ETV Bharat / crime

ಯುವತಿ ಮೇಲೆ ಅತ್ಯಾಚಾರ ಯತ್ನಿಸಿ ವಿಫಲಗೊಂಡಾಗ ಬೆಂಕಿ ಹಚ್ಚಿ ಪರಾರಿ...ವಿಡಿಯೋ ವೈರಲ್​

author img

By

Published : Sep 10, 2022, 10:35 PM IST

Updated : Sep 10, 2022, 11:06 PM IST

ಉತ್ತರಪ್ರದೇಶದಲ್ಲಿ ಮತ್ತೊಂದು ನೀಚ ಕೃತ್ಯ ಬೆಳಕಿಗೆ ಬಂದಿದೆ. ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧಿಸಿದ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಚ್ಚೆತ್ತ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

teenager-burnt-alive-after-failing-i
ಯುವತಿ ಮೇಲೆ ಅತ್ಯಾಚಾರ ಯತ್ನ

ಪಿಲಿಭಿತ್(ಉತ್ತರಪ್ರದೇಶ): ಹದಿಹರೆಯದ ಯುವತಿ ಮೇಲೆ ಅತ್ಯಾಚಾರ ಮಾಡುವ ಯತ್ನ ಪಿಲಿಭಿತ್​ನಲ್ಲಿ ನಡೆದಿದೆ. ಆದರೆ ಅತ್ಯಾಚಾರ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳು ಯುವತಿಯನ್ನು ಸಜೀವ ದಹನ ಮಾಡಿರುವ ಪ್ರಕರಣ ಫಿಲಿಭಿತ್​ ಜಿಲ್ಲೆಯ ಮಾಧೋತ್ತಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಘಟನೆ ನಡೆದ ಮೂರು ದಿನಗಳ ನಂತರ ಪ್ರಕರಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಿಂದ ಎಚ್ಚೆತ್ತ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ತರಾತುರಿಯಲ್ಲಿ ಎಲ್ಲ ಪೊಲೀಸ್​ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ಸೆಪ್ಟೆಂಬರ್ 7 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಯುವತಿ ಮನೆಯಲ್ಲಿ ಒಂಟಿಯಾಗಿದ್ದಾಗ ನುಗ್ಗಿದ ದುಷ್ಟರು ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಯುವತಿ ಪ್ರತಿರೋಧ ತೋರಿದ್ದರಿಂದ ಕೋಪಗೊಂಡು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಕಂಡ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ ರಾಜವೀರ್ ಎಂಬಾತ ಮನೆಗೆ ನುಗ್ಗಿ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ. ಅತ್ಯಾಚಾರಕ್ಕೆ ವಿರೋಧಿಸಿದಾಗ ಆರೋಪಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದನ್ನು ಕಂಡ ಸಂಬಂಧಿಕರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.

ಇದನ್ನು ಓದಿ:11ನೇ ಮಹಡಿಯಿಂದ ಜಿಗಿದ ಸಹೋದರಿಯರು.. ಒಬ್ಬಳ ದುರ್ಮರಣ ಇನ್ನೊಬ್ಬಳ ಸ್ಥಿತಿ ಗಂಭೀರ

Last Updated : Sep 10, 2022, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.