ETV Bharat / entertainment

William Friedkin: ಆಸ್ಕರ್​ ಪ್ರಶಸ್ತಿ ವಿಜೇತ ಹಾಲಿವುಡ್​ ನಿರ್ದೇಶಕ ವಿಲಿಯಂ ಫ್ರೈಡ್ಕಿನ್ ನಿಧನ

author img

By

Published : Aug 8, 2023, 2:59 PM IST

ಆಸ್ಕರ್​ ಪ್ರಶಸ್ತಿ ವಿಜೇತ ಹಾಲಿವುಡ್​ ನಿರ್ದೇಶಕ ವಿಲಿಯಂ ಫ್ರೈಡ್ಕಿನ್ ಸೋಮವಾರ ನಿಧನರಾದರು.

William Friedkin
ವಿಲಿಯಂ ಫ್ರೀಡ್ಕಿನ್

ಹಾಲಿವುಡ್​ ನಿರ್ದೇಶಕ ವಿಲಿಯಂ ಫ್ರೈಡ್ಕಿನ್​ ಸೋಮವಾರ ಲಾಸ್​ ಏಂಜಲೀಸ್​ನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. 'ದಿ ಫ್ರೆಂಚ್​ ಕನೆಕ್ಷನ್'​ ಮತ್ತು 'ದಿ ಎಕ್ಸಾರ್ಸಿಸ್ಟ್​' ಚಿತ್ರಗಳಿಗಾಗಿ ಅವರು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿಲಿಯಂ ಫ್ರೈಡ್ಕಿನ್ ಅವರ ಪತ್ನಿ ಶೆರ್ರಿ ಲ್ಯಾನ್ಸಿಂಗ್​ ಅವರ ಆಪ್ತ ಸ್ನೇಹಿತ, ಚಾಪ್ಮನ್​ ವಿಶ್ಚವಿದ್ಯಾಲಯದ ಡೀನ್​ ಸ್ಟೀಫನ್​ ಗ್ಯಾಲೋವೆ ನಟನ ನಿಧನವನ್ನು ಧೃಢಪಡಿಸಿದ್ದಾರೆ.

ವಿಲಿಯಂ ಫ್ರೈಡ್ಕಿನ್ ನಿರ್ದೇಶನದ 'ದಿ ಕೇನ್​ ಮ್ಯೂಟಿನಿ ಕೋರ್ಟ್​ ಮಾರ್ಷಲ್​' ಚಿತ್ರದ ಪ್ರಥಮ ಪ್ರದರ್ಶನವನ್ನು ಆಯೋಜಿಸಲು ವೆನಿಸ್​ ಚಲನಚಿತ್ರೋದ್ಯಮ ನಿರ್ಧರಿಸಿದೆ. ಈ ಚಿತ್ರದಲ್ಲಿ ಕೀಫರ್​ ಸದರ್ಲ್ಯಾಂಡ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಫ್ರೈಡ್ಕಿನ್ ಅವರ ಕೊನೆಯ ಚಿತ್ರವಾಗಿದೆ.

ಆಸ್ಕರ್​ ವಿಜೇತ ವಿಲಿಯಂ ಫ್ರೈಡ್ಕಿನ್: ಫ್ರೈಡ್ಕಿನ್ ಅವರು 1970ರ ದಶಕದಲ್ಲಿ, ಯುವ ಮತ್ತು ಧೈರ್ಯಶಾಲಿ ನಿರ್ದೇಶಕರ ಗುಂಪಿನೊಂದಿಗೆ ಸೇರಿಕೊಂಡರು. ಹಾಲ್​ ಅಶ್ಬೈ, ಫ್ರಾನ್ಸಿಸ್​ ಫಾರ್ಡ್ ಕೊಪ್ಪೊಲಾ ಮತ್ತು ಪೀಟರ್​ ಬಾಗ್ಡಾನೋವಿಚ್​ ಅವರೊಂದಿಗೆ ಎ- ಪಟ್ಟಿಯಲ್ಲಿ ಖ್ಯಾತಿ ಗಳಿಸಿದರು. ಬಳಿಕ ಹಾರರ್​ ಮತ್ತು ಪೊಲೀಸ್​ ಥ್ರಿಲ್ಲರ್​ ಪ್ರಕಾರದ ಚಿತ್ರಗಳನ್ನು ತೆರೆಗೆ ತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ವಿಶೇಷವಾಗಿ ದೂರದರ್ಶನಕ್ಕೆ ಸಂಬಂಧಪಟ್ಟಂತೆ ಅತ್ಯಾಧುನಿಕ ಶೈಲಿಯನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: 'ವ್ಯಾನಿಶಿಂಗ್ ಪಾಯಿಂಟ್' ಖ್ಯಾತಿಯ ಹಾಲಿವುಡ್​ ಹಿರಿಯ ನಟ ಬ್ಯಾರಿ ನ್ಯೂಮನ್ ನಿಧನ

