ETV Bharat / crime

ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಇದೆಲ್ಲ ಕೊರೊನಾ ಮುಕ್ತಿಗಾಗಿ ಎಂದ ಕಿಲ್ಲರ್‌ ವೈದ್ಯ..!

author img

By

Published : Dec 4, 2021, 5:39 PM IST

ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯರೊಬ್ಬರು ಸುತ್ತಿಗೆಯಿಂದ ಹೊಡೆದು ಪತ್ನಿಯನ್ನು ಕೊಂದ ಬಳಿಕ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದೆಲ್ಲಾ ಕೊರೊನಾದಿಂದ ಮುಕ್ತಿಗಾಗಿ ಎಂದು ಆರೋಪಿ ವೈದ್ಯ ಪತ್ರ ಬರೆದಿದ್ದಾನೆ.

uttarpradesh man kills three of his family members amidst covid fears
ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಇದೆಲ್ಲಾ ಕೊರೊನಾ ಮುಕ್ತಿಗಾಗಿ ಎಂದ ಕಿಲ್ಲರ್‌ ವೈದ್ಯ..!

ಕಾನ್ಪುರ್‌(ಉತ್ತರ ಪ್ರದೇಶ): ಕೋವಿಡ್‌ ಹೊಸ ರೂಪಾಂತರಿ ಒಮಿಕ್ರಾನ್‌ ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಬೆನ್ನಲ್ಲೇ ವೈರಸ್‌ ವಿರುದ್ಧ ಹೋರಾಟ ನಡೆಸ ಬೇಕಿದ್ದ ವೈದ್ಯನೇ ಖಿನ್ನತೆಗೆ ಒಳಗಾಗಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾನೆ.

ಉತ್ತರ ಪ್ರದೇಶ ಕಾನ್ಪುರದಲ್ಲಿ ಈ ಭೀಕರ ಘಟನೆ ನಡೆದಿದ್ದು, ಕೋವಿಡ್‌ನಿಂದ ಮುಕ್ತಿಗಾಗಿ ಹೀಗೆ ಮಾಡಿರುವುದಾಗಿ ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ. ಚಂದ್ರಪ್ರಭಾ (48), ಶಿಖರ್ ಸಿಂಗ್ (18) ಮತ್ತು ಇನ್ನೊಬ್ಬ ಪುತ್ರಿ ಖುಷಿ ಸಿಂಗ್ ಮೃತ ದುರ್ದೈವಿಗಳು.

uttarpradesh man kills three of his family members amidst covid fears
ಮೃತ ಪತ್ನಿಯೊಂದಿಗೆ ಆರೋಪಿ ವೈದ್ಯ ಸುಶೀಲ್‌ ಕುಮಾರ್‌

ಕೋವಿಡ್‌ನ ಎಲ್ಲ ಕಷ್ಟಗಳಿಂದ ಮುಕ್ತರಾಗಲು ಪತ್ನಿ, ಮಕ್ಕಳನ್ನು ಹತ್ಯೆ ಮಾಡಿರುವುದಾಗಿ ಆರೋಪಿ ವೈದ್ಯ ಸುಶೀಲ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಕಲ್ಯಾಣಪುರದ ಸ್ವಂತ ಅಪಾರ್ಟ್‌ಮೆಂಟ್‌ನಲ್ಲಿ ಈ ಕೃತ್ಯವೆಸಗಿದ್ದಾರೆ.

ಹತ್ಯೆಯ ಹಿಂದಿನ ಉದ್ದೇಶದ ವಿವರವನ್ನು ಪತ್ರದ ಮೂಲಕ ಹಂಚಿಕೊಂಡಿರುವ ಆರೋಪಿ, ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾನೆ. ಮಹಾಮಾರಿ ಕೊರೊನಾ ಯಾರನ್ನೂ ಬಿಡುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಘಟನೆ ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ತನ್ನ ಸಹೋದರ ಸುನೀಲ್‌ಗೆ ಮೆಸೇಜ್‌ ಮಾಡಿದ್ದಾರೆ. ಇದರೊಂದಿಗೆ ತಕ್ಷಣವೇ ಅಪಾರ್ಟ್‌ಮೆಂಟ್‌ಗೆ ಹೋಗಿ ನೋಡಿದಾಗ ಹೊರಗಿನಿಂದ ಬೀಗ ಹಾಕಲಾಗಿತ್ತು. ಭದ್ರತಾ ಸಿಬ್ಬಂದಿಯ ನೆರವಿನಿಂದ ಪೊಲೀಸರು ಬೀಗ ಒಡೆದು ಅಪಾರ್ಟ್‌ಮೆಂಟ್‌ ಒಳಗೆ ಪ್ರವೇಶಿಸಿದಾಗ ಪತ್ನಿ, ಪುತ್ರ ಹಾಗೂ ಪುತ್ರಿ ಪ್ರತ್ಯೇಕ ಕೊಠಡಿಗಳಲ್ಲಿ ರಸ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.

ಚಂದ್ರಪ್ರಭಾ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದರೆ, ಶಿಖರ್ ಮತ್ತು ಖುಷಿ ಕತ್ತು ಹಿಸುಕಿದ್ದಾರೆ. ಇವರೆಲ್ಲರಿಗೂ ಚಹಾದಲ್ಲಿ ಮತ್ತು ಬರುವ ಔಷಧ ನೀಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ನಂತರ ಹತ್ಯೆ ಮಾಡಲಾಗಿದೆ. ಆರೋಪಿ ಸುಶೀಲ್ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ರ‍್ಯಾಲಿಗೆ ತೆರಳುತ್ತಿದ್ದ ಬಸ್​​ ಡಿಕ್ಕಿ.. ಒಂದೇ ಕುಟುಂಬದ ಮೂವರು ದುರ್ಮರಣ, ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.