ETV Bharat / crime

ರಕ್ತಚಂದನ ತುಂಬಿದ ಟಾಟಾ ಏಸ್ ಸಮೇತ ಪರಾರಿಯಾಗಿದ್ದ ಇಬ್ಬರು ಹೆಡ್‌ಕಾನ್‌ಸ್ಟೇಬಲ್‌ಗಳು ಸಸ್ಪೆಂಡ್

author img

By

Published : Jan 13, 2022, 2:21 AM IST

ರಕ್ತ ಚಂದನ ತುಂಬಿದ್ದ ಟಾಟಾ ಏಸ್‌ ವಾಹನದೊಂದಿಗೆ ಪರಾರಿಯಾಗಿದ್ದ ಪ್ರಕರಣದಲ್ಲಿ ಇಬ್ಬರು ಹೆಡ್‌ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.

red sandalwood theft by two constable in bangalore suspended
ರಕ್ತಚಂದನ ತುಂಬಿದ ಟಾಟಾ ಏಸ್ ವಾಹನ ಸಮೇತ ಪರಾರಿ; ಇಬ್ಬರು ಹೆಡ್‌ಕಾನ್‌ಸ್ಟೇಬಲ್‌ಗಳು ಸಸ್ಪೆಂಡ್

ಬೆಂಗಳೂರು: ರಕ್ತಚಂದನ ತುಂಬಿದ ಟಾಟಾ ಏಸ್ ವಾಹನ ಸಮೇತ ಪರಾರಿಯಾಗಿದ್ದ ಇಬ್ಬರು ಹೆಡ್‌ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಗಿರಿನಗರ ಠಾಣೆ ಹೆಡ್‌ಕಾನ್‌ಸ್ಟೇಬಲ್ ಮೋಹನ್, ಮಹಾದೇವಪುರ ಠಾಣೆ ಹೆಡ್‌ಕಾನ್‌ಸ್ಟೇಬಲ್ ಮಮತೇಶ್ ಅಮಾನತುಗೊಂಡವರು.

2018ರಿಂದ ನಗರದ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರನ್ನೂ ಇತ್ತೀಚೆಗೆ ಗಿರಿನಗರ ಹಾಗೂ ಮಹಾದೇವಪುರ ಪೊಲೀಸ್ ಠಾಣೆಗೆ ವಗಾವಣೆ ಮಾಡಲಾಗಿತ್ತು. ಈ ಹಿಂದೆ ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಕ್ತ ಚಂದನ ಸ್ಮಗ್ಲಿಂಗ್ ಅಡ್ಡೆಗಳು ಹಾಗೂ ಸ್ಮಗ್ಲರ್‌ಗಳ ಬಗ್ಗೆ ಇವರಿಗೆ ಮಾಹಿತಿ ಇತ್ತು. ಸಿಸಿಬಿ ಪೊಲೀಸರು ಈ ಹಿಂದೆ ರಕ್ತಚಂದನ ಅಡ್ಡೆಗಳ ಮೇಲೆ ದಾಳಿ ನಡೆಸಿದಾಗ ಇವರೂ ಭಾಗವಹಿಸಿದ್ದರು. 2021 ಡಿಸೆಂಬರ್ 15ರಂದು ಇಬ್ಬರೂ ಕಾರಿನಲ್ಲಿ ಹೊಸಕೋಟೆಯ ಸಂತೆ ಸರ್ಕಲ್ ಬಳಿ ಚಿಂತಾಮಣಿಯಿಂದ ಬರುತ್ತಿದ್ದ ರಕ್ತಚಂದನ ತುಂಬಿದ್ದ ಟಾಟಾ ಏಸ್ ವಾಹನವನ್ನು ಪೊಲೀಸರ ಸೋಗಿನಲ್ಲಿ ತಡೆದಿದ್ದರು. ಟಾಟಾ ಏಸ್ ಚಾಲಕನಿಗೆ ಹಲ್ಲೆ ಮಾಡಿ ಆತನ ಕೈಗೆ ಕಪ್ಸ್ ಹಾಕಿ ರಕ್ತಚಂದನದ ಲೋಡ್ ಸಮೇತ ಪರಾರಿಯಾಗಿದ್ದರು.

ಈ ಸಂಬಂಧ ಡಿ.20ರಂದು ಸ್ಥಳೀಯರು ಹೊಸಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಸಲಿಗೆ ಹೊಸಕೋಟೆ ಪೊಲೀಸರು ಯಾವುದೇ ದಾಳಿ ಮಾಡಿರಲಿಲ್ಲ. ಸ್ಥಳೀಯರು ಕೊಟ್ಟ ಮಾಹಿತಿ ಆಧಾರಿಸಿ ಟಾಟಾ ಏಸ್ ವಾಹನದ ಸಂಖ್ಯೆ ಹಾಗೂ ಸ್ಥಳೀಯ ಸಿಸಿಕ್ಯಾಮರಾ ಪರಿಶೀಲಿಸಿದಾಗ ಪ್ರಕರಣದಲ್ಲಿ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳ ಪಾತ್ರ ಇರುವುದು ಪತ್ತೆಯಾಗಿತ್ತು. ಬೆಂಗಳೂರು ಗ್ರಾಮಾಂತರ ಎಸ್.ಪಿ ವಂಶಿಕೃಷ್ಣ, ಕೇಂದ್ರವಲಯ ಐಜಿಪಿ ಚಂದ್ರಶೇಖರ್‌ಗೆ ಈ ಕುರಿತು ವಿಸ್ತೃತ ವರದಿ ನೀಡಿದ್ದರು.

ಹೆಡ್‌ಕಾನ್‌ಸ್ಟೇಬಲ್‌ಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಐಜಿಪಿ ಚಂದ್ರಶೇಖರ್ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಮಾಹಿತಿ ನೀಡಿದ್ದರು. ಇದೀಗ ಕಮಲ್ ಪಂತ್ ಇಬ್ಬರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮಾಡೆಲಿಂಗ್ ಆಸೆ ತೋರಿಸಿ ಬ್ಲ್ಯಾಕ್​ಮೇಲ್ ಪ್ರಕರಣ: ಆರೋಪಿ ಮೊಬೈಲ್​ನಲ್ಲಿದ್ದವು ನೂರಾರು ವಿಡಿಯೋಸ್​​

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.