'ದಿ ಫ್ರೆಂಚ್​ ಕನೆಕ್ಷನ್'​ ಅನ್ನು ಸಾಕ್ಷ್ಯಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಾಯಿತು. ಇದು ಪ್ರಸಿದ್ಧವಾದ ಕಾರ್​ ಚೇಸ್​ ಸೀಕ್ವೆನ್ಸ್​ ಅನ್ನು ಒಳಗೊಂಡಿತ್ತು. ಈ ಚಿತ್ರವು ಅತ್ಯುತ್ತಮ ಚಿತ್ರ, ನಿರ್ದೇಶಕ ಮತ್ತು ನಟ ಸೇರಿದಂತೆ ಅನೇಕ ವಿಭಾಗಗಳಲ್ಲಿ ಆಸ್ಕರ್​ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಮೂಲಕ ಹಾಲಿವುಡ್​ನ ಖ್ಯಾತ ನಿರ್ದೇಶಕರ ಸಾಲಿನಲ್ಲಿ ವಿಲಿಯಂ ಫ್ರೈಡ್ಕಿನ್ ಸೇರಿಕೊಂಡರು.

'ದಿ ಫ್ರೆಂಚ್​ ಕನೆಕ್ಷನ್' ಚಿತ್ರ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ನಂತರ, 1973 ರಲ್ಲಿ ಬಿಡುಗಡೆಯಾದ 'ದಿ ಎಕ್ಸಾರ್ಸಿಸ್ಟ್​' ಚಿತ್ರ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 500 ಮಿಲಿಯನ್​ ಡಾಲರ್​ ಗಳಿಸಿತು. ದಿ ಗಾಡ್​ಫಾದರ್​ ಸಿನಿಮಾ ಜೊತೆ ಉತ್ತಮ ಸ್ಪರ್ಧೆಯನ್ನು ನೀಡಿತು. 'ದಿ ಫ್ರೆಂಚ್​ ಕನೆಕ್ಷನ್' ವಿಲಿಯಂ ಪೀಟರ್​ ಬ್ಲಾಟಿಯವರ ಪುಸ್ತಕವನ್ನು ಆಧರಿಸಿದ ಕಥೆಯಾಗಿದೆ. ಇದು ಒಂದು ಹಾರರ್​ ಚಿತ್ರ. ಒಂದು ಚಿಕ್ಕ ಹುಡುಗಿಗೆ ದೆವ್ವ ಹಿಡಿಯುವ ಬಗ್ಗೆ ಭಯಾನಕವಾಗಿ ತೋರಿಸಲಾಗಿದೆ.

'ದಿ ಫ್ರೆಂಚ್​ ಕನೆಕ್ಷನ್' ಚಿತ್ರಕ್ಕಾಗಿ ಎರಡನೇ ಬಾರಿಗೆ ಅವರು ಪ್ರತಿಷ್ಠಿತ ಆಸ್ಕರ್​ನ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಫ್ರೈಡ್ಕಿನ್ ಸುಮಾರು 2,000 ಕ್ಕೂ ಹೆಚ್ಚು ದೂರದರ್ಶನ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ದಿ ಪೀಪಲ್​ ವರ್ಸ್​ಸ್​ ಪಾಲ್​ ಕ್ರಂಪ್​ ಕೂಡ ಸೇರಿದೆ.

ಇದನ್ನೂ ಓದಿ: 'ಬ್ರೇಕಿಂಗ್​ ಬ್ಯಾಡ್' ಖ್ಯಾತಿಯ​ ಹಾಲಿವುಡ್​ ನಟ ಮಾರ್ಕ್​ ಮಾರ್ಗೋಲಿಸ್​ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.