ETV Bharat / entertainment

ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿ: ನಟ ಚೇತನ್ ಟ್ವೀಟ್​

author img

By

Published : Apr 14, 2023, 12:24 PM IST

Updated : Apr 14, 2023, 12:40 PM IST

ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸುವತ್ತ ಸರ್ಕಾರ ಚಿಂತಿಸಬೇಕು ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ.

actor Chetan tweet
ನಟ ಚೇತನ್

ಬೆಂಗಳೂರು: ಹೇಳಿಕೆಗಳ ಮೂಲಕ ಸದ್ದು ಮಾಡುವ ನಟ ಚೇತನ್​ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಪೋಸ್ಟ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್​ ಸುಖು ಗಾಂಜಾ ವಿಚಾರವಾಗಿ ಮಾತನಾಡಿದ್ದನ್ನು ಉಲ್ಲೇಖಿಸುವ ಮೂಲಕ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ ಎಂದು ನಟ ಚೇತನ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಟ ಚೇತನ್ ಟ್ವೀಟ್​​: ಟ್ಟಿಟರ್​ನಲ್ಲಿ ಈ ಬಗ್ಗೆ ಬರೆದುಕೊಂಡ ನಟ ಚೇತನ್, ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್​ ಸುಖು ಅವರು ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಲು ಯೋಜಿಸಿದ್ದಾರೆ. ಗಾಂಜಾ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು 5 ಸದಸ್ಯರ ಸಮಿತಿ ಅಧ್ಯಯನ ಮಾಡುತ್ತದೆ ಎಂದು ತಿಳಿಸಿದ್ದಾರೆ‌. ಜೊತೆಗೆ ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶದಂತೆ ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸುವತ್ತ ಗಮನ ಹರಿಸಬೇಕು ಅಂತಾ ನಟ‌ ಚೇತನ್ ಅಹಿಂಸಾ ಬರೆದುಕೊಂಡಿದ್ದಾರೆ. ಇದು ನೆಟ್ಟಿಗರ ಪರ ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ

ಡ್ರಗ್ಸ್ ಪ್ರಕರಣ ಈಗಾಗಲೇ ಕನ್ನಡ ಚಿತ್ರರಂಗದ ಕೆಲ ಕಲಾವಿದರ ನಿದ್ದೆಗೆಡಿಸಿತ್ತು. ‌ಇಂತಹ ಸಂದರ್ಭದಲ್ಲಿ ಚೇತನ್ ಅವರು ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸುವತ್ತ ಗಮನ ಹರಿಸಬೇಕು ಎಂದು ಹೇಳುವ ಮೂಲಕ ಸದ್ದು ಮಾಡಿದ್ದಾರೆ. ಚೇತನ್ ಹೇಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಸೃಷ್ಟಿಸಿದೆ.

ಇದನ್ನೂ ಓದಿ: 'ಸಲ್ಮಾನ್​ ಖಾನ್​ ಸಿನಿಮಾಗಳ ಸೆಟ್​ನಲ್ಲಿ ನಟಿಯರು ಮೈಮುಚ್ಚುವಂತಹ ಬಟ್ಟೆ ತೊಡಬೇಕು'

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ: 'ಗೋಧಿ ಅಕ್ಕಿ ಜೋಳದಂತೆ ಗಾಂಜಾವನ್ನು ಕೃಷಿಕರು ಬೆಳೆದು ಸಮಾನತೆಯನ್ನು ಕಾಪಾಡಬೇಕು ರಾಜ್ಯದ ಆದಾಯವನ್ನು ಹೆಚ್ಚಿಸಲು ಇನ್ನೂ ಏನೇನೋ ಯೋಚನೆಗಳು ಇದೆಯೋ ಈ ಮಹಾನುಭಾವರಲ್ಲಿ' ಎಂದು ಸಾಮಾಜಿಕ ಜಾಲತಾಣ ಬಳಕೆದಾರೋರ್ವರು ತಿಳಿಸಿದ್ದಾರೆ. ಇನ್ನೊಬ್ಬರು ಕಾಮೆಂಟ್​ ಮಾಡಿ ಹೌದು, ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಬರಲಿ ಎಂದು ಆಶಿಸೋಣ. ಕೆಲ ವೈದ್ಯಕೀಯ ನಿಯತಕಾಲಿಕೆಗ ಪ್ರಕಾರ, ಗಾಂಜಾ ಮೆದುಳಿನ ಟ್ಯೂಮರ್ ಸೇರಿದಂತೆ ಕೆಲ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದಿನ ಪ್ರಕರಣ: ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ನಟ ಚೇತನ್‌ ಅವರು ಕೆಲ ದಿನಗಳ ಹಿಂದೆ ಹಿಂದುತ್ವ ವಿರೋಧಿ ಎಂಬ ಆರೋಪ ಎದುರಿಸಿದ್ದರು. ಹಿಂದೂಪರ ಕಾರ್ಯಕರ್ತ ಶಿವಕುಮಾರ್ ಎಂಬುವವರು ನಟನ ಮೇಲೆ ಈ ಆರೋಪ ಹೊರಿಸಿ ಪೊಲಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮಾರ್ಚ್​ 21ರಂದು ಶೇಷಾದ್ರಿಪುರಂ ಪೊಲೀಸರು ನಟನನ್ನು ಅರೆಸ್ಟ್ ಮಾಡಿದ್ದರು. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. 14 ದಿನ ಪೂರ್ಣಗೊಳ್ಳುವ ಮೊದಲು (ಮೇ. 23) ನಟನಿಗೆ ಜಾಮೀನು ಮಂಜೂರಾಗಿತ್ತು.

ಇದನ್ನೂ ಓದಿ: ಮುದ್ದಾದ ವಿಡಿಯೋ ಹಂಚಿಕೊಂಡು ಪುತ್ರಿಯ ಗುಣಗಾನ ಮಾಡಿದ ಕಿಂಗ್​​​​​​​ ಖಾನ್​​

Last Updated : Apr 14, 2023, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.