ETV Bharat / entertainment

ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ಧೂಳೆಬ್ಬಿಸುತ್ತಿರುವ ಹೊತ್ತಲ್ಲಿ ಗಾಯಗೊಂಡ ನಟ ವಿಕ್ರಮ್​​

author img

By

Published : May 3, 2023, 7:10 PM IST

'ಪೊನ್ನಿಯಿನ್​ ಸೆಲ್ವನ್​ 2' ಮೂಲಕ ಸದ್ದು ಮಾಡುತ್ತಿರುವ ನಟ ಚಿಯಾನ್ ವಿಕ್ರಮ್ ತಮ್ಮ ಮುಂದಿನ ಚಿತ್ರದ ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡಿದ್ದಾರೆ.

Chiyaan Vikram injured
ಗಾಯಗೊಂಡ ನಟ ವಿಕ್ರಮ್​​

'ಪೊನ್ನಿಯಿನ್​ ಸೆಲ್ವನ್​ 2' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ನಟ ಚಿಯಾನ್ ವಿಕ್ರಮ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ನಟ ವಿಕ್ರಮ್​​ 'ಪೊನ್ನಿಯಿನ್ ಸೆಲ್ವನ್ 2'ನಲ್ಲಿನ ನಟನೆಗಾಗಿ ವಿಮರ್ಶಕರು, ಅಭಿಮಾನಿಗಳಿಂದ ಪ್ರಶಂಸೆಗಳನ್ನು ಸ್ವೀಕರಿಸುತ್ತಿದ್ದಾರೆ. ತಮ್ಮ ಮುಂಬರುವ ಚಿತ್ರ ತಂಗಲಾನ್‌ಗಾಗಿ (Thangalaan) ಅಭ್ಯಾಸ ಮಾಡುವ ವೇಳೆ ಅವರು ಗಾಯ ಮಾಡಿಕೊಂಡಿದ್ದಾರೆ. ಪಕ್ಕೆಲುಬಿನ ಗಾಯದ ಹಿನ್ನೆಲೆ ಪಾ ರಂಜಿತ್ ಅವರ ತಂಗಲಾನ್‌ ಚಿತ್ರೀಕರಣದಿಂದ ನಟ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂದು ವಿಕ್ರಮ್ ಅವರ ಮ್ಯಾನೇಜರ್ ಟ್ವೀಟ್ ಮಾಡಿದ್ದಾರೆ.

ನಟ ವಿಕ್ರಮ್ ಗಾಯಗೊಂಡ ಸುದ್ದಿಯನ್ನು ​​ಅವರ ಮ್ಯಾನೇಜರ್​ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ. ವಿಕ್ರಮ್ ಮತ್ತು ಅವರ ಮಗ ಧ್ರುವ್ ಅವರ ಮ್ಯಾನೇಜರ್ ಸೂರ್ಯನಾರಾಯಣನ್ ಟ್ವೀಟ್​ ಮಾಡಿದ್ದು, 'ಆದಿತಾ ಕರಿಕಾಳನ್ ಅಲಿಯಾಸ್ ಚಿಯಾನ್ ವಿಕ್ರಮ್ ಅವರಿಗೆ ಬಂದಿರುವ ಎಲ್ಲಾ ಪ್ರೀತಿ ಮತ್ತು ಕೃತಜ್ಞತೆಗಳಿಗೆ ಧನ್ಯವಾದಗಳು. ಅಭ್ಯಾಸದ ಸಮಯದಲ್ಲಿ ಪಕ್ಕೆಲುಬು ಮುರಿದುಕೊಂಡಿದ್ದಾರೆ. ಚಿಯಾನ್ ತಮ್ಮ ತಂಗಲಾನ್ ತಂಡವನ್ನು ಮತ್ತೆ ಸೇರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಅವರು ಬೆಂಬಲಕ್ಕಾಗಿ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಸಾಧ್ಯವಾದಷ್ಟು ಬೇಗ ತಮ್ಮ ಸಾಮಾನ್ಯ ರಾಕಿಂಗ್ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ಸೂರ್ಯನಾರಾಯಣನ್ ಟ್ವೀಟ್ ಮಾಡಿದ ತಕ್ಷಣ ನಟ ಚಿಕ್ರಮ್​​ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಲು ಆರಂಭಿಸಿದ್ದಾರೆ. ಈ ಟ್ವೀಟ್​ಗೆ ಅಭಿಮಾನಿಗಳು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. 'ಟೇಕ್ ಕೇರ್ ಸರ್, ದೇವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾನೆ' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು "ಆತ್ಮೀಯ ತಲೈವಾ ಶೀಘ್ರದಲ್ಲೇ ಗುಣಮುಖರಾಗಿ" ಎಂಬ ಹಾರೈಸಿದ್ದಾರೆ.

  • Thank you for all the love and appreciation Aditha Karikalan aka Chiyaan Vikram has received and for the astounding response to PS2 from all over the world. Chiyaan sustained an injury during rehearsals resulting in a broken rib due to which he will not be able to join his…

    — Suryanarayanan M (@sooriaruna) May 3, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಅಂಬರೀಶ್​ ಅಂತಿಮ ದರ್ಶನಕ್ಕೆ ರಮ್ಯಾ ಗೈರು: ಕಾರಣ ಬಹಿರಂಗಪಡಿಸಿದ ನಟಿ

ದಶಕಗಳ ಹಿಂದೆ ಕೋಲಾರ ಚಿನ್ನದ ಗಣಿಗಳಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ 'ತಂಗಲಾನ್‌'ನಲ್ಲಿ ವಿಕ್ರಮ್ ಸ್ಥಳೀಯ ಬುಡಕಟ್ಟು ಜನಾಂಗದ ಮುಖ್ಯಸ್ಥನ ಪಾತ್ರ ನಿರ್ವಹಿಸಿದ್ದಾರೆ. ಪಾ ರಂಜಿತ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಜ್ಞಾನವೇಲ್ರಜ ನಿರ್ಮಾಣದ ಈ ಚಲನಚಿತ್ರದಲ್ಲಿ ವಿಕ್ರಮ್ ಜೊತೆಗೆ, ಪಶುಪತಿ, ಪಾರ್ವತಿ ತಿರುವೋತು, ಮಾಳವಿಕಾ ಮೋಹನನ್ ಮತ್ತು ಡೇನಿಯಲ್ ಕ್ಯಾಲ್ಟಗಿರೋನ್ ಕೂಡ ನಟಿಸಿದ್ದಾರೆ. ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಚಿತ್ರೀಕರಣ ನಡೆಯುತ್ತಿದೆ.

ಇದನ್ನೂ ಓದಿ: 'ಪಿಎಫ್​ಐ, ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಯತ್ನವನ್ನು ವಿರೋಧಿಸುತ್ತೇನೆ': ನಟ ಚೇತನ್​

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿ ವಿಕ್ರಮ್​ ಮತ್ತು ಐಶ್ವರ್ಯಾ ರೈ ಬಚ್ಚನ್​​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಸೌತ್​ ಸೂಪರ್​ ಸ್ಟಾರ್​ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಜಾಗತಿಕವಾಗಿ 250 ಕೋಟಿ ರೂ. ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.