ETV Bharat / elections

ಕೋಟಿ ಕೊಡ್ತೀನಿ, ಪ್ರಜ್ವಲ್‌ನ ಸಿಎಂ ಗಡಿಗೆ ಕಳುಹಿಸಲಿ: ಚಕ್ರವರ್ತಿ ಸೂಲಿಬೆಲೆ

author img

By

Published : Apr 12, 2019, 11:03 PM IST

ಹೊಟ್ಟೆಗೆ ತಿನ್ನಲು ಇಲ್ಲದವರು ಸೈನ್ಯಕ್ಕೆ ಹೋಗುತ್ತಾರೆ ಎಂಬ ಸಿಎಂ ಹೇಳಿಕೆಗೆ ಪರೋಕ್ಷವಾಗಿ ಚಕ್ರವರ್ತಿ ಸೂಲಿಬೆಲೆ ಟಾಂಗ್ ಕೊಟ್ಟರು.

ಚಕ್ರವರ್ತಿ ಸೂಲಿಬೆಲೆ

ಹಾಸನ: ಪ್ರಜ್ವಲ್‌ಗೆ ನಾನು ಒಂದು ಕೋಟಿ ರೂಪಾಯಿ ಕೊಡ್ತೀನಿ. ಅವರನ್ನು ಗಡಿಗೆ ಕಳುಹಿಸುವ ತಾಕತ್ತು ಸಿಎಂ ಅವರಿಗೆ ಇದೆಯೇ? ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಟ್ಟೆಗೆ ತಿನ್ನಲು ಅನ್ನ ಇಲ್ಲದವರು ಸೇನೆಗೆ ಸೇರುತ್ತಾರೆಂದು ಕೆಲವರು ಹೇಳುತ್ತಾರೆ. ಒಂದು ಕೋಟಿ ರೂ ಕೊಡ್ತೀನಿ ಪ್ರಜ್ವಲ್‌ರನ್ನು ಗಡಿಗೆ ಕಳುಹಿಸುವ ತಾಕತ್ತು ಇದೆಯಾ ಇವರಿಗೆ. ಸೈನ್ಯಕ್ಕೆ‌ ಹೊಟ್ಟೆಗೆ ಇಲ್ಲದೆ ಸೇರಿದ್ದಾರೆಯೇ ಅಥವಾ ಎದೆಯೊಳಗೆ ಧಗಧಗಿಸುವ ದೇಶ ಪ್ರೇಮ ಇರುವುದಕ್ಕೆ ಸೇರಿದ್ದಾರೆಯೇ ಎಂದು ಅವರನ್ನೇ ಕೇಳಬೇಕು ಎಂದು ಟಾಂಗ್ ಕೊಟ್ಟರು.

ಚಕ್ರವರ್ತಿ ಸೂಲಿಬೆಲೆ

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಈ ಮೂರು ಭಾರತದ ಆಧಾರ ಸ್ತಂಭಗಳು. ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಅವರನ್ನು ಮತ್ತೊಮ್ಮೆ‌ ಅಧಿಕಾರಕ್ಕೆ ತರಬೇಕು ಎಂದು ಅವರು ಕರೆ ನೀಡಿದರು.

ಮೋದಿ ಅಧಿಕಾರಕ್ಕೆ ಬರುವ ಮುಂಚೆ ನಮ್ಮ ದೇಶದ ಮೇಲೆ ಪಾಕಿಸ್ತಾನ ದಾಳಿ ಮಾಡಿದರೂ ನಾವು ಪ್ರತಿ ದಾಳಿ ಮಾಡುವಂತಿರಲಿಲ್ಲ. ನಾವು ಶಾಂತಿಪ್ರಿಯರು. ಮೇಲಿನವರ ಆದೇಶಕ್ಕೆ ಕಾಯಬೇಕು ಎಂಬ ಪರಿಸ್ಥಿತಿ ಇತ್ತು. ಆದರೆ ಇಂದಿನ ಕೇಂದ್ರ ಸರ್ಕಾರದ ಆಡಳಿದಲ್ಲಿ ಪಾಕ್ ಕಡೆಯಿಂದ ಒಂದು ಗುಂಡು ಹಾರಿಲ್ಲ ಎಂದರು.

Intro:ಕೋಟಿ ಕೊಡ್ತಿನಿ ಪ್ರಜ್ವಲ್ ಗಡಿಗೆ ಕಳುಹಿಸಲಿ: ಚಕ್ರವರ್ತಿ ಸೂಲಿಬೆಲೆ

ಹಾಸನ/ಆಲೂರು: ಪ್ರಜ್ವಲ್‌ಗೆ ನಾನು ಒಂದು ಕೋಟಿ ಕೊಡ್ತಿನಿ ಸಿಎಂ ಕುಮಾರಸ್ವಾಮಿ ಅವರು
ಅವರನ್ನು ಗಡಿಗೆ ಕಳಿಸುವ ತಾಕತ್ತಿದೆಯೇ
ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಟ್ಟೆಗೆ ತಿನ್ನಲು ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಕೆಲವರು ಹೇಳುತ್ತಾರೆ. ಸೈನ್ಯಕ್ಕೆ‌ ಹೊಟ್ಟೆಗೆ ಇಲ್ಲದೆ ಸೇರಿದ್ದಾರೆಯೋ ಅಥವಾ ಎದೆಯೊಳಗೆ ಧಗಧಗಿಸುವ ದೇಶಪ್ರೇಮಕ್ಕೆ ಸೇರಿದ್ದಾರೆಯೋ ಅವರನ್ನೇ ಕೇಳಬೇಕು ಎಂದು ಟಾಂಗ್ ನೀಡಿದರು.
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಈ ಮೂರು ಭಾರತದ ಆಧಾರ ಸ್ತಂಭಗಳು. ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮೋದಿ ಅವರನ್ನು ಮತ್ತೊಮ್ಮೆ‌
ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು. ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ ನಮ್ಮ ದೇಶದ ಮೇಲೆ ಪಾಕಿಸ್ತಾನ ದಾಳಿ ಮಾಡಿದರೂ ನಾವು ಪ್ರತಿ ದಾಳಿ ಮಾಡುವಂತಿರಲಿಲ್ಲ.ನಾವು ಶಾಂತಿ ಪ್ರಿಯರು. ಮೇಲಿನವರ ಆದೇಶಕ್ಕೆ ಕಾಯಬೇಕು ಎಂಬ ಪರಿಸ್ಥಿತಿ ಇತ್ತು.ಆದರೆ ಇಂದಿನ ಕೇಂದ್ರ ಸರ್ಕಾರದಲ್ಲಿ ಪಾಕ್ ಕಡೆಯಿಂದ ಒಂದು ಗುಂಡೂ ಹಾರಿಲ್ಲ ಎಂದರು.

- ಕೆ.ಸಿ.ಮಣಿಕಂಠ,ಈಟಿವಿ ಭಾರತ, ಹಾಸನ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.