ETV Bharat / entertainment

ಐಪಿಎಲ್​​ ಕೊನೆ ಪಂದ್ಯದ ವಿರಾಮದ ವೇಳೆ ಲಾಲ್‌ ಸಿಂಗ್‌ ಚಡ್ಡಾ ಟ್ರೈಲರ್‌ ಬಿಡುಗಡೆ

author img

By

Published : May 25, 2022, 3:42 PM IST

Updated : May 25, 2022, 4:15 PM IST

ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಐಪಿಎಲ್ 2022 ರ ಅಂತಿಮ ಪಂದ್ಯದ ವೇಳೆ ತಮ್ಮ ಚಿತ್ರದ ಟ್ರೈಲರ್​​​​ ಬಿಡುಗಡೆಗೆ ಸಿದ್ಧರಾಗಿದ್ದಾರೆ.

ಲಾಲ್‌ ಸಿಂಗ್‌ ಚಡ್ಡಾ ಟ್ರೈಲರ್‌ ಬಿಡುಗಡೆ
ಲಾಲ್‌ ಸಿಂಗ್‌ ಚಡ್ಡಾ ಟ್ರೈಲರ್‌ ಬಿಡುಗಡೆ

ಮುಂಬೈ: ಮೇ. 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಫೈನಲ್​​ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯ ಮೊದಲ ಇನ್ನಿಂಗ್ಸ್​​ನ ಸೆಕೆಂಡ್​​ ಸ್ಟ್ರಾಟೆಜಿಕ್ ಟೈಮ್‌ಔಟ್‌ನಲ್ಲಿ, ಬಾಲಿವುಡ್ ನಟ ಅಮೀರ್ ಖಾನ್​​ ಅವರ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಟ್ರೈಲರ್​​ ಅನಾವರಣಗೊಳಿಸಲಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರತಂಡವು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅಮೀರ್ 'ಲಾಲ್ ಸಿಂಗ್ ಚಡ್ಡಾ' ಟ್ರೈಲರ್​ ಬಿಡುಗಡೆಯನ್ನು ಮಾಡುವ ಬಗ್ಗೆ ಘೋಷಿಸಿದ್ದಾರೆ. ಮೇ. 29ರಂದು ನಡೆಯಲಿರುವ ಐಪಿಎಲ್‌ ಕೊನೆಯ ಪಂದ್ಯಾವಳಿಯನ್ನು ಕೋಟ್ಯಂತರ ಭಾರತೀಯರು ಕಾತುರದಿಂದ ನೋಡುತ್ತಾರೆ ಎಂಬುದು ಖಚಿತ.

ಈ ವೇಳೆ, ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದರೆ ಅತಿಹೆಚ್ಚು ಜನರನ್ನು ತಲುಪಲು ಸಾಧ್ಯ ಎಂಬುದು ಚಿತ್ರತಂಡದ ಯೋಜನೆಯಾಗಿದೆ. ಹಾಗಾಗಿ ವಿಡಿಯೋದಲ್ಲಿ ಅಮೀರ್​ ಖಾನ್​​ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್​ನಲ್ಲಿ ನಾನು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.

ಹಾಡುಗಳನ್ನು ಬಿಡುಗಡೆ ಮಾಡುವುದರಿಂದ ಹಿಡಿದು ಗಾಯಕರು, ಗೀತ ರಚನೆಕಾರರು, ಸಂಯೋಜಕರು ಮತ್ತು ತಂತ್ರಜ್ಞರನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಬಿಡುಗಡೆಯನ್ನು ಉತ್ತೇಜಿಸಲು ಅಮೀರ್ ವಿಶಿಷ್ಟ ತಂತ್ರಗಳನ್ನು ರೂಪಿಸಲು ಹೊರಟಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿರುವ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ಚೈತನ್ಯ ಅಕ್ಕಿನೇನಿ ಕೂಡ ನಟಿಸಿದ್ದಾರೆ.

ಅದ್ವೈತ್‌ ಚಂದನ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಲಾಲ್‌ ಸಿಂಗ್‌ ಚಡ್ಡಾ ಚಿತ್ರದಲ್ಲಿ ಆಮಿರ್‌ ಖಾನ್‌ಗೆ ಕರೀನಾ ಕಪೂರ್‌ ನಾಯಕಿಯಾಗಿದ್ದಾರೆ. ಈ ಚಿತ್ರವು ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ದರ್ಶನ್ ಜತೆ ₹1,500 ಸಾವಿರ ಕೋಟಿ ಕಲೆಕ್ಷನ್‌ ಮಾಡುವ ಸಿನಿಮಾ ಮಾಡುತ್ತೇನೆ : ರಾಜೇಂದ್ರಸಿಂಗ್ ಬಾಬು


Last Updated : May 25, 2022, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.