ETV Bharat / crime

ಅಕ್ರಮ ಹಣ ವರ್ಗಾವಣೆ: ಚೀನಾ ಪ್ರಜೆ ಅರೆಸ್ಟ್​

author img

By

Published : Jan 28, 2021, 2:18 PM IST

ಅಪರಾಧ ಚಟುವಟಿಕೆಗಳಿಗೆ ಬಳಸುವುದಕ್ಕಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದ ಚೀನಾ ಪ್ರಜೆ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

UP ATS arrests Chinese national for illegal' transfer of funds
ಚೀನಾ ಪ್ರಜೆ ಅರೆಸ್ಟ್​

ಲಖನೌ: ಆನ್‌ಲೈನ್ ಬ್ಯಾಂಕ್ ಖಾತೆಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಚೀನಾದ ಪ್ರಜೆಯನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಬಂಧಿಸಿದೆ.

ಬಂಧಿತನನ್ನು ಸುನ್ ಜಿ ಯಿಂಗ್ ಅಲಿಯಾಸ್ ಡೇವಿಡ್ ಎಂದು ಗುರುತಿಸಲಾಗಿದೆ. ಈತ ನಕಲಿ ಗುರುತಿನ ದಾಖಲೆಗಳನ್ನು ನೀಡಿ ಪಡೆದ ಸಿಮ್ ಕಾರ್ಡ್‌ಗಳ ಆಧಾರದ ಮೇಲೆ ಆನ್‌ಲೈನ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದನು. ಇದರ ಮೂಲಕ ಅಕ್ರಮವಾಗಿ ಹಣ ವರ್ಗಾಯಿಸುತ್ತಿದ್ದನು.

ಇದನ್ನೂ ಓದಿ: ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಐಪಿಎಸ್​ ಅಧಿಕಾರಿ ಶರಣಾಗತಿ

ಅಪರಾಧ ಚಟುವಟಿಕೆಗಳಿಗೆ ಬಳಸುವುದಕ್ಕಾಗಿ ಹೀಗೆ ಹಣ ವರ್ಗಾವಣೆ ಮಾಡುತ್ತಿದ್ದ 14 ಮಂದಿ ಭಾರತೀಯರು ಮತ್ತು ಇಬ್ಬರು ಚೀನಾ ಪ್ರಜೆಗಳನ್ನು ಈ ಹಿಂದೆ ಎಟಿಎಸ್ ಬಂಧಿಸಿತ್ತು. ವಿಚಾರಣೆ ವೇಳೆ ಈ ಗ್ಯಾಂಗ್​ನಲ್ಲಿದ್ದ ಚೀನಾ ಪ್ರಜೆಗಳು ನೀಡಿದ ಮಾಹಿತಿ ಮೇಲೆ ಯುಪಿ ಪೊಲೀಸರು ಸುನ್ ಜಿ ಯಿಂಗ್​ನನ್ನು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.