ETV Bharat / entertainment

ತನ್ನ 221 ಲಕ್ಷ ಬಳಕೆದಾರರಿಗೆ ‘ಸ್ಪೇಷಲ್​ ಆಡಿಯೋ’ ಪರಿಚಯಿಸಿದ ನೆಟ್​ಫ್ಲಿಕ್ಸ್

author img

By

Published : Jul 9, 2022, 7:32 AM IST

Updated : Jul 9, 2022, 8:01 AM IST

ನೆಟ್‌ಫ್ಲಿಕ್ಸ್ ತನ್ನ ಎಲ್ಲಾ ಸಾಧನಗಳಿಗೆ ‘ಸ್ಪೇಷಲ್​ ಆಡಿಯೋ’ವನ್ನು ತರುತ್ತಿದೆ ಎಂದು ಘೋಷಿಸಿದೆ. ಮಲ್ಟಿಚಾನಲ್ ಸ್ಪೀಕರ್‌ಗಳಿಲ್ಲದ ಬಳಕೆದಾರರಿಗೆ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಮಾತ್ರ ಸರೌಂಡ್ ಸೌಂಡ್ ಅನ್ನು ಅನುಭವಿಸಲು ಇದು ಅನುಮತಿಸುತ್ತದೆ.

ತನ್ನ 221 ಲಕ್ಷ ಬಳಕೆದಾರರಿಗೆ ಪ್ರಾದೇಶಿಕ ಆಡಿಯೋ ಪರಿಚಯಿಸಿದ ನೆಟ್​ಫ್ಲಿಕ್ಸ್

ನವದೆಹಲಿ: ನೆಟ್‌ಫ್ಲಿಕ್ಸ್ ಜರ್ಮನ್ ಆಡಿಯೋ ಬ್ರ್ಯಾಂಡ್ ಸೆನ್‌ಹೈಸರ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಪ್ರಪಂಚದಾದ್ಯಂತ ತನ್ನ ಲಕ್ಷಾಂತರ ಬಳಕೆದಾರರಿಗೆ ‘ಸ್ಪೇಷಲ್​ ಆಡಿಯೋ’ವನ್ನು ಪರಿಚಯಿಸಿದೆ. ಇದು ಸಿನಿಮೀಯ ಅನುಭವವನ್ನು ನೀಡುತ್ತಿದ್ದು, ಯಾವುದೇ ಸ್ಟಿರಿಯೋಗೆ ಭಾಷಾಂತರಿಸಲು ‘ಸ್ಪೇಷಲ್​ ಆಡಿಯೋ’ ಸಹಾಯ ಮಾಡುತ್ತದೆ ಎಂದು ನೆಟ್‌ಫ್ಲಿಕ್ಸ್ ಹೇಳಿದೆ.

‘ಸ್ಪೇಷಲ್​ ಆಡಿಯೋ’ ಎಂಬುದು 3D ಆಡಿಯೋ ತಂತ್ರಜ್ಞಾನವಾಗಿದೆ. ಅದು ಥಿಯೇಟರ್ ತರಹದ ಅನುಭವಕ್ಕಾಗಿ ಡೈನಾಮಿಕ್ ಹೆಡ್-ಟ್ರ್ಯಾಕಿಂಗ್ ಅನ್ನು ಬಳಸುವ ಮೂಲಕ ಹೆಚ್ಚು ತಲ್ಲೀನಗೊಳಿಸುವ ಸೌಂಡ್‌ಸ್ಕೇಪ್ ಅನ್ನು ರಚಿಸುತ್ತದೆ. ಗುರುವಾರದಿಂದ ‘ಸ್ಪೇಷಲ್​ ಆಡಿಯೋ’ವನ್ನು ನಮ್ಮ ಗ್ರಾಹಕರಿಗೆ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿದೆ.

ಓದಿ: 'ದ ಫೇಮ್ ಗೇಮ್'ನಲ್ಲಿ ಮಾಧುರಿ ದೀಕ್ಷಿತ್​: ಮೊದಲ ಬಾರಿಗೆ ಒಟಿಟಿ ಸಿರೀಸ್​​ನಲ್ಲಿ ಕಾಣಿಸಿಕೊಳ್ಳಲು ಇದೇ ಕಾರಣ..

ವಿಡಿಯೋ ಮತ್ತು ಆಡಿಯೋಗೆ ಈ ‘ಸ್ಪೇಷಲ್​ ಆಡಿಯೋ’ ಸಂಯೋಜನೆಯು ವೀಕ್ಷಕರನ್ನು ಕಥೆಯ ಹತ್ತಿರಕ್ಕೆ ಸೆಳೆಯುತ್ತದೆ. 4K, HDR, Dolby Atmos ಮತ್ತು Netflix ಕ್ಯಾಲಿಬ್ರೇಟೆಡ್ ಮೋಡ್‌ನಂತಹ ಇತರ ವೈಶಿಷ್ಟ್ಯಗಳಿಗೆ ಈ ಸಾಮರ್ಥ್ಯವನ್ನು ಸೇರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಈ ‘ಸ್ಪೇಷಲ್​ ಆಡಿಯೋ’ವನ್ನು ‘ಸ್ಟ್ರೇಂಜರ್ ಥಿಂಗ್ಸ್,’ ‘ದಿ ಆಡಮ್ ಪ್ರಾಜೆಕ್ಟ್,’ ‘ರೆಡ್ ನೋಟಿಸ್,’ ‘ದಿ ವಿಚರ್,’ ‘ಲಾಕ್ & ಕೀ’ನ ನಾಲ್ಕನೇ ಸೀಸನ್​ನಲ್ಲಿ ಕಾಣಬಹುದಾಗಿದೆ. ಡೈನಾಮಿಕ್ ಹೆಡ್ ಟ್ರ್ಯಾಕಿಂಗ್‌ನೊಂದಿಗೆ ‘ಸ್ಪೇಷಲ್​ ಆಡಿಯೋ’ವು ನೀವು ವೀಕ್ಷಿಸುತ್ತಿರುವ ಚಲನಚಿತ್ರ ಅಥವಾ ವಿಡಿಯೋದಿಂದ ಥಿಯೇಟರ್ ತರಹದ ಸೌಂಡ್​ನ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ.

Last Updated : Jul 9, 2022, 8:01 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.