ETV Bharat / elections

ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಬಿಜೆಪಿಯವರು ಬುರ್ಕಾ ಹಾಕಿಕೊಳ್ಳಲಿ: ಜಮೀರ್​

author img

By

Published : Apr 20, 2019, 6:42 PM IST

5 ವರ್ಷದ ಆಡಳಿತದಲ್ಲಿ ಮೋದಿ ಕೆಲಸ ಶೂನ್ಯ, ಶಿವಕುಮಾರ್ ಉದಾಸಿ ನರೇಂದ್ರ ಮೋದಿ ಮುಖ ನೋಡಿ ಮತ ಹಾಕಿ ಅಂತಿದ್ದಾರೆ. ಅವರಿಗೆ ಬುರ್ಕಾ ಕೊಡಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ.

ಸಚಿವ ಜಮೀರ್ ಅಹ್ಮದ್

ಹಾವೇರಿ: ಬಿಜೆಪಿಯವರು ನರೇಂದ್ರ ಮೋದಿ ಮುಖ ನೋಡಿ ವೋಟು ಹಾಕಿ ಎನ್ನುವ ಬಿಜೆಪಿಯವರು ಬುರ್ಕಾ ಹಾಕಿಕೊಂಡು ಮೋದಿಗೆ ಮತ ಹಾಕಿ ಎನ್ನಲಿ ಎಂದು ಸಚಿವ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿದ ಜಮೀರ್ ಅಹ್ಮದ್, 5 ವರ್ಷದ ಆಡಳಿತದಲ್ಲಿ ಮೋದಿ ಕೆಲಸ ಶೂನ್ಯ, ಸ್ಥಳೀಯ ಸಂಸದ ಶಿವಕುಮಾರ್ ಉದಾಸಿ ನರೇಂದ್ರ ಮೋದಿ ಮುಖ ನೋಡಿ ಮತ ಹಾಕಿ ಅಂತಿದ್ದಾರೆ. ಅವರಿಗೆ ಬುರ್ಕಾ ಕೊಡಿಸುತ್ತೇನೆ. ಅದನ್ನ ಹಾಕಿಕೊಂಡು ಮೋದಿಗೆ ಮತ ಹಾಕಿ ಎಂದು ಕೇಳಲಿ ಎಂದು ಲೇವಡಿ ಮಾಡಿದರು.

ಸಚಿವ ಜಮೀರ್ ಅಹ್ಮದ್

ಇದೇ ಸಂದರ್ಭದಲ್ಲಿ ಸಲೀಂ ಅಹ್ಮದ್ ಮತ್ತು ನಾನು ಸಹೋದರರಿದ್ದಂತೆ. ಸಲೀಂ ಅಹ್ಮದ್ ಬದಲು ಡಿ.ಆರ್.ಪಾಟೀಲ್‌ಗೆ ಹಾವೇರಿ ಲೋಕಸಭೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಡಿ.ಆರ್.ಪಾಟೀಲ್ ಬೇರೆ ಅಲ್ಲ ನಾನು ಬೇರೆ ಅಲ್ಲ. ಡಿ.ಆರ್.ಪಾಟೀಲ್​ಗೆ ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ್ ಸೇರಿದಂತೆ ಕಾಂಗ್ರೆಸ್‌ಸನ ಮುಖಂಡರು ಉಪಸ್ಥಿತರಿದ್ದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.