com/rO1jvfkpsp

    — ANI (@ANI) September 15, 2022 " class="align-text-top noRightClick twitterSection" data=" ">

ಇನ್ನು ನಿನ್ನೆಯಷ್ಟೇ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ರನ್ನು 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ತನಿಖೆಯ ಸಮಯದಲ್ಲಿ ನಟಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ. ಮುಂದೆ ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಪ್ರಸ್ತುತ ಜೈಲಿನಲ್ಲಿರುವ ವಂಚಕ ಸುಖೇಶ್​ ಚಂದ್ರಶೇಖರ್ ಫೋರ್ಟಿಸ್ ಹೆಲ್ತ್‌ಕೇರ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಹಲವು ಜನರಿಗೆ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದರು. ವಂಚಿಸಿದ ಹಣದಲ್ಲಿ ನಟಿಯರಾದ ಜಾಕ್ವೆಲಿನ್​ ಫರ್ನಾಂಡೀಸ್​ ಮತ್ತು ನೋರಾ ಫತೇಹಿ ಅವರಿಗೆ ಉಡುಗೊರೆಗಳನ್ನು ನೀಡಿದ ಆರೋಪವಿದೆ.

ಚಂದ್ರಶೇಖರ್​ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ತನಗೆ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಗೊತ್ತಿದ್ದರೂ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಅವುಗಳನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಅವರೂ ಆರೋಪಿಗಳು ಎಂದು ಇಡಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿದೆ.

ಓದಿ: 8 ಗಂಟೆ ತನಿಖೆ ಎದುರಿಸಿದ ನಟಿ ಜಾಕ್ವೆಲಿನ್​​ ಫರ್ನಾಂಡಿಸ್‌: ಇಂದು ನೋರಾ ಫತೇಹಿ ವಿಚಾರಣೆ

Last Updated : Sep 15, 2022, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.