ETV Bharat / entertainment

ಮ್ಯಾಗಜೀನ್​ಗಾಗಿ ಬೆತ್ತಲಾದ ರಣವೀರ್​ ಸಿಂಗ್​; ‘ಇದಕ್ಕೆಲ್ಲ ಪತ್ನಿ ದೀಪಿಕಾ ಅನುಮತಿ ಕೊಟ್ರಾ?’

author img

By

Published : Jul 22, 2022, 7:47 AM IST

ರಣವೀರ್ ಸಿಂಗ್ ತಮ್ಮ ಚಿತ್ರವಿಚಿತ್ರ ಶೈಲಿ ಮತ್ತು ಫ್ಯಾಷನ್‌ನಿಂದಾಗಿ ಚರ್ಚೆಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಮಾಡಿದ್ದೇ ಬೇರೆ.

Ranveer Singh breaks the internet, Ranveer Singh nude for magazine shoot, Ranveer Singh nude photoshoot, Ranveer Singh news, ಇಂಟರ್ನೆಟ್​ನಲ್ಲಿ ದೂಳೆಬ್ಬಿಸುತ್ತಿರುವ ರಣವೀರ್ ಸಿಂಗ್ , ಮ್ಯಾಗಜೀನ್ ಶೂಟ್‌ಗಾಗಿ ಬೆತ್ತಲಾದ ರಣವೀರ್ ಸಿಂಗ್, ರಣವೀರ್ ಸಿಂಗ್ ನ್ಯೂಡ್ ಫೋಟೋಶೂಟ್, ರಣವೀರ್ ಸಿಂಗ್ ಸುದ್ದಿ,
ಮ್ಯಾಗಜೀನ್​ಗಾಗಿ ಬೆತ್ತಲಾದ ಗಂಡ ರಣವೀರ್​ ಸಿಂಗ್

ಬಾಲಿವುಡ್‌ ನಟ ರಣವೀರ್ ಸಿಂಗ್ ಕೆಲವೊಮ್ಮೆ ಸಿನೆಮಾಗಳಿಗಾಗಿ, ಮತ್ತೆ ಕೆಲವು ಬಾರಿ ವಿಭಿನ್ನ ಫ್ಯಾಶನ್ ಸೆನ್ಸ್‌ಗೋಸ್ಕರ ಸುದ್ದಿಲೋಕದಲ್ಲಿ ಸದ್ದು ಮಾಡುತ್ತಾರೆ. ಆದ್ರೆ, ಈ ಸಲ ಇವರು ನಗ್ನ ಫೋಟೋಶೂಟ್ ಮೂಲಕ ನೆಟ್ಟಿಗರು ಹೌಹಾರುವಂತೆ ಮಾಡಿದ್ದಾರೆ. ಹೌದು, ಮ್ಯಾಗಜೀನ್ ಫೋಟೋಶೂಟ್​ಗಾಗಿ ರಣವೀರ್‌ ಬೆತ್ತಲಾಗಿದ್ದು, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಈ ಚಿತ್ರಗಳನ್ನು ನೋಡಿದ ರಣವೀರ್ ಅಭಿಮಾನಿಗಳು, ಇದಕ್ಕೆಲ್ಲ ಪತ್ನಿ ದೀಪಿಕಾ ಅನುಮತಿ ಕೊಟ್ಟಿದ್ದಾರೆಯೇ? ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ರಣವೀರ್ ಸಿಂಗ್ ಸೂಪರ್ ಹಾಟ್ ಆಗಿ ಕಾಣ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅವತಾರ ನೋಡಿದ ಕೆಲವರಂತೂ ಆಕ್ರೋಶದ ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. ಇನ್ನೂ ಹಲವರು ಬಾಲಿವುಡ್‌ನಲ್ಲಿ ಕೊಳಕು ಹೆಚ್ಚುತ್ತಿದೆ ಎಂದು ಕಿಡಿ ಕಾರಿದ್ದಾರೆ.

ರಣವೀರ್ ಸಿಂಗ್ ಕೊನೆಯದಾಗಿ ಜಯೇಶ್‌ಭಾಯ್ ಜೋರ್ದಾರ್‌ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಗಳಿಕೆ ಮಾಡಲಿಲ್ಲ. ಪ್ರಸ್ತುತ, ತಮ್ಮ ಮುಂಬರುವ ಚಿತ್ರಗಳಾದ ಸರ್ಕಸ್, ರಾಕಿ ಮತ್ತು ರಾಣಿ ಕಿ ಪ್ರೇಮ್ ಕಹಾನಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಿರತರಾಗಿದ್ದಾರೆ.

ಪೇಪರ್ ಮ್ಯಾಗಜೀನ್ 2014ರಲ್ಲಿ ಹಾಲಿವುಡ್‌ನ ಕಿಮ್ ಕರ್ದಾಶಿಯನ್‌ ಶಾಂಪೇನ್ ಫೋಟೋಶೂಟ್‌ನೊಂದಿಗೆ ಇಂಟರ್ನೆಟ್​ನಲ್ಲಿ ದೂಳೆಬ್ಬಿಸಿತ್ತು. ಇದೀಗ ನಿಯತಕಾಲಿಕೆ ರಣವೀರ್​ ನ್ಯೂಡ್​ ಫೋಟೋಶೂಟ್​ ಮಾಡ್ಸಿ ಇಂಟರ್ನೆಟ್​ನಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: HBD Ranveer Singh: ಏಷ್ಯಾದ ಶ್ರೀಮಂತ ಸೆಲೆಬ್ರಿಟಿ ದಂಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ತಾರಾ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.