ETV Bharat / entertainment

ಬಾರ್​ನಲ್ಲಿ ನಟ ಧನಂಜಯ್ ಕಾರು ಬಾರು.. ಡಾಲಿ ನೋಡಿ ಶಾಕ್ ಆದ ಜನ

author img

By

Published : Sep 7, 2022, 10:34 PM IST

Updated : Sep 8, 2022, 3:03 PM IST

ಧನಂಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಸಿನಿಮಾ ಮಾನ್ಸೂನ್ ರಾಗ ಹಲವು ವಿಶೇಷತೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

ಸಿನಿಮಾ ಮಾನ್ಸೂನ್ ರಾಗ
ಸಿನಿಮಾ ಮಾನ್ಸೂನ್ ರಾಗ

ನಟ, ಖಳನಾಯಕ ಹೀಗೆ ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್. ಸದ್ಯ ಯೂತ್ ಐಕಾನ್ ಆಗಿ ಯುವ ಜನಾಂಗದವರನ್ನ ಆಕರ್ಷಣೆ ಮಾಡುತ್ತಿರುವ ಧನಂಜಯ್ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಎರಡು ವರ್ಷ ಬ್ಯುಸಿಯಾಗಿದ್ದಾರೆ. ಪಾತ್ರಕ್ಕಾಗಿ ತನ್ನನ್ನೇ ಚೇಂಜ್​ ಮಾಡಿಕೊಳ್ಳುವ ಧನಂಜಯ್, ಈಗ ಸಿನಿಮಾ ಪ್ರಚಾರಕ್ಕಾಗಿ ಹಾಗೂ ಸಿನಿಮಾ ಗೆಲುವಿಗಾಗಿ ಏನು ಬೇಕಾದರೂ ಮಾಡ್ತಾರೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ.

ಹೌದು, ಧನಂಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಸಿನಿಮಾ ಮನ್ಸೂನ್ ರಾಗ . ಹಲವು ವಿಶೇಷತೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಇದೇ ಸೆಪ್ಟೆಂಬರ್​ 16ಕ್ಕೆ ರಾಜ್ಯಾದ್ಯಾಂತ ತೆರೆ ಕಾಣೋದಕ್ಕೆ ಸಜ್ಜಾಗಿರೋ ಮಾನ್ಸೂನ್ ರಾಗ ಚಿತ್ರದ ಪ್ರಚಾರವನ್ನ ಧನಂಜಯ್ ಅಂಡ್ ಟೀಮ್ ಬಹಳ ಯೂನಿಕ್ ಆಗಿ ಮಾಡಿದೆ.

ಸಿನಿಮಾ ಸ್ಟಾರ್​ಗಳು ಎಂದರೆ ಸಹಜವಾಗಿ ಸಾಮಾನ್ಯ ಜನರ ಕೈಗೆ ಸಿಗೋದು ಕಷ್ಟ ಅನ್ನೋ ಮಾತಿದೆ. ಆದರೆ, ಈ ವಿಷಯದಲ್ಲಿ ಧನಂಜಯ್ ಭಿನ್ನ. ಮಾನ್ಸೂನ್ ರಾಗ ಸಿನಿಮಾ ಪ್ರಚಾರವನ್ನ ಧನಂಜಯ್ ಬೆಂಗಳೂರಿನ ಸೌತ್ ಅಂಡ್​ ಸರ್ಕಲ್​ನಲ್ಲಿರುವ ಬಾರ್​ವೊಂದರಲ್ಲಿ ಮಾಡಿದ್ದಾರೆ.

ಹೌದು ಬಾರ್​ನಲ್ಲಿ ಕೆಲಸ ಮಾಡುವ ಹಾಗೂ ಮಧ್ಯಪಾನ ಮಾಡೋದಕ್ಕೆ ಬರುವ ಮಧ್ಯ ಪ್ರಿಯರನ್ನ ಸ್ವತಃ ಧನಂಜಯ್ ಇದೇ ಸೆಪ್ಟಂಬರ್ 16ಕ್ಕೆ ನಾನು ಅಭಿನಯಿಸಿರೋ ಮಾನ್ಸೂನ್ ರಾಗ ಸಿನಿಮಾ ಬರ್ತಾ ಇದೆ ನೋಡಿ ಅಂತಾ ಬಾರ್​ನಲ್ಲಿ ಕೆಲಸ ಮಾಡುವ ಸಪ್ಲೈಯರ್​ಗಳಿಗೆ ಹೇಳಿದ್ದಾರೆ.

ಇನ್ನು ಬಾರ್​ನಲ್ಲಿ ಕೆಲಸ ಮಾಡುವ ಸಪ್ಲೈಯರ್​ಗಳ ಕಷ್ಟ ಸುಖಗಳ ಬಗ್ಗೆ ಧನಂಜಯ್ ವಿಚಾರಿಸುವ ಮೂಲಕ ಆತ್ಮ ವಿಶ್ವಾಸದ ಮಾತುಗಳನ್ನ ಹೇಳಿದ್ದಾರೆ. ಕೊನೆಯಲ್ಲಿ ಮಾನ್ಸೂನ್ ರಾಗ ಸಿನಿಮಾದ ನಿರ್ಮಾಪಕ ವಿಖ್ಯಾತ್ ಹಾಗೂ ಧನಂಜಯ್ ಅವರ ಸರಳತೆ ನೋಡಿ ಗೌರವಿಸಲಾಗಿದೆ. 70-80ರ ದಶಕದಲ್ಲಿ ನಡೆಯುವಂಥ ಕಥೆಯಾಗಿದ್ದು, ನಿರ್ದೇಶಕ ರವೀಂದ್ರನಾಥ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದಲ್ಲಿ ಧನಂಜಯ್, ರಚಿತಾ ರಾಮ್, ಸುಹಾಸಿನಿ, ಅಚ್ಯುತ್ ಕುಮಾರ್, ಯುವ ನಟಿ ಯಶಾ ಶಿವಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ. ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಇದ್ದು, ನವೀನ್ ಜಿ ಪೂಜಾರಿ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಈ ಹಿಂದೆ ಪುಷ್ಪಕ ವಿಮಾನ ಸಿನಿಮಾವನ್ನ ಮಾಡಿ ಗಮನ ಸೆಳೆದಿದ್ದ ಎ. ಆರ್ ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ಒಟ್ಟಾರೆ ಹತ್ತು ಹಲವು ವಿಶೇಷತೆಗಳಿರುವ ಮಾನ್ಸೂನ್ ರಾಗ ಸಿನಿಮಾ ದೊಡ್ಡದಾಗಿ ಸೌಂಡ್ ಮಾಡ್ತಿದ್ದು, ನಿರೀಕ್ಷೆಯನ್ನ ಹೆಚ್ಚಿಸುತ್ತಿದೆ.

ಓದಿ: ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್

Last Updated : Sep 8, 2022, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.