ETV Bharat / crime

ಕೊಲೆಯಾಗಿದ್ದ ಮಹಿಳೆ ಜೀವಂತ ಪತ್ತೆ.. 10 ವರ್ಷ ಶಿಕ್ಷೆಗೊಳಗಾಗಿದ್ದ ಪತಿ ಈಗ ನಿಟ್ಟುಸಿರು!

author img

By

Published : Aug 1, 2022, 9:59 AM IST

ಕೆಳ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ಕಂಧಾಯ್​ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಆರು ತಿಂಗಳ ಜೈಲು ವಾಸದ ಬಳಿಕ ಜಾಮೀನು ಪಡೆದುಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ)ಅಶೋಕ್ ಕುಮಾರ್  ಮಾಹಿತಿ ನೀಡಿದ್ದಾರೆ.

UP woman 'murdered' by husband, now found alive
ಕೊಲೆಯಾಗಿದ್ದ ಮಹಿಳೆ ಜೀವಂತ ಪತ್ತೆ

ಬಹ್ರೈಚ್(ಉತ್ತರಪ್ರದೇಶ) : ಉತ್ತರಪ್ರದೇಶದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಕೊಲೆಯಾಗಿದ್ದರು. ಈ ಸಂಬಂಧ ಮಹಿಳೆಯ ಪತಿಗೆ 10 ವರ್ಷಗಳ ಶಿಕ್ಷೆಯೂ ಆಗಿತ್ತು. ಆದರೆ ಕೊಲೆಗೀಡಾದ ಮಹಿಳೆ ಈಗ ಅವರ ಸಹೋದರಿ ಮನೆಯಲ್ಲಿ ಪತ್ತೆಯಾಗಿದ್ದು, ನೋಡಿದವರು ಬೆಚ್ಚಿಬೀಳುವಂತಾಗಿದೆ.

ಏನಿದು ಪ್ರಕರಣ?: ಜಮಾಪುರ ಗ್ರಾಮದ ನಿವಾಸಿ ಕಂಧಾಯ್ ಅವರು 2006 ರಲ್ಲಿ ರಾಮಾವತಿ ಅವರನ್ನು ವಿವಾಹವಾಗಿದ್ದರು. ಆದರೆ, 2009ರಲ್ಲಿ ರಾಮಾವತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿ ಕಂಧಾಯ್​​ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ 2017 ರಲ್ಲಿ ಕಂಧಾಯ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು.

ಕೆಳ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ಕಂಧಾಯ್,​ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಆರು ತಿಂಗಳ ಜೈಲು ವಾಸದ ಬಳಿಕ ಜಾಮೀನು ಪಡೆದುಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ)ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ನಡುವೆ ಕೊಲೆಯಾಗಿದ್ದಾರೆ ಎಂದು ನಂಬಲಾಗಿದ್ದ ರಮಾವತಿ, ಸೋದರ ಮಾವನ ಮನೆಯಲ್ಲಿ ಕಂಡು ಬಂದಿದ್ದಾರೆ. ರಮಾವತಿ ಅವರನ್ನು ಕಂಡ ಸಂಬಂಧಿಯೊಬ್ಬರು ಪತಿ ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಈ ನಡುವೆ ಎಸ್‌ಎಚ್‌ಒ ರಾಮಗಾಂವ್ ಸಂಜಯ್ ಸಿಂಗ್ ನೇತೃತ್ವದ ಪೊಲೀಸ್ ತಂಡವು ರಾಮಾವತಿ ಇದ್ದ ಮಹಿಳಾ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ರಮಾವತಿ ಅವರನ್ನು ಒನ್ ಸ್ಟಾಪ್ ಸೆಂಟರ್‌ಗೆ ಕರೆದೊಯ್ದಿದ್ದರು.

ಇಂದು ರಾಮಾವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನ ಪಡೆಯುತ್ತೇವೆ ಎಂದು ಎಎಸ್ಪಿ ಕುಮಾರ್ ಹೇಳಿದ್ದಾರೆ.

ಇದನ್ನು ಓದಿ:ಪತ್ರಾ ಚಾಲ್' ಭೂ ಹಗರಣ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವುತ್ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.