ETV Bharat / entertainment

ಹುಟ್ಟುಹಬ್ಬದ ಸಂಭ್ರಮದಲ್ಲಿ ಆದಿತ್ಯ ರಾಯ್ ಕಪೂರ್​.. ಆಶಿಕಿ ನಟನ ಮದುವೆ ಯಾವಾಗ?

author img

By

Published : Nov 16, 2022, 4:07 PM IST

37ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಆದಿತ್ಯ ರಾಯ್ ಕಪೂರ್​ ಅವರಿಗೆ ಅಭಿಮಾನಿಗಳು, ಆತ್ಮೀಯರು ಸೇರಿದಂತೆ ಚಿತ್ರ ರಂಗದವರು ಶುಭಾಶಯ ಕೋರುತ್ತಿದ್ದಾರೆ.

Actor Aditya Roy Kapur Birthday
ಆದಿತ್ಯ ರಾಯ್ ಕಪೂರ್​ ಜನ್ಮದಿನ

ಆಶಿಕಿ 2 ಚಿತ್ರದ ನಾಯಕ ಆದಿತ್ಯ ರಾಯ್ ಕಪೂರ್​ ಅವರು ಇಂದು 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಪಾರ ಅಭಿಮಾನಿಗಳನ್ನು ಗಳಿಸಿರುವ ಆದಿತ್ಯ ರಾಯ್ ಅಂದ್ರೆ ಕೆಲ ಸೆಲೆಬ್ರಿಟಿಗಳಿಗೂ ಕೂಡ ಅಚ್ಚುಮೆಚ್ಚು. ಅಭಿಮಾನಿಗಳು, ಆತ್ಮೀಯರು ಸೇರಿದಂತೆ ಚಿತ್ರರಂಗದವರು ಸಹ ಆದಿತ್ಯ ರಾಯ್ ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ.

Actor Aditya Roy Kapur Birthday
ಆದಿತ್ಯ ರಾಯ್ ಕಪೂರ್​ ಜನ್ಮದಿನ

2009ರಲ್ಲಿ ಲಂಡನ್ ಡ್ರೀಮ್ಸ್ ಎಂಬ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಆದಿತ್ಯ 2013ರಲ್ಲಿ ರೊಮ್ಯಾಂಟಿಕ್ ಆಶಿಕಿ 2 ಸಿನಿಮಾ ಮೂಲಕ ಭಾರೀ ಯಶಸ್ಸು ಕಂಡುಕೊಂಡ್ರು. ಅತ್ಯುತ್ತಮ ನಟನೆಗಾಗಿ ಬಿಗ್​ ಸ್ಟಾರ್​ ಎಂಟರ್​ಟೈನ್​ಮೆಂಟ್​ ಅವಾರ್ಡ್ಸ್​, ಸ್ಕ್ರೀನ್ ಅವಾರ್ಡ್ಸ್, ಇಂಟರ್​​ನ್ಯಾಷನಲ್ ಇಂಡಿಯನ್​ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಗುಝಾರಿಶ್, ಹೆ ಜವಾನಿ ಹೆ ದಿವಾನಿ, ಫಿತೂರ್​, ಓಕೆ ಜಾನು, ಡಿಯರ್ ಜಿಂದಗಿ, ಕಲಂಕ್​, ಮಲಂಗ್​ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆದಿತ್ಯ ರಾಯ್ ಕಪೂರ್ ಹಿಂದಿ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಫಿಟ್‌ನೆಸ್ ನಟರಲ್ಲೊಬ್ಬರು. ಅವರ ಶರ್ಟ್‌ಲೆಸ್ ಚಿತ್ರಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಇತ್ತೀಚೆಗೆ ಶರ್ಟ್‌ಲೆಸ್ ಮಿರರ್ ಸೆಲ್ಫಿಯೊಂದನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದು, ಆ ಫೋಟೋ ಭಾರೀ ಮೆಚ್ಚುಗೆ ಗಳಿಸಿದೆ.

"ನನ್ನ ಬಿಕಿನಿ ದೇಹದೊಂದಿಗೆ ನಾನು ಸಿದ್ಧವಾಗಿರುತ್ತೇನೆ ಎಂದು ಹೇಳಿದ್ದೆ" ಎಂಬ ಹಾಸ್ಯ ಶೀರ್ಷಿಕೆ ಕೊಟ್ಟಿದ್ದಾರೆ. ನಟನ ಈ ಫೋಟೋಗೆ ಫ್ಯಾನ್ಸ್ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಇನ್ನೂ ರಾಷ್ಟ್ರ ಕವಚ್ ಓಮ್, ಮಲಂಗ್​ ಚಿತ್ರದಲ್ಲಿ ಆದಿತ್ಯ ತಮ್ಮ ಸಿಕ್ಸ್ ಪ್ಯಾಕ್​ ಲುಕ್​ನೊಂದಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಸುಂದರಿ ಐಶ್ವರ್ಯಾ ರೈ ಮಗಳ ಜನ್ಮದಿನ.. ಆರಾಧ್ಯಳಿಗೆ ಸಿಹಿ ಮುತ್ತು ಕೊಟ್ಟು ಶುಭಕೋರಿದ ತಾಯಿ

37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನ ವೈಯಕ್ತಿಕ ಜೀವನದ ಕುರಿತು ಅಭಿಮಾನಿಗಳು ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ. ಶ್ರದ್ಧಾ ಕಪೂರ್, ರಿಯಾ ಚಕ್ರವರ್ತಿ, ಕತ್ರಿನಾ ಕೈಫ್​ ಸೇರಿದಂತೆ ಕೆಲ ನಟಿಯರೊಂದಿಗೆ ನಟನ ಹೆಸರು ಕೇಳಿ ಬಂದಿತ್ತಾದರೂ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಲಭ್ಯವಾಗಲಿಲ್ಲ. ಅವರ ಡೇಟಿಂಗ್​ ವದಂತಿ ಮಾತ್ರ ದೊಡ್ಡ ಮಟ್ಟದಲ್ಲಾಯಿತು. ಇನ್ನೂ ಬ್ಯಾಚುಲರ್​ ಆಗಿಯೇ ಗುರುತಿಸಿಕೊಂಡಿರುವ ನಟನ ಮದುವೆ ಯಾವಾಗ ಎಂದು ಅಭಿಮಾನಿಗಳು ಕುತೂಹಲದಿಂದ ಕೇಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.