ETV Bharat / crime

ಕಾರಿನ ಬಾನೆಟ್ ಮೇಲೆ ಟ್ರಾಫಿಕ್​ ಪೊಲೀಸ್ ​ಸಿಬ್ಬಂದಿಯನ್ನೇ ಹೊತ್ತೊಯ್ದ ಭೂಪ

author img

By

Published : Jul 1, 2021, 2:23 PM IST

ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ ಟ್ರಾಫಿಕ್​ ಪೊಲೀಸ್ ​ಸಿಬ್ಬಂದಿಯನ್ನೇ ಚಾಲಕ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಬಿಹಾರದಲ್ಲಿ ನಡೆದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Patna AIIMS doctor drags traffic cop on car bonnet
ಕಾರಿನ ಬ್ಯಾನೆಟ್ ಮೇಲೆ ಟ್ರಾಫಿಕ್​ ಪೊಲೀಸ್ ​ಸಿಬ್ಬಂದಿಯನ್ನೇ ಹೊತ್ತೊಯ್ದ ಭೂಪ

ಪಾಟ್ನಾ (ಬಿಹಾರ): ವೇಗವಾಗಿ ಬರುತ್ತಿದ್ದ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ ಟ್ರಾಫಿಕ್​ ಪೊಲೀಸ್ ​ಸಿಬ್ಬಂದಿಯನ್ನೇ ಚಾಲಕ ಕಾರಿನ ಬಾನೆಟ್ ಮೇಲೆ ಹೊತ್ತು ಕ್ರಮಿಸಿದ ಘಟನೆ ಬಿಹಾರದ ಪಾಟ್ನಾದಲ್ಲಿ ಜೂನ್ 26 ರಂದು ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಚಾಲಕನನ್ನು ಡಾ. ಕಮಲೇಶ್ ಗುಂಜನ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ಏಮ್ಸ್​​ನಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ತಪ್ಪು ಮಾರ್ಗದಲ್ಲಿ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದನು. ಕಾರನ್ನು ತಡೆಯಲು ಬಂದ ಟ್ರಾಫಿಕ್​ ಪೊಲೀಸ್ ​ಸಿಬ್ಬಂದಿಯನ್ನ 900 ಮೀಟರ್​ ದೂರದ ವರೆಗೆ ಬಾನೆಟ್ ಮೇಲೆ ಹೊತ್ತೊಯ್ದಿದ್ದಾನೆ. ಇದನ್ನು ಕಂಡ ದಾರಿಹೋಕರು ಕಾರಿನ ಮೇಲೆ ಕಲ್ಲು ಎಸೆದು ಕಾರು ನಿಲ್ಲಿಸಿದ್ದಾರೆ.

ಈ ಸಂಬಂಧ ಕಮಲೇಶ್ ಗುಂಜನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.