ETV Bharat / crime

ಇಬ್ಬರು ಮಕ್ಕಳ ಅಪಹರಿಸಿ ಕೊಲೆ... ಮೊದಲ ಹೆಂಡತಿ, ಪುತ್ರರಿಂದ ಕೃತ್ಯ

author img

By

Published : Mar 26, 2021, 11:08 AM IST

ಆಸ್ತಿ ವಿವಾದ ಹಿನ್ನೆಲೆ ಮೊದಲ ಹೆಂಡತಿ, ಮತ್ತವರ ಪುತ್ರರು ಸೇರಿ 2ನೇ ಪತ್ನಿಯ ಇಬ್ಬರ ಮಕ್ಕಳನ್ನು ಹತ್ಯೆಗೈದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

Double Murder
ಇಬ್ಬರು ಮಕ್ಕಳ ಅಪಹರಿಸಿ ಕೊಲೆ

ಪಾಟ್ನಾ (ಬಿಹಾರ): ಮೂರು ದಿನಗಳ ಹಿಂದೆ ಕಿಡ್ನ್ಯಾಪ್​ ಆಗಿದ್ದ ಇಬ್ಬರು ಮಕ್ಕಳು ಇದೀಗ ನದಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬಿಹಾರದ ಪಾಟ್ನಾದ ಮಖ್ದಂಪುರ್ ಎಂಬ ಗ್ರಾಮದಿಂದ ಅನೀಶ್ ಕುಮಾರ್ ಮತ್ತು ಶಿವಂ ಕುಮಾರ್​ ಎಂಬ ಮಕ್ಕಳು ಕಾಣೆಯಾಗಿದ್ದರು. ವಿನೋದ್​ ಕುಮಾರ್ ಎಂಬ ವ್ಯಕ್ತಿ ಎರಡು ಮದುವೆಯಾಗಿದ್ದು, ಈ ಮಕ್ಕಳು ಎರಡನೇ ಹೆಂಡತಿಯ ಮಕ್ಕಳಾಗಿದ್ದಾರೆ. ಆಸ್ತಿ ವಿವಾದ ಹಿನ್ನೆಲೆ ಮೊದಲ ಹೆಂಡತಿ ಸುನೀತಾ ದೇವಿ ಹಾಗೂ ಅವರ ಪುತ್ರರಾದ ಸೌರಭ್ ಕುಮಾರ್, ಗುಲ್ಶನ್ ಕುಮಾರ್ ಸೇರಿಕೊಂಡು ಮಕ್ಕಳನ್ನು ಅಪಹರಿಸಿ, ಕೊಲೆ ಮಾಡಿ ಬಳಿಕ ಮೃತದೇಹಗಳನ್ನು ನದಿಯಲ್ಲಿ ಎಸೆದಿದ್ದಾರೆ.

ಇದನ್ನೂ ಓದಿ: ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವ ಮೂಲಕ ಮುಕ್ತವಾಗಿ ಮಾತನಾಡುವುದಕ್ಕೆ ತಡೆ ಹಾಕಲು ಸಾಧ್ಯವಿಲ್ಲ: ಸುಪ್ರೀಂ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂವರೂ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.