ETV Bharat / entertainment

ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡಲು ಪ್ರಿಯಾಂಕಾ ಚೋಪ್ರಾ ಕರೆ

author img

By

Published : Apr 9, 2022, 7:41 AM IST

Priyanka Chopra on Russia-Ukraine war.. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಉಕ್ರೇನ್‌ ಮತ್ತು ರಷ್ಯಾದ ನಡುವಿನ ಯುದ್ಧದ ಕುರಿತು ಪ್ರತಿಕ್ರಿಯೆ ನೀಡಿದ್ದು, ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡುವಂತೆ ವಿಶ್ವದ ನಾಯಕರಿಗೆ ಮನವಿ ಮಾಡಿದ್ದಾರೆ.

Priyanka Chopra urges world leaders to help refugees amid Russia-Ukraine war
ಯುದ್ಧವನ್ನು ನಾವು ಸುಮ್ಮನೆ ನಿಂತು ನೋಡಲು ಸಾಧ್ಯವಿಲ್ಲ, ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡಿ: ಪ್ರಿಯಾಂಕಾ ಚೋಪ್ರಾ

ನವದೆಹಲಿ: ಉಕ್ರೇನ್‌ ಮತ್ತು ರಷ್ಯಾದ ನಡುವಿನ ಯುದ್ಧ ಮುಂದುವರೆದಿದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ, ಯುನಿಸೆಫ್​ ರಾಯಭಾರಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವದ ಎಲ್ಲಾ ನಾಯಕರು ನಿರಾಶ್ರಿತರ ಪರವಾಗಿ ನಿಲ್ಲುವಂತೆ ಮನವಿ ಮಾಡಿದ್ದಾರೆ. ತಮ್ಮ ಇನ್ಸ್​ಟಾಗ್ರಾಮ್ ಹ್ಯಾಂಡಲ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು ಉಕ್ರೇನ್​​ನಿಂದ ಸ್ಥಳಾಂತರಗೊಂಡ ನಿರಾಶ್ರಿತರ ಬೆಂಬಲಕ್ಕೆ ನಿಲ್ಲಲು ಮನವಿ ಮಾಡಿದ್ದಾರೆ.

ಯುರೋಪ್‌ನಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಮಾನವೀಯತೆಯನ್ನು ಮತ್ತು ನಿರಾಶ್ರಿತರನ್ನು ಬೆಂಬಲಿಸಲು ಕೆಲಸ ಮಾಡುವವರ ಪರವಾಗಿ ವಿಶ್ವದ ನಾಯಕರು ನಿಲ್ಲಬೇಕಿದೆ. ಉಕ್ರೇನ್ ಮತ್ತು ಪ್ರಪಂಚದಾದ್ಯಂತ ಸ್ಥಳಾಂತರಗೊಂಡ ಜನರನ್ನು ರಕ್ಷಿಸಲು ವಿಶ್ವದ ನಾಯಕರು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಯುದ್ಧವನ್ನು ನಾವು ಸುಮ್ಮನೆ ನಿಂತು ನೋಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಮನವಿ ಮಾಡಿದ್ದಾರೆ.

ರಷ್ಯಾ ಸೇನೆಯು ಉಕ್ರೇನ್​ನಲ್ಲಿ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ನಾಗರಿಕರ ಸ್ಥಳಾಂತರಕ್ಕೆ ಬಳಸುತ್ತಿದ್ದ ರೈಲ್ವೆ ನಿಲ್ದಾಣದ ಮೇಲೂ ಶುಕ್ರವಾರ ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ಮಂದಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ರಷ್ಯಾ ಸೇನೆಯು ಜನರನ್ನು ಆತಂಕ, ಭಯಭೀತರನ್ನಾಗಿಸುತ್ತಿದೆ. ಹಲವಾರು ನಾಗರಿಕರನ್ನು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಒತ್ತೆ ಇಟ್ಟುಕೊಳ್ಳಲು ಬಯಸುತ್ತಿದೆ ಎಂದು ಉಕ್ರೇನ್ ದೂರುತ್ತಿದೆ. ಮತ್ತೊಂದೆಡೆ ಶಾಂತಿ ಮಾತುಕತೆಗಳೂ ನಡೆಯುತ್ತಿದ್ದು, ಯಾವುದೇ ಉಪಯೋಗವಾಗಿಲ್ಲ. ಈ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳಿಗೆ ತೆರಳಿರುವ ನಿರಾಶ್ರಿತರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಇವರ ಪರವಾಗಿ ಪ್ರಿಯಾಂಕಾ ಚೋಪ್ರಾ ದನಿಯೆತ್ತಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನ ರೈಲ್ವೆ ನಿಲ್ದಾಣದ ಮೇಲೆ ರಷ್ಯಾ ರಾಕೆಟ್ ದಾಳಿ: 30ಕ್ಕೂ ಹೆಚ್ಚು ಜನರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